ಎದೆ ಹಾಲು ಕುಡಿಸುವುದರಿಂದ ಮಗುವಿಗೆ ಮಾತ್ರವಲ್ಲದೆ ತಾಯಿಗೂ ಉಪಯೋಗಗಳು ಹೆಚ್ಚು, ಗರ್ಭಧಾರಣೆಯ ಸಮಯದಲ್ಲಿ ತೂಕ ಹೆಚ್ಚಾಗಿದ್ದ ಮಹಿಳೆಯು ಮಗುವಿಗೆ ಹಾಲೂಡಿಸುವುದರಿಂದ ಸಾಮಾನ್ಯ ಸ್ಥಿತಿಗೆ ಬರುತ್ತಾರೆ.
ಎದೆ ಹಾಲು ಕುಡಿಸುವುದರಿಂದ ಮಕ್ಕಳಿಗೆ ವಾಂತಿ, ಭೇದಿ, ಜೀರ್ಣ ಸಮಸ್ಯೆ ಮತ್ತು ಮಲಬದ್ದತೆಯಿಂದ ಮಗುವನ್ನು ರಕ್ಷಿಸುತ್ತದೆ ಹಾಗು ಮೊದಲ 6 ತಿಂಗಳು ಮಗುವಿಗೆ ಕೇವಲ ಎದೆ ಹಾಲು ಉತ್ತಮ.
ಇನ್ನು ಬಹಳ ಮುಖ್ಯವಾಗಿ ಸ್ತನಪಾನ ಮಾಡಿದ ಮಕ್ಕಳ ಮುಂದಿನ ಜೀವನದಲ್ಲಿ ಅವರಿಗೆ ರಕ್ತ ಕ್ಯಾನ್ಸರ್, ಟೈಪ್ ೧ ಡಯಾಬಿಟಿಸ್ ಮತ್ತು ಏರು ರಕ್ತದೊತ್ತಡಗಳಿಂದ ಬಳಲುವುದು ಕಡಿಮೆ.
ಸರಿಯಾಗಿ ಎದೆ ಪ್ರಾಸನವಾದ ಮಕ್ಕಳಿಗೆ ಚುರುಕು ಅಥವಾ ಬುದ್ಧಿ ಹೆಚ್ಚಾಗುತ್ತದೆ ಮತ್ತು ತಾಯಿ ಮಗನ ನಡುವೆ ಅನ್ಯುನತೆಯ ಬಾವನೆ ವೃದ್ದಿಯಾಗುತ್ತದೆ, ಸ್ತನ ಮತ್ತು ಅಂಡಾಣು ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡತ್ತೆ.
ಮಗುವಿನ ಆರೋಗ್ಯ ಕೆಟ್ಟ ಮೇಲೆ ವೈದ್ಯರಿಗೆ ಹಣ ವೆಚ್ಚಮಾಡುವ ಮೊದಲು ಯಾವುದೇ ಖರ್ಚು ಇಲ್ಲದೆ ಸ್ತನಪಾನ ಮಾಡಿಸುವುದು ಉತ್ತಮ ಮತ್ತು ಹಸು ಹಾಲು ಕುಡಿಸುವುದರಿಂದ ಅನೇಕ ಮಕ್ಕಳಲ್ಲಿ ಅಲರ್ಜಿಗೆ ಕಾರಣವಾಗಬಹುದು. ಎದೆಹಾಲು ನೂರಕ್ಕೆ ನೂರರಷ್ಟು ಸುರಕ್ಷಿತ.
Comments are closed.