ನವದೆಹಲಿ: ದೀರ್ಘಾವಧಿಯವರಗೆ(13 ವರ್ಷಗಳ ಕಾಲ) ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಈಗ ಸಾರ್ವಜನಿಕ ಜನರನ್ನು ಮುಕ್ತವಾಗಿ ಭೇಟಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಆಗಿದ್ದ ವೇಳೆ ಹೆಲಿಕಾಫ್ಟರ್, ಖಾಸಗಿ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದ ಶಿವರಾಜ್ ಸಿಂಗ್ ಚೌಹಾಣ್ ಈಗ ಜನಸಾಮಾನ್ಯರೊಂದಿಗೆ ರೈಲಿನಲ್ಲಿ ಸವಾರಿ ಮಾಡುತ್ತಿದ್ದಾರೆ. ಹೌದು, ಮಧ್ಯಪ್ರದೇಶದ ಮಾಜಿ ಸಿಎಂ ಗುರುವಾರ ಭೋಪಾಲ್ನಿಂದ ಬೈನಾಗೆ ರೈಲಿನಲ್ಲಿ ಪ್ರಯಾಣ ಮಾಡಿದರು. ಈ ವೇಳೆ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿ ಬೀಳುತ್ತಿದ್ದರು.
ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ನಂತರ, ಬಿಜೆಪಿ ಶಾಸಕ ಶಿವರಾಜ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ.
ಮಧ್ಯ ಪ್ರದೇಶ ನನ್ನ ದೇವಾಲಯ:
ಇತ್ತೀಚೆಗೆ, ಮಾಜಿ ಮುಖ್ಯಮಂತ್ರಿ ಹೇಳಿದರು, “ಮಧ್ಯಪ್ರದೇಶ ನನ್ನ ದೇವಸ್ಥಾನ, ಮತ್ತು ಇಲ್ಲಿ ಜನರು ನನ್ನ ದೇವರು. ನನ್ನ ಮನೆಯ ಬಾಗಿಲುಗಳು ಈಗಲೂ ಸಹ ರಾಜ್ಯದ ಪ್ರತಿಯೊಬ್ಬ ಪ್ರಜೆಗಳಿಗೆ ಇನ್ನೂ ತೆರೆದಿವೆ, ಅವರು ಯಾವುದೇ ಹಿಂಜರಿಕೆಯಿಲ್ಲದೆ ನನ್ನ ಬಳಿಗೆ ಬರಬಹುದು ಮತ್ತು ಸಾಧ್ಯವಾದಷ್ಟು ಅವರಿಗೆ ಸಹಾಯ ಮಾಡಲು ನಾನು ಪ್ರಯತ್ನಿಸುತ್ತೇನೆ” ಎಂದಿದ್ದರು.
Comments are closed.