ಲಂಡನ್: ಇಂಗ್ಲೆಂಡಿನ 43 ವರ್ಷದ ಮಹಾತಾಯಿಯೊಬ್ಬರು 21ನೇ ಮಗುವಿಗೆ ಜನ್ಮ ನೀಡಿ ಇದು ಲಾಸ್ಟ್ ಎಂದು ಹೇಳುವುದರ ಮೂಲಕ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ.
ಸ್ಯೂ ರಾಡ್ಫೋರ್ಡ್ 21ನೇ ಮಗುವಿಗೆ ಜನ್ಮ ನೀಡಿದ ಮಹಿಳೆ. 20 ಮಕ್ಕಳನ್ನು ಪಡೆದು ರಾಡ್ಫೋರ್ಡ್ ಕುಟುಂಬ ಯುಕೆಯಲ್ಲೇ ಅತಿ ದೊಡ್ಡದಾದ ಕುಟುಂಬ. ಸದ್ಯ ಈ ಕುಟುಂಬಕ್ಕೆ 21ನೇ ಸದಸ್ಯ ಎಂಟ್ರಿ ನೀಡಿದ್ದು, ರಾಡ್ಫೋರ್ಡ್ ಇದು ಲಾಸ್ಟ್ ಮಗು ಎಂದು ತಿಳಿಸಿದ್ದಾರೆ.
ರಾಡ್ಫೋರ್ಡ್ ನ.6ರಂದು ತನ್ನ 21ನೇ ಮಗು ಬೋನಿ ರಾಯೈಗೆ ಜನ್ಮ ನೀಡಿದ್ದಾರೆ. ಬೋನಿ ಜನ್ಮದಿಂದ ಈಗ ನನ್ನ ಕುಟುಂಬದಲ್ಲಿ 23 ಮಂದಿ ಆಗಿದ್ದಾರೆ. ಸದ್ಯ ನಾನು ಹಾಗೂ ನನ್ನ ಪತಿ ಇನ್ನು ಮಗು ಬೇಡ ಎಂದು ನಿರ್ಧರಿಸಿದ್ದೇವೆ. ಬೋನಿ ನಮ್ಮ ಕುಟುಂಬವನ್ನು ಕಂಪ್ಲೀಟ್ ಮಾಡಿದ್ದಾಳೆ ಎಂದು ಹೇಳಿ ಸಂಭ್ರಮಿಸಿದ್ದಾರೆ.
ನಾವು ಎರಡು ಅಥವಾ ಮೂರು ಮಗುವನ್ನು ಪಡೆಯಲು ಮಾತ್ರ ನಿರ್ಧರಿಸಿದ್ದೇವು. ಆದರೆ ನಾವು ಈಗ 21 ಮಗುವನ್ನು ಪಡೆದಿದ್ದೇವೆ. ನನ್ನ ಎಲ್ಲ ಮಕ್ಕಳು ತಮ್ಮ ಮೂರು ದಶಕದ ಕಿರಿಯ ಸಹೋದರಿಯನ್ನು ನೋಡಲು ನನ್ನ ಎಲ್ಲ ಮಕ್ಕಳು ಖುಷಿಯಾಗಿದ್ದಾರೆ ಎಂದು ರಾಡ್ಫೋರ್ಡ್ ಹೇಳಿದ್ದಾರೆ.
ತಮ್ಮ ಸಹೋದರಿಯನ್ನು ನೋಡಲು ಎಲ್ಲರೂ ಜಗಳವಾಡಿದರು. ನಂತರ ನಾವು ಮಗುವನ್ನು ಮನೆಗೆ ಕರೆದುಕೊಂಡು ಬಂದಾಗ ಎಲ್ಲರೂ ಮಗುವನ್ನು ನೋಡಲು ಸರದಿಯಲ್ಲಿ ನಿಂತಿದ್ದರು. ನಾವು ಮೂರು ಮಕ್ಕಳು ಪಡೆಯಲು ನಿರ್ಧರಿಸಿದ್ದೇವು. ರಾಡ್ಫೋರ್ಡ್ ಒಂಬತ್ತನೇ ಮಗುವಿಗೆ ಜನ್ಮ ನೀಡಿದ ನಂತರ ಕೆಲವು ವರ್ಷಗಳ ಹಿಂದೆ ನಾನು ಸಂತಾನಹರಣ ಮಾಡಿಸಲು ನಿರ್ಧರಿಸಿದೆ. ಆದರೆ ನನಗೆ ತಂದೆಯಾಗುವ ಬಯಕೆಯಿತ್ತು. ಹಾಗಾಗಿ ನಾನು ಈ ನಿರ್ಧಾರದಿಂದ ಹಿಂದೆ ಸರಿದೆ ಎಂದು ರಾಡ್ಫೋರ್ಡ್ ಪತಿ ತಿಳಿಸಿದ್ದಾರೆ.
ರಾಡ್ಫೋರ್ಡ್ ಹಾಗೂ ಆಕೆಯ ಪತಿ ಮೋರ್ ಕ್ಯಾಂಬೇಯಲ್ಲಿ ಮಕ್ಕಳ ಸಹಾಯದಲ್ಲಿ ಬೇಕರಿ ನಡೆಸುತ್ತಿದ್ದಾರೆ. ನಾನು ಮತ್ತೆ ಗರ್ಭಿಣಿಯಾಗುವುದನ್ನು ಮಿಸ್ ಮಾಡುತ್ತೇನೆ ಎಂದಿದ್ದಾರೆ. ಸದ್ಯ ರಾಡ್ಫೋರ್ಡ್ 7ನೇ ವಯಸ್ಸಿನಲ್ಲಿದ್ದಾಗ ತನ್ನ ಪತಿ ನಿಯೋಲ್‍ಯನ್ನು ಭೇಟಿಯಾಗಿದ್ದರು. 14ನೇ ವಯಸ್ಸಿಗೆ ರಾಡ್ಫೋರ್ಡ್ ಮೊದಲನೇ ಗಂಡು ಮಗುವಿಗೆ ಜನ್ಮ ನೀಡಿದ್ದು ಆತನಿಗೆ ಈಗ 29 ವರ್ಷ. ರಾಡ್ಫೋರ್ಡ್ ತನ್ನ ಜೀವನದಲ್ಲಿ ಒಟ್ಟು 800 ವಾರ ಗರ್ಭಿಣಿಯಾಗಿದ್ದರು.
ಕ್ರಿಸ್, ಸೋಫಿ, ಕ್ಲೋಯ್, ಜ್ಯಾಕ್, ಡೇನಿಯಲ್, ಲ್ಯೂಕ್, ಮಿಲ್ಲಿ, ಕೇಟೀ, ಜೇಮ್ಸ್, ಎಲ್ಲೀ, ಐಮೀ, ಜೋಶ್, ಮ್ಯಾಕ್ಸ್, ಟೆಲ್ಲೀ, ಆಸ್ಕರ್, ಕ್ಯಾಸ್ಪರ್, ಹ್ಯಾಲೀ, ಫೋಬೆ ಮತ್ತು ಆರ್ಚೀ ಅವರ ಮಕ್ಕಳ ಹೆಸರಾಗಿದ್ದು, ಸೋಫಿ ಮೂರು ಮಕ್ಕಳ ತಾಯಿ. ಸದ್ಯ ರಾಡ್ಫೋರ್ಡ್ ಈಗ ಅಜ್ಜಿ ಆಗಿದ್ದಾರೆ. ರಾಡ್ಫೋರ್ಡ್ ಡೆಲಿವರಿಗೆ ಆಸ್ಪತ್ರೆಗೆ ಹೋದಾಗ, ಮುಂದಿನ ವರ್ಷ ಬರುತ್ತೀರಾ ಎಂದು ಸಿಬ್ಬಂದಿ ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಇಲ್ಲವೆಂದು ಉತ್ತರಿಸಿದ್ದರು. ಆದರೆ ಹಿಂದಿನ ವರ್ಷ 20ನೇ ಮಗು ಜನಿಸಿದಾಗ ಕೂಡ ರಾಡ್ಫೋರ್ಡ್ ಇದೇ ಉತ್ತರ ನೀಡಿದ್ದರು ಎಂದು ವರದಿಯಾಗಿದೆ.
Comments are closed.