ರಾಷ್ಟ್ರೀಯ

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹೋದರನಿಗೆ ವಿಶೇಷ ಸೌಲಭ್ಯ ನೀಡಿದ್ದಕ್ಕೆ ಪೊಲೀಸರ ಅಮಾನತ್ತು

Pinterest LinkedIn Tumblr


ಥಾಣೆ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹೋದರ ಇಕ್ಬಾಲ್‌ ಕಸ್ಕರ್‌ಗೆ ವಿಶೇಷ ಉಪಚಾರ ಮಾಡಿದ ಆರೋಪದಲ್ಲಿ ಐವರು ಪೊಲೀಸ್‌ ಪೇದೆಗಳನ್ನು ಅಮಾನತ್ತು ಮಾಡಲಾಗಿದೆ.

ಖಾಸಗಿ ಚಾನಲ್‌ ನಡೆಸಿದ ಸ್ಟಿಂಗ್‌ ಆಪರೇಷನ್‌ನಲ್ಲಿ ಸಾಕ್ಷಿ ಸಮೇತ ಭ್ರಷ್ಟಾಚಾರದಲ್ಲಿ ತೊಡಗಿದ್ದ ಇಕ್ಬಾಲ್‌ನನ್ನು ಪೊಲೀಸರು ಬಂಧಿಸಿದ್ದರು. ಆರೋಗ್ಯ ತಪಾಸಣೆ ವೇಳೆ ಆಸ್ಪತ್ರೆಯಲ್ಲಿ ಅವರನ್ನು ವಿಶೇಷ ರೀತಿಯಲ್ಲಿ ನೋಡಿಕೊಂಡಿದ್ದಕ್ಕೆ ಐವರು ಪೇದೆಗಳನ್ನು ಜಂಟಿ ಆಯುಕ್ತ ಮಧುಕರ್ ಪಾಂಡೆ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಾಗೂ ಹಲ್ಲುಗಳ ಸಮಸ್ಯೆಗೆ ಸಂಬಂಧಿಸಿದಂತೆ ಚಿಕಿತ್ಸೆಗಾಗಿ ಇಕ್ಬಾಲ್‌ನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಕ್ಬಾಲ್‌ ತನ್ನ ಸಂಬಂಧಿಕರೊಂದಿಗೆ ಸುತ್ತಾಡುವುದು, ಬಿರಿಯಾನಿ, ಸಿಗರೇಟು ಸೇದುವುದು ಕಂಡು ಬಂದಿತ್ತು. ಇದಿಷ್ಟು ಪೊಲೀಸರ ಎದುರೇ ನಡೆದ ಘಟನೆಯಾಗಿದ್ದು, ಬಳಿಕ ಪೊಲೀಸರಿಗೆ ಹಣ ನೀಡುವುದೂ ಕ್ಯಾಮರಾದಲ್ಲಿ ದಾಖಲಾಗಿದೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್‌ ಇಲಾಖೆ, ತಕ್ಷಣ ಐವರು ಪೊಲೀಸ್‌ ಪೇದೆಗಳನ್ನು ಅಮಾನತ್ತು ಮಾಡಿದೆ. ಈ ಹಿಂದೆಯೂ ಆರೋಗ್ಯದ ನೆಪ ಹೇಳಿ, ತಮ್ಮ ಕಾರ್ಯ ಸಾಧಿಸಿರುವ ಉದಾಹರಣೆಗಳೂ ಚರ್ಚೆಯಾಗಿವೆ. ಬಿಲ್ಡರ್‌ಗಳಿಂದ ಹಣ ವಸೂಲಿ ಮಾಡಿರುವ ಆರೋಪದಲ್ಲಿ ಇಕ್ಬಾಲ್‌ನನ್ನು ಬಂಧಿಸಲಾಗಿತ್ತು.

Comments are closed.