ಚೆನ್ನೈ: ಖ್ಯಾತ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿಯವರು ಪೋಸ್ಟರ್ ನಲ್ಲಿ ಧೂಮಪಾನ ಮಾಡುತ್ತಿರುವ ರೀತಿಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹನ್ಸಿಕಾ ಅಭಿನಯದ 50ನೇ ಚಿತ್ರವಾದ `ಮಹಾ’ ದ ಪೋಸ್ಟರ್ ಕಳೆದ ವಾರವಷ್ಟೇ ಬಿಡುಗಡೆಗೊಂಡಿತ್ತು. ಆದರೆ ಪೋಸ್ಟರ್ ಬಿಡುಗಡೆಯಾದ ಬಳಿಕ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಪೋಸ್ಟರ್ ನಲ್ಲಿ ನಟಿ ಹನ್ಸಿಕಾ ಸಾಧುಗಳ ನಡುವೆ, ಸಿಂಹಾಸನದ ಮೇಲೆ ಕುಳಿತು ಭಂಗಿ ಸೇದುತ್ತಿದ್ದಾರೆ.
ಚಿತ್ರದ ಪೋಸ್ಟರ್ ಬಗ್ಗೆ ಪುಟ್ಟಳ್ಳಿ ಮಕ್ಕಳ ಕಚ್ಚಿ(ಪಿಕೆಎಂ) ಸಂಘಟನೆಯ ಮುಖ್ಯಸ್ಥರಾದ ಜಾನಕಿರಾಮ್ ಎಂಬವರು ಮಹಾ ಸಿನೆಮಾದ ಪೋಸ್ಟರ್ ಜನರ ಧಾರ್ಮಿಕ ಭಾವನೆಯನ್ನು ಕೆರಳಿಸುತ್ತಿದೆ. ಹೀಗಾಗಿ ನಿರ್ದೇಶಕ ಜಮೀಲ್ ಹಾಗೂ ಹನ್ಸಿಕಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.
ಘಟನೆ ಸಂಬಂಧ ಮಹಾ ಚಿತ್ರದ ನಿರ್ದೇಶಕ ಜಮೀಲ್ ಹಾಗೂ ನಟಿ ಇದೂವರೆಗೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹನ್ಸಿಕಾ ತಮ್ಮ 50ನೇ ಸಿನೆಮಾದ ಬಿಡುಗಡೆಯ ನಿರೀಕ್ಷೆಯಲ್ಲಿರುವಾಗಲೇ, ಚಿತ್ರದ ಪೋಸ್ಟರ್ ಶಾಕ್ ನೀಡಿದೆ.
Comments are closed.