ಕರ್ನಾಟಕ

ಯುವತಿ ಸ್ನಾನ ಮಾಡುವಾಗ ಬೆತ್ತಲೆ ಫೋಟೊ ತೆಗೆದು ಬ್ಲಾಕ್​ಮೇಲ್​, ದೈಹಿಕ ಸಂಪರ್ಕಕ್ಕೆ ಒತ್ತಾಯ: ಕೊಲೆಯಲ್ಲಿ ಅಂತ್ಯಕಂಡ ಘಟನೆ

Pinterest LinkedIn Tumblr


ಚಿಕ್ಕಮಗಳೂರು: ಪಕ್ಕದ ಮನೆಯ ಯುವತಿಯ ಜೊತೆ ಸಂಬಂಧಕ್ಕಾಗಿ ತಪ್ಪು ದಾರಿ ತುಳಿದ ಯುವಕನಿಗೆ ಸರಿಯಾಗಿ ಬುದ್ದಿ ಕಲಿಸಬೇಕು ಎಂದು ನಿರ್ಧರಿಸಿದ್ದ ಯುವತಿ ಮನೆಯವರು ಪ್ಲಾನ್​ನಂತೆ ಯುವಕನಿಗೆ ಫೋನ್​ ಮಾಡಿಸಿದ್ದರು. ತನ್ನ ಆಸೆಯ ಹುಡುಗಿ ಮಾಡಿದ ಆ ಒಂದು ಫೋನ್​ ಕರೆ ಕೇಳಿ ಆಶೆಯಿಂದ ಮುನ್ನೂರು ಕಿ.ಮೀ ಸಾಗಿ ಬಂದ ಯುವಕ ಆತ ಎಣಿಸಿದ್ದಕ್ಕಿಂತ ಮಿಗಿಲಾಗಿ ಒಂದು ಅನಾಹುತ ಅಲ್ಲಿ ನಡೆದು ಹೋಯಿತು.

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಾವಣಗರೆ ಮೂಲದ ರುದ್ರಸ್ವಾಮಿ ಎಂಬ ವ್ಯಕ್ತಿ ಮನೆಯ ಪಕ್ಕದಲ್ಲಿದ್ದ ಯುವತಿ ಆಶಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಈತ ಆಕೆಯನ್ನು ಓಲೈಸಿಕೊಳ್ಳಲು ಆಕೆ ಸ್ನಾನಮಾಡುವಾಗ ಬೆತ್ತಲೆ ಫೋಟೊ ತೆಗೆದು ಬ್ಲಾಕ್​ಮೇಲ್​ ಮಾಡುತ್ತಿದ್ದ. ತನ್ನ ಜೊತೆ ದೈಹಿಕ ಸಂಪರ್ಕ ಬೆಳೆಸದಿದ್ದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ. ಅಷ್ಟೇ ಅಲ್ಲದೇ, ದುಡ್ಡಿಗೂ ಪೀಡಿಸುತ್ತಿದ್ದ. ಇದರಿಂದ ರೋಸಿ ಹೋಗಿದ್ದ ಯುವತಿ ತನ್ನ ಮನೆಯವರಿಗೆ ವಿಷಯ ತಿಳಿಸಿದಳು.

ಇಲ್ಲಿಂದ ಶುರುವಾಯಿತು ಅಸಲಿ ಕಥೆ:

ವಿಷಯ ತಿಳಿದ ಯುವತಿ ಮನೆಯವರು ಹುಡುಗನಿಗೆ ಕರೆ ಮಾಡಿ ಈ ಕುರಿತು ಚರ್ಚಿಸೋಣ ಎಂದು ಯುವಕನನ್ನು ದಾವಣಗೆರೆಗೆ ಕರೆಸಿದ್ದಾರೆ. ಊರಿಗೆ ಬಂದ ಯುವಕನಿಗೆ ತೋಟಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಕರೆದೊಯ್ಡು ಹುಡುಗಿ ತಮ್ಮ, ಅಪ್ಪ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಕೊಲೆ ನಂತ್ರ ನಡಿತು ಮಾಸ್ಟರ್​ ಪ್ಲಾನ್​

ರುದ್ರಸ್ವಾಮಿ ಕೊಲೆ ಮಾಡಿದ ಆಶಾ ಮನೆಯವರಿಗೆ ಆತನ ದೇಹ ಮುಚ್ಚಿಡುವುದೇ ದೊಡ್ಡ ತಲೆನೋವಾಗಿದೆ. ಇದಕ್ಕಾಗಿ ಅವರೊಂದು ಮಾಸ್ಟರ್​ ಪ್ಲಾನ್​ ಕೂಡ ನಡೆಸಿದರು. ಸತ್ತ ಯುವಕನ ರುಂಡ, ಮುಂಡವನ್ನು ಬೇರ್ಪಡಿಸಿದ್ದಾರೆ.

ಒಂದು ಚೀಲದಲ್ಲಿ ರುಂಡ ಮತ್ತೊಂದು ಚೀಲದಲ್ಲಿ ದೇಹ ಹಾಕಿದ್ದಾರೆ. ಈ ಎರಡು ಚೀಲವನ್ನು ಚನ್ನಗಿರಿಯಿಂದ 80 ಕಿ.ಮೀ ದೂರವಿರುವ ಅಜ್ಜಂಪರ ಸಮೀಪದ ಬುಕ್ಕರಾಯನ ಕೆರೆಗೆ ತಂದು ಒಂದು ಚೀಲ ಒಂದು ಕಡೆ, ಮತ್ತೊಂದು ಚೀಲವನ್ನು ಮತ್ತೊಂದು ಕಡೆ ಎಸೆದಿದ್ದಾರೆ. ಅಷ್ಟೇ ಅಲ್ಲದೇ ಚೀಲ ನೀರಿನಲ್ಲಿ ತೇಲಬಾರದು ಎಂದು ಕಲ್ಲನ್ನು ತುಂಬಿದ್ದಾರೆ. ಬಳಿಕ ಕಾರನ್ನು ನೀಲಗಿರಿ ತೋಪಿಗೆ ಬಿಟ್ಟು ಹೋಗಿದ್ದಾರೆ

ಕಾರನ್ನು ಪತ್ತೆ ಮಾಡಿದ ಪೊಲೀಸರು ಅದರಲ್ಲಿದ್ದ ರಕ್ತದ ಕಲೆ ಹಾಗೂ ನಂಬರ್​ ಪ್ಲೇಟ್​ ಹಿಡಿದು ತನಿಖೆ ನಡೆಸಿದಾಗ ಪ್ರಕಣದ ಜಾಡು ಬಿಚ್ಚಿಕೊಂಡಿದೆ. ಕಡೆಗೆ ಈಗ ಆಶಾ ಮತ್ತು ಅವರ ತಂದೆ, ಅಣ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ಧಾರೆ.

Comments are closed.