ಮನೋರಂಜನೆ

ನಟ ಪ್ರಭಾಸ್​​ ಶೂಟಿಂಗ್​ ಸೆಟ್​ನಲ್ಲಿ ಅನುಷ್ಕಾ ಶೆಟ್ಟಿ

Pinterest LinkedIn Tumblr


‘ಬಾಹುಬಲಿ’ ಚಿತ್ರ ತೆರೆಕಂಡಿದ್ದೇ ತಡ, ಟಾಲಿವುಟ್​ ನಟ ಪ್ರಭಾಸ್​​ ಹಾಗೂ ಅನುಷ್ಕಾ ಶೆಟ್ಟಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆದಿತ್ತು. “ಆ ರೀತಿ ಏನು ಇಲ್ಲ. ನಾವು ಉತ್ತಮ ಗೆಳೆಯರು ಮಾತ್ರ” ಎನ್ನುವ ಸ್ಪಷ್ಟನೆ ಇಬ್ಬರಿಂದ ಕೇಳಿ ಬಂದಿತ್ತು. ಈ ಸುದ್ದಿ ಸದ್ಯ ಬೂದಿ ಮುಚ್ಚಿದ ಕೆಂಡಂದಂತಿದೆ. ಈಗ ಈ ಜೋಡಿ ಮತ್ತೆ ಸುದ್ದಿಯಲ್ಲಿದೆ.

‘ಸಾಹೋ’ ಚಿತ್ರದ ಜೊತೆಗೆ ರಾಧಾ ಕೃಷ್ಣ ಕುಮಾರ್​ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಪ್ರಭಾಸ್ ಅಭಿನಯಿಸುತ್ತಿದ್ದಾರೆ. ಇದು ಅವರ 20ನೇ ಚಿತ್ರ ಎಂಬುದು ವಿಶೇಷ. ಪೂಜಾ ಹೆಗ್ಡೆ ಈ ಚಿತ್ರದ ನಾಯಕಿ. ಇನ್ನೂ ಶೀರ್ಷಿಕೆ ಇಡದ ಈ ಚಿತ್ರದ ಸೆಟ್​ನಲ್ಲಿ ಅನುಷ್ಕಾ ಶೆಟ್ಟಿ ಕೂಡ ಕಾಣಿಸಿಕೊಳ್ಳಲಿದ್ದಾರಂತೆ!

ಅರೆ, ಪೂಜಾ ಜೊತೆ ಅನುಷ್ಕಾ ಕೂಡ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರಾ? ಪ್ರಭಾಸ್​ ಚಿತ್ರದ ಸೆಟ್​ನಲ್ಲಿ ಅನುಷ್ಕಾಗೇನು ಕೆಲಸ ಎಂದು ನೀವು ಕೇಳಬಹುದು. ಅದಕ್ಕೂ ಉತ್ತರವಿದೆ. ಪ್ರಭಾಸ್​ ನಟನೆಯ ಹೊಸ ಚಿತ್ರದಲ್ಲಿ ಅನುಷ್ಕಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೆಲ ತೆಲುಗು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಪ್ರಭಾಸ್​ ಹಾಗೂ ಅನುಷ್ಕಾ ನಡುವೆ ಕೆಲ ರೊಮ್ಯಾಂಟಿಕ್​ ದೃಶ್ಯಗಳು ಇರಲಿವೆಯಂತೆ. ಇಬ್ಬರೂ ಒಂದು ಹಾಡಿಗೆ ಕೂಡ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ್ದಂತೂ ಸುಳ್ಳಲ್ಲ. ಪ್ರಭಾಸ್​ ಅಭಿನಯದ ‘ಸಾಹೋ’ ಚಿತ್ರ 2019ರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತೆರೆಕಾಣುತ್ತಿದೆ. ಹೊಸ ಚಿತ್ರದ ಶೂಟಿಂಗ್​ ಈಗಾಗಲೇ ಆರಂಭಗೊಂಡಿದೆ.

Comments are closed.