ಕರ್ನಾಟಕ

ಈ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿವೆ: ಮುತ್ತಪ್ಪ ರೈ

Pinterest LinkedIn Tumblr


ರಾಮನಗರ : ನಾನು ಕಾನೂನಿಗೆ ವಿರುದ್ಧವಾದ ಯಾವುದೇ ಗನ್‌, ರಿವಾಲ್ವರ್‌ಗಳನ್ನು ಹೊಂದಿಲ್ಲ. ಕಾನೂನು ಬಾಹಿರವಾದ ಚಟುವಟಿಕೆಗಳನ್ನೂ ನಡೆಸಿಲ್ಲ. ಆಯುಧ ಪೂಜೆ ದಿನದಂದು ಲೈಸೆನ್ಸ್‌ ಹೊಂದಿರುವ ಆಯುಧಗಳಿಗೆ ಪೂಜೆ ನೆರವೇರಿಸಿದ್ದನ್ನೇ ದೊಡ್ಡ ವಿವಾದವನ್ನಾಗಿ ಮಾಡಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಸ್ಪಷ್ಟನೆ ನೀಡಿದ್ದಾರೆ.

ಬಿಡದಿ ಬಳಿಯ ಅವರ ಮನೆಯಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಬಳಿಯಿರುವ ಗನ್‌, ರಿವಾಲ್ವರ್‌ಗಳ ಲೈಸೆನ್ಸ್‌ ಸರಿಯಾಗಿದೆ. ಅದಕ್ಕೆ ಸಂಬಂಧಿಸಿ ನನ್ನ ಬಳಿ ಇರುವ ದಾಖಲೆಗಳನ್ನು ಸಿಸಿಬಿ ಎದುರು ಹಾಜರುಪಡಿಸಿದ್ದೇನೆ. ಇಲ್ಲಿ ಕಾನೂನು ಉಲ್ಲಂಘಿಸುವ ಯಾವುದೇ ಅಂಶ ಕಂಡು ಬಂದಿಲ್ಲ ಎಂದು ಹೇಳಿದರು.

ಆಯುಧ ಪೂಜೆ ಹಿಂದೂಗಳ ದೊಡ್ಡ ಹಬ್ಬ. ಎಲ್ಲರ ಮನೆಯಲ್ಲಿ ಆಯುಧಗಳನ್ನಿಟ್ಟು ಪೂಜೆ ಮಾಡುವುದು ಸಂಪ್ರದಾಯ. ಮನೆಯಲ್ಲಿರುವ ಕತ್ತಿ, ಗುದ್ದಲಿ, ಆರೆ, ಕೃಷಿಗೆ ಸಂಬಂಧಿಸಿದ ವಸ್ತುಗಳು, ವಾಹನಗಳನ್ನು ಪೂಜೆ ಮಾಡುವುದು ಕ್ರಮ. ಅದರಂತೆ ನಮ್ಮ ಮನೆಯಲ್ಲಿನ ಗನ್‌, ರಿವಾಲ್ವರ್‌ ಹಾಗೂ ವಾಹನಗಳನ್ನು ಪೂಜೆ ಮಾಡಲಾಗಿದೆ. ಈ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿವೆ. ಕೆಲ ಸುದ್ದಿ ವಾಹಿನಿಗಳು ಇದನ್ನೇ ದೊಡ್ಡದಾಗಿಸಿ ಅನಗತ್ಯ ಗೊಂದಲ ಸೃಷ್ಟಿಸಿ ವಿವಾದ ಮಾಡಿದವು. ಇದು ನನಗೆ ತುಂಬಾ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

Comments are closed.