ದುಬೈ: ಕನ್ನಡಿಗರು ದುಬೈ ಇವರ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ-2018 ನವಂಬರ್ 9ರಂದು ದುಬೈಯ ಕ್ರೆಡಿಯನ್ಸ್ ಹೈಸ್ಕೂಲ್ ಸಭಾಂಗಣದಲ್ಲಿ ಸಂಜೆ 4.30 ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಬಣೆಯಿಂದ ಜರಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಂಬೂಲ ಜ್ಯೋತಿಷಿಯವರಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಚಂದನವನದ ಖ್ಯಾತ ನಾಯಕ ನಟರಾದ ಶ್ರೀ ರವಿಚಂದ್ರನ್, ಗೌರವ ಅತಿಥಿಗಳಾಗಿ ಮೂಡಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಂಚಲಕರಾದ ಡಾ.ಮೋಹನ್ ಆಳ್ವ ಹಾಗು ಅತಿಥಿಗಳಾಗಿ ಚಂದನವನದ ತಾರೆ ಶ್ರೀಮತಿ ಅಪರ್ಣಾ ,ಸಮಾಜ ಸೇವಕರಾದ ಶ್ರೀ ಹರೇಕಳ ಹಾಜಬ್ಬ ಭಾಗವಹಿಸಲಿದ್ದಾರೆ. “ಕನ್ನಡ ಕಲಾರತ್ನ” ಸಿನಿಮಾ ನಟ ರವಿಚಂದ್ರನ್ ಹಾಗೂ “ಕನ್ನಡ ರತ್ನ” ಮೋಹನ್ ಆಳ್ವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ವಿಶೇಷವಾಗಿ ಹಾಸ್ಯ ಪ್ರಹಸನಗಾರರಾದ ಶ್ರೀ ನಾಗರಾಜ ಕೋಟೆ ಅವರಿಂದ ಹಾಸ್ಯ ಹಾಗು ವಿವಿಧ ಸಂಗೀತ,ನೃತ್ಯ ವೈವಿಧ್ಯಗಳು ಜರಗಲಿದೆ. ಕನ್ನಡಭಿಮಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಈ ಮೂಲಕ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿರಿ.
ಸಧನ್ ದಾಸ್:- 0507576238
ಅರುಣ್ ಕುಮಾರ್:- 0569916774
ಮಲ್ಲಿಕಾರ್ಜುನ್ ಅಂಗಡಿ:-0558223389
ಸುಕೇಶ ವಿರೇಂದ್ರ ಬಾಬು:-0529929019
ಮಲ್ಲಿಕಾರ್ಜುನ ಗೌಡ:-0502433263
ಉಮ ವಿದ್ಯಾಧರ್:- 0508892487
Comments are closed.