‘ಬಿಗ್ ಬಾಸ್’ ಮನೆ ಎಂದರೆ ಹಾಗೇ. ಮನೆಯ ಸದಸ್ಯರಿಗೆ ನಿತ್ಯ ಒಂದಿಲ್ಲೊಂದು ಅಚ್ಚರಿ ಇರುತ್ತದೆ. ಒಳ ಒಳಗೆ ದ್ವೇಷ ಕುದಿಯುತ್ತಿದ್ದರೂ ಆತ್ಮೀಯ ಗೆಳೆಯರಂತೆ ವರ್ತಿಸುತ್ತಾರೆ. ಈ ವಾರದ ಕನ್ನಡ ‘ಬಿಗ್ ಬಾಸ್ 6’ ಕೂಡ ಹಲವು ಅಚ್ಚರಿಗಳಿಗೆ ಕಾರಣವಾಯಿತು. ಮನೆಯ ಒಳಗೆ ಮೂವರು ವಿಶೇಷ ಅತಿಥಿಗಳ ಆಗಮನವಾದರೆ, ಒಬ್ಬರು ಮನೆಯಿಂದ ಹೊರ ನಡೆದರು.
‘ಬಿಗ್ ಬಾಸ್ 6’ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಯಾರು ಬರಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಅದರಂತೆ, ‘ನಾಗಕನ್ನಿಕೆ’ ಧಾರಾವಾಹಿ ನಟಿ ಮೇಘಶ್ರೀ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಸೇರಿದ್ದಾರೆ. ಅಚ್ಚರಿ ಎಂದರೆ ಇವರ ಜೊತೆ, ‘ಬಿಗ್ ಬಾಸ್ 5’ರಲ್ಲಿ ಗೊಂಬೇ ಎಂದೇ ಖ್ಯಾತಿ ಪಡೆದಿದ್ದ ನಿವೇದಿತಾ ಗೌಡ ಹಾಗೂ ಡ್ಯಾನ್ಸರ್ ಜೀವಿತಾ ಕೂಡ ಮನೆ ಪ್ರವೇಶಿಸಿದ್ದಾರೆ.
‘ಬಿಗ್ ಬಾಸ್ 6’ ಓಪನಿಂಗ್ ದಿನ ಕಾರ್ಯಕ್ರಮದ ಅತಿಥಿಯಾಗಿ ನಿವೇದಿತಾ ಕೂಡ ಬಂದಿದ್ದರು. ಆಗ ಈ ಬಾರಿಯೂ ಬಿಗ್ ಬಾಸ್ ಮನೆಗೆ ಹೋಗುವ ಆಶಯ ವ್ಯಕ್ತಪಡಿಸಿದ್ದರು. ಹಾಗಾಗಿ ಅವರಿಗೆ ಈ ಅವಕಾಶ ನೀಡಲಾಗಿದೆ ಎನ್ನಲಾಗುತ್ತಿದೆ. ಇನ್ನು, ಅವರು ಸ್ಪರ್ಧಿಯಾಗಿ ತೆರಳಿದ್ದಾರಾ ಅಥವಾ ಎರಡು ದಿನ ಇದ್ದು ಬರಲು ಮನೆ ಪ್ರವೇಶಿಸಿದ್ದಾರಾ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಮನೆಯಿಂದ ಹೊರ ನಡೆದ ನಯನಾ
ಇನ್ನು, ಶನಿವಾರ ನಡೆದ ಎಲಿಮಿನೇಷನ್ನಲ್ಲಿ ನಯನಾ ಮನೆಯಿಂದ ಹೊರ ನಡೆದಿದ್ದಾರೆ. ಶನಿವಾರ ನಡೆದ ಎಲಿಮಿನೇಷನ್ನಲ್ಲಿ ಅತಿ ಕಡಿಮೆ ಮತ ನಯನಾ ಅವರಿಗೆ ಬಂದಿತ್ತು. ಹಾಗಾಗಿ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ.
Comments are closed.