ಮನೋರಂಜನೆ

ಕೆಜಿಎಫ್ ತಮಿಳು ಆವೃತ್ತಿ ವಿತರಕ, ನಟ ವಿಶಾಲ್‌ ಬಂಧನ!

Pinterest LinkedIn Tumblr


ಚೆನ್ನೈ: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ತಮಿಳು ಭಾಷಾ ವಿತರಕ ವಿಶಾಲ್‌ ಅವರನ್ನು ಪೊಲೀಸರು ಬಂಧಿಸಿದ ಘಟನೆ ಗುರುವಾರ ನಡೆದಿದೆ.

ಕೆಜಿಎಫ್ ಚಿತ್ರದ ಬಿಡುಗಡೆಗೂ ಮುನ್ನ ತಮಿಳುನಾಡು ನಿರ್ಮಾಪಕರ ಸಂಘದ ಕಚೇರಿ ಎದುರು ಹೈಡ್ರಾಮಾ ನಡೆದಿದೆ.

ಸಂಬಂಧವಿಲ್ಲ !

ವಿಶಾಲ್‌ ಅವರ ಬಂಧನಕ್ಕೂ ಕೆಜಿಎಫ್ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ.ನಿರ್ಮಾಪಕರ ಸಂಘದ ಅಧ್ಯಕ್ಷರಾಗಿರುವ ವಿಶಾಲ್‌ ಅವರ ವಿರುದ್ದ ಸಂಘದ ಸದಸ್ಯರು ಬಂಡೆದ್ದಿದ್ದು, ಇದೇ ವಿಚಾರದಲ್ಲಿ ಕಚೇರಿಗೆ ಬರಲು ಅವಕಾಶ ನೀಡಿರಲಿಲ್ಲ. ವಿಶಾಲ್‌ ಅವರು ಕಟ್ಟಡದ ಗೇಟ್‌ ಒಡೆದು ಸಂಘದ ಕಚೇರಿಯೊಳಗೆ ನುಗ್ಗಲು ಯತ್ನಿಸಿದ್ದಾರೆ. ಇದೇ ಕಾರಣಕ್ಕಾಗಿ ವಿಶಾಲ್‌ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ನಾಳೆ ಕೆಜಿಎಫ್ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದ್ದು, ನಿರ್ಮಾಪಕರೂ ಆಗಿರುವ ವಿಶಾಲ್‌ ಚಿತ್ರದ ವಿತರಣೆಯನ್ನು ಪಡೆದಿದ್ದಾರೆ.

Comments are closed.