ಕರ್ನಾಟಕ

ಪ್ರೀತಿ ನಿರಾಕರಿಸಿದ ವಿವಾಹಿತನಿಗೆ ಯುವತಿಯ ಮಾವಂದಿರಿಂದ ನಗ್ನಗೊಳಿಸಿ ಥಳಿತ

Pinterest LinkedIn Tumblr


ಮೈಸೂರು: ಪ್ರೀತಿಸಲು ಒಪ್ಪದ ಯುವಕನ ಮೇಲೆ ಯುವತಿಯ ಮಾವಂದಿರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಾಂಸ್ಕತಿಕ ನಗರಿಯಲ್ಲಿ ನಡೆದಿದೆ.

ಕೆ.ಆರ್. ಮೊಹಲ್ಲಾ ನಿವಾಸಿ ಗೌಸ್ ಫಿರ್ ಹಲ್ಲೆಗೆ ಒಳಗಾಗಿರುವ ವ್ಯಕ್ತಿ. ರೇಷ್ಮಾ ಎಂಬ ಯುವತಿಯ ಮಾವಂದಿರು ಈ ಕೃತ್ಯ ಎಸಗಿದ್ದು, ಗಂಧದ ಮರ ಕಡಿಯಲು ಬಂದಿದರುವುದಾಗಿ ಒಪ್ಪಿಕೊಳ್ಳುವಂತೆ ಹಿಂಸೆ ಕೊಟ್ಟು ಮನಬಂದಂತೆ ಥಳಿಸಿದ್ದಾರೆ.

ವರುಣ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಿಗೆ ಕರೆದ್ಯೂಯ್ದು, ಚಿತ್ರಹಿಂಸೆ ಕೊಟ್ಟ ವಿಡಿಯೋ ಮಾಡಿಕೊಂಡು ಬ್ಲ್ಯಾಕ್​ ಮೇಲ್​ ಮಾಡಿದ್ದಾರೆ ಎಂದು ದೂರಲಾಗಿದೆ.

ಮನೆ ಮುಂದೆ ವಾಸವಿದ್ದ ಯುವತಿ ರೇಷ್ಮಾ ತನ್ನನ್ನು ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದಳು. ಆದರೆ ಗೌಸ್​ ಫಿರ್​ಗೆ ಈಗಾಗಲೇ ಮದುವೆಯಾಗಿದ್ದರಿಂದ ಯುವತಿಯ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದಾನೆ. ಈ ಕಾರಣಕ್ಕೆ ಯುವತಿಯ ಮಾವಂದಿರಾದ ಸಲೀಂ, ಇಮ್ರಾನ್, ಮುಬಾರಕ್, ಸಾಬು ಎಂಬವರು ಆತನನ್ನು ಅಪಹರಿಸಿ, ತೋಟದ ಮನೆಯಲ್ಲಿ ಮರಕ್ಕೆ ಕಟ್ಟಿ ಹಾಕಿ ಬೆತ್ತಲೆ ಮಾಡಿ ಹಲ್ಲೆ ನಡೆಸಿದ್ದಾರೆ.

ಈ ಕುರಿತು ಸಂತ್ರಸ್ತ ಯುವಕ ವಿದ್ಯಾರಣ್ಯಪುರಂ ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಯುವಕ ದೂರಿದ್ದು, ನ್ಯಾಯಕ್ಕಾಗಿ ಹೋರಾಡುತ್ತಿದ್ದಾನೆ.

Comments are closed.