ಬೆಂಗಳೂರು: ಮರಾಠಿ ಪತ್ರಿಕೆಯಲ್ಲಿ `ದಿ ವಿಲನ್’ ಚಿತ್ರದ ಪೇಪರ್ ಜಾಹೀರಾತಿಗೆ ನಟ ಕಿಚ್ಚ ಸುದೀಪ್ ಖುಷಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ವಿಲನ್ ಟೀಮ್ ಸದಸ್ಯರ ವಿರುದ್ಧವೂ ಕಿಡಿಕಾರಿದ್ದಾರೆ.
ಟ್ವೀಟ್ ಮೂಲಕ ಕಿಡಿಕಾರಿರುವ ಕಿಚ್ಚ ಸುದೀಪ್, ದಿ ವಿಲನ್ ಬಗ್ಗೆ ಮರಾಠಿ ಪತ್ರಿಕೆಗಳಲ್ಲಿ ಇಂದಿಗೂ ಪ್ರಚಾರ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಯಾಕಿಲ್ಲ? ಕಳೆದ ಒಂದು ವಾರದಿಂದ ಇದಕ್ಕೆ ಸಂಬಂಧ ಪಟ್ಟವರೆಲ್ಲರೂ ರಿಲ್ಯಾಕ್ಸ್ ಮೂಡ್‍ಗೆ ಹೋದಂತಿದೆ. ನಿಮಗೆ ನಮ್ಮ ವಿಲನ್ ಟೀಮ್ ಸದಸ್ಯರು ಯಾರಾದರೂ ಸಿಕ್ಕಲ್ಲಿ ನಾನು ಅವ್ರನ್ನ ಸಂಪರ್ಕಿಸುವುದಕ್ಕೆ ಪ್ರಯತ್ನ ಪಡುತ್ತಿದ್ದೇನೆ ಅಂತಾ ತಿಳಿಸಿ ಎಂದು ಪೋರಕ್ಷವಾಗಿ ಚಿತ್ರತಂಡಕ್ಕೆ ಟಾಂಗ್ ಕೊಟ್ಟಿದ್ದಾರೆ.
ಪರಭಾಷಿಗರೇ ಕನ್ನಡ ಸಿನಿಮಾವನ್ನು ಪ್ರಮೋಟ್ ಮಾಡುತ್ತಿದ್ದಾರೆ. ಆದರೆ ನಮ್ಮವರಿಗೆ ಸಿನಿಮಾ ಮರೆತೇ ಹೋಗಿದೆ ಎನ್ನುವುದನ್ನು ಟ್ವಿಟ್ಟರ್ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಕಳೆದ ತಿಂಗಳು 18 ರಂದು ‘ದಿ ವಿಲನ್’ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿತ್ತು. ಈಗ ಸಿನಿಮಾ ಪ್ರಮೋಟ್ ಕಡಿಮೆ ಮಾಡಿರುವುದೇ ಕಿಚ್ಚ ಅವರ ಕೋಪಕ್ಕೆ ಕಾರಣವಾಗಿದೆ.
Comments are closed.