ವಾಷಿಂಗ್ಟನ್: ಅಮೇರಿಕ ಅಧ್ಯಕ್ಷರಾಗಿದ್ದ ಒಬಾಮ ಕೇವಲ ತಮ್ಮ ಆಡಳಿತದ ಮೂಲಕ ಮಾತ್ರವಲ್ಲದೇ ಅವರಿಗಿದ್ದ ಕೌಂಟಬಿಕ ಬದ್ಧತೆ ಬಗ್ಗೆ ಕೂಡ ಇತರರಿಗೆ ಆದರ್ಶವಾಗಿದ್ದರು.
30 ವರ್ಷಗಳ ಮಿಶೆಲ್ ಒಬಾಮ ಜೊತೆ ಸುಖ, ದುಃಖ ಹಂಚಿಕೊಂಡ ಇವರ ದಾಂಪತ್ಯದ ಜೀವನದಲ್ಲಿ ಅಪಸ್ವರ ಮೂಡಿ, ದೂರಾಗುವ ನಿರ್ಧಾರ ಕೂಡ ಮಾಡಲಾಗಿತ್ತು ಎಂಬ ತಮ್ಮ ಸತ್ಯವನ್ನು ಮಿಶೆಲ್ ಒಬಾಮಾ ಹೊರ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ಕೌಟಂಬಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ
ತಮ್ಮ ಸುದೀರ್ಘ ದಾಂಪತ್ಯದ ಬಗ್ಗೆ ಪೀಪಲ್ ಮ್ಯಾಗಜಿನ್ಗೆ ಸಂದರ್ಶನ ನೀಡಿರುವ ಮಿಶೆಲ್, ನಮ್ಮಿಬ್ಬರಿಗೂ ವೈವಾಹಿಕ ಜೀವನ ಕುರಿತು ನಾವು ಆಪ್ತಸಮಾಲೋಚಕರ ಬಳಿ ಸಲಹೆ ಪಡೆದಿದ್ದೇವು ಎಂದು ತಿಳಿಸಿದ್ದಾರೆ.
“ಸಮಾಜದಲ್ಲಿ ನಮ್ಮಿಬ್ಬರ ದಾಂಪತ್ಯದದ ಜೀವನ ಬೇರೆ ಅವರಿಗೆ ಮಾದರಿ ಆಗಿದೆ. ಇದಕ್ಕಾಗಿ ನಾವಿಬ್ಬರು ತಮ್ಮ ಜೀವನದಲ್ಲಿ ಬದ್ಧತೆಯಿಂದ ಇರಬೇಕಾಗುತ್ತದೆ. ಗಂಡ-ಹೆಂಡತಿ ನಡುವೆ ಕೆಲವೊಮ್ಮೆ ಭಿನ್ನಾಭಿಪ್ರಾಯ ಮೂಡಿ ಆ ಸಂಬಂಧದಿಂದ ಹೊರಬರಬೇಕು ಎಂದು ಅನಿಸುತ್ತದೆ. ಅದು ಸಾಮಾನ್ಯ. ಈ ರೀತಿ ಭಾವನೆ ನನಗೂ ಕೂಡ ಬಂದಿತ್ತು” ಎಂದಿದ್ದಾರೆ.
ಆ ರೀತಿಯ ವಿಭಿನ್ನ ಸಂದರ್ಭಗಳು ಬಂದವು. ನಾನು ಕೂಡ ಆ ರೀತಿ ಯೋಚಿಸಲಿಲ್ಲ ಎಂದಲ್ಲ. ಈ ಬಗ್ಗೆ ನಾನು ಸಮಾಧಾನವಾಗಿ ನನ್ನ ನಿರ್ಧಾರ ಬಗ್ಗೆ ಹಲವಾರು ಯೋಚಿಸಿದೆ ಎಂದು ಅವರು ತಿಳಿಸಿದರು.
ಆಪ್ತ ಸಮಾಲೋಚನೆ ಬಳಿಕ “ನಾವಿಬ್ಬರು ನಮ್ಮ ವಿಭಿನ್ನ ಚಿಂತನೆ ಕುರಿತು ಚರ್ಚಿಸಿದ್ದೇವು. ಈ ಮೂಲಕ ನನ್ನ ಸಂತೋಷವನ್ನು ಹೇಗೆ ಗಳಿಸುವುದು ಎಂದು ಕಲಿತೆ. ಇದರ ಮೇಲೆ ಕೆಲಸ ಶುರು ಮಾಡಲು ಕಲಿತೆ. ನಾನು ಒಬಾಮ ಬದಲು ಇತರೆ ಜನರಿಂದ ಸಹಾಯವನ್ನು ಕೇಳಲು ಶುರುಮಾಡಿದೆ” ಎಂದರು.
1992ರಲ್ಲಿ ಬರಾಕ್ ಒಬಾಮ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರುಯ. 26 ವರ್ಷದ ಸುದೀರ್ಘ ದಾಂಪತ್ಯವನ್ನು ಹೊಂದಿರುವ ಇವರಿಗೆ ಮಲಿಯ ಅನ್ ಮತ್ತು ಸಶಾ ಒಬಾಮ ಎಂಬ ಇಬ್ಬರು ಮಕ್ಕಳಿದ್ದಾರೆ.
Comments are closed.