ಕರಾವಳಿ

” ಕೋಪ ಕಡಿಮೆಯಾಗಲು ಜಸ್ಟ್ ಅಪ್ಪಿಕೊಳ್ಳಿ” ಸಂಸಾರ ಆನಂದ ಸಾಗರವಾಗುವ ಸೂತ್ರ..!

Pinterest LinkedIn Tumblr

ಲೈಫ್ ಅಲ್ಲಿ ಒಳ್ಳೆ ಸಂಗಾತಿ ಸಿಕ್ಕಿ ಬಿಟ್ಟರೆ ಸಾಕು ಅದಕ್ಕಿಂತ ಅದೃಷ್ಟ ಬೇಕಾ? ಲೈಫೇ ಬೊಂಬಾಟ್ ಆಗಿ ಇರುತ್ತದೆ. ಲೈಫ್ ನಲ್ಲಿ ಬರೋ ಸಣ್ಣ ಸಣ್ಣ ಸಂತಸಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇರದು. ಅಂತಹ ಆನಂದದ ರುಚಿ ಕಂಡರೆ ಅಂತವರ ಮನಸಲ್ಲಿ ನೆಮ್ಮದಿಯ ರಂಗೋಲಿ ಮೂಡುತ್ತದೆ. ಸಂಗಾತಿಯ ಕೆಲವೊಂದು ಚಿಕ್ಕ ಚಿಕ್ಕ ವರ್ತನೆಗಳಿಂದ ಸಂಭಂದ ಹಳಸುವುದು ಹೆಚ್ಚು. ವೈವಾಹಿಕ ಜೀವನದಲ್ಲಿ ಕೆಲವೊಂದು ಚಿಕ್ಕ ಚಿಕ್ಕ ಅಭ್ಯಾಸ ರೂಢಿಸಿಕೊಳ್ಳಿ ನಿಮ್ಮ ಸಂಸಾರ ಆನಂದ ಸಾಗರವಾಗುತ್ತದೆ.

ನಂಬಿಕೆ ಮತ್ತು ಕ್ಷಮಿಸೋದನ್ನು ಕಲಿಯಿರಿ:
ನಂಬಿಕೆ ಜೀವನದ ನಂದಾ ದೀಪ ಅನ್ನೋ ಮಾತು ನೂರಕ್ಕೆ ನೂರರಷ್ಟು ಸತ್ಯ. ನಂಬಿಕೆ ಮತ್ತು ಕ್ಷಮೆ ಇಲ್ಲದೆ ಇರೋ ಸಂಭಂದಗಳೆ ಇಲ್ಲ. ಸಣ್ಣ ಸಣ್ಣ ತಪ್ಪುಗಳನ್ನು ಮನಸಲ್ಲೇ ಕೂಡಿ ಹಾಕಿ ಜಗಳ ಬಂದಾಗ ಅದನ್ನು ಒಂದೊಂದಾಗಿ ಹೇಳಿ ಜಗಳವನ್ನು ದೊಡ್ಡದಾಗಿಸುವ ಬದಲು ಅದನ್ನು ಅವರಿಗೆ ಮನದಟ್ಟು ಮಾಡಲು ಅವರನ್ನು ಕ್ಷಮಿಸುತ್ತಾ ಹೋಗಿ ಅವರು. ಆಗ ಅವರಿಗೆ ಅವರ ತಪ್ಪು ಮನದಟ್ಟಾಗುತ್ತದೆ. ನೀವು ಇಟ್ಟಿರುವ ಪ್ರೀತಿ ತಿಳಿಯುತ್ತದೆ. ನಿಮ್ಮ ಜೀವನ ಚೆನ್ನಾಗಿ ಇರುತ್ತದೆ. ಹೆಚ್ಚಾಗಿ ಪುರುಷರಿಗೆ ತನ್ನ ಹೆಂಡತಿ ಅವರು ಅಂದುಕೊಂಡ ರೀತಿಯಲ್ಲೇ ಇರಬೇಕೆಂಬ ಆಸೆ ಇರುತ್ತದೆ ಅದರಂತೆ ನಡೆದುಕೊಂಡರೆ ಅವರು ನಿಮ್ಮ ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸುತ್ತಾರೆ. ಒಂದಲ್ಲ ಒಮ್ಮೆ ದೊಡ್ಡ ತಪ್ಪುಗಳನ್ನು ಕ್ಷಮಿಸಿ ಅವರ ಪ್ರೀತಿಯನ್ನು ತೋರಿಸುತ್ತಾರೆ.

ಸಂಗಾತಿ ಮಾಡಿದ ತಪ್ಪನ್ನೇ ಪದೇ ಪದೇ ಎತ್ತಾಡಬೇಡಿ:
ಮನುಷ್ಯರು ಅಂದ್ರೆ ತಪ್ಪು ಮಾಡದೇ ಯಾರು ಇರುವುದಿಲ್ಲ. ಅವರು ಮಾಡಿದ ತಪ್ಪನ್ನೇ ಪದೇ ಪದೇ ಹೇಳುತ್ತಿದ್ದರೆ ಇನ್ನೊಂದು ದಿನ ಅವರು ತಪ್ಪು ಮಾಡಿದಾಗ ಅವರು ಅದನ್ನೇ ಮಾಡಲು ಮುಂದಾಗುತ್ತಾರೆ. ಸಂಭಂದ ಹಳಸಲು ಮುಖ್ಯ ಕಾರಣವಾಗುತ್ತದೆ. ಮಾಡಿದ ತಪ್ಪಿಗೆ ಆಗಲೇ ಅವರಿಗೆ ಮನದಟ್ಟಾಗುವಂತೆ ಹೇಳಿ ಅಲ್ಲಿಯೇ ಬಿಟ್ಟು ಬಿಡಿ. ಅದನ್ನೆ ಎತ್ತಾಡುತ್ತಿರಬೇಡಿ.

ಒಂದೇ ಟೈಂಗೆ ಇಬ್ಬರು ಮಲಗಿ:
ಪತಿ ಮಲಗಗಿರುವಾಗ ಪತ್ನಿ ಟಿವಿಲೀ ಮಗ್ನರಾಗೋದು. ಪತ್ನಿ ಮಲಗಿದಾಗ ಪತಿ ಕಂಪ್ಯೂಟರ್ ನಲ್ಲಿ ಕೆಲ್ಸ ಮಾಡೋದು ಮಾಡಿದ್ರೆ ಇನ್ನೆಲ್ಲಿ ಭಾಂದವ್ಯ ಚೆನ್ನಾಗಿರುತ್ತೆ ನೀವೆ ಹೇಳಿ. ಹೊರಗೆ ಕೆಲ್ಸಮಾಡಿ ಪತಿಗೆ, ಒಳಗೆ ಕೆಲ್ಸ ಮಾಡಿ ಪತ್ನಿಗೆ ಸಾಕಾಗಿರುತ್ತದೆ. ನಂತರದ ಸಮಯವಾದ್ರೂ ಇಬ್ಬರು ಒಟ್ಟಿಗೆ ಟಿವಿ ನೋಡುದ್ರೆ, ಸ್ವಲ್ಪಹೊತ್ತು ಪ್ರೀತಿಯಂದ ಮಾತನಾಡಿದ್ದರೆ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಒಳ್ಳೆಯ ಭಾವನೆ ಮೂಡುತ್ತದೆ. ಒಂದೇ ಸಮಯದಲ್ಲಿ ಮಾತನಾಡುತ್ತ ಮಲಗಿದರೆ ದೈಹಿಕ ಆಯಾಸವೂ ಕಡಿಮೆಯಾಗಿ ನೆಮ್ಮದಿಯ ನಿದ್ರೆ ಬರುತ್ತದೆ.

ಜಸ್ಟ್ ಅಪ್ಪಿಕೊಳ್ಳಿ ಕೋಪ ಕಡಿಮೆಯಾತ್ತದೆ:
ನಿಮ್ಮ ಸಂಗಾತಿ ಕೋಪದಲ್ಲಿದ್ದರೆ, ಬೇಸರದಲ್ಲಿದ್ದರೆ ಒಂದೇ ಒಂದೇ ಅಪ್ಪುಗೆ ಮಾಡಿ ಎಲ್ಲ ಮಾಯವಾಗುತ್ತದೆ. ಅವರಿಗೂ ರಿಲೀಫ್ ಆಗುತ್ತದೆ. ಪ್ರೀತಿ ಹೆಚ್ಚುತ್ತದೆ. ಒಂದೇ ಒಂದ್ಸಲ ಟ್ರೈ ಮಾಡಿ ನಿಮ್ಗೆ ಗೊತ್ತಾಗುತ್ತೆ. ಏನಂತಿರಾ?

Comments are closed.