ಮನೋರಂಜನೆ

ಕೆಜಿಎಫ್ ಚಿತ್ರ ಪ್ರದರ್ಶನ ವೇಳೆ ಫೇಸ್ ಬುಕ್ ಲೈವ್! ಮೊದಲ ದಿನವೇ ತಟ್ಟಿದ ಪೈರಸಿ ಕಾಟ

Pinterest LinkedIn Tumblr

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಿತ್ರಕ್ಕೂ ಪೈರಸಿ ಕಾಟ ತಟ್ಟಿದ್ದು, ಮುಂಜಾನೆಯೇ ಚಿತ್ರ ಪ್ರದರ್ಶನದ ವೇಳೆ ಪ್ರೇಕ್ಷಕನೋರ್ವ ಚಿತ್ರವನ್ನು ಫೇಸ್ ಬುಕ್ ನಲ್ಲಿ ಲೈವ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ದೇಶಾದ್ಯಂತ ಇಂದು ಕೆಜಿಎಫ್‌ ಚಿತ್ರ ರಿಲೀಸ್ ಆಗಿ ಭಾರೀ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಈಗ ಕೆಜಿಎಫ್ ಸಿನಿಮಾ ಪೈರಸಿ ಕಾಟಕ್ಕೆ ಸಿಲುಕಿದ್ದು, ಬೆಂಗಳೂರಿನ ಥಿಯೇಟರ್ ಒಂದರಿಂದ ಫೇಸ್ಬುಕ್ ಲೈವ್‌ನಲ್ಲಿ ಚಿತ್ರೀಕರಣ ಮಾಡಿ ಹರಿ ಬಿಟ್ಟಿರುವುದು ಬೆಳಕಿಗೆ ಬಂದಿದೆ. ಸಿನಿಮಾ ಶುರುವಾಗುತ್ತಿದ್ದಂತೆಯೇ ಅಭಿಮಾನಿಯೊಬ್ಬರು ಫೇಸ್ಬುಕ್ ನಲ್ಲಿ ಲೈವ್ ಬಂದು, ಸತತ ನಲವತ್ತು ನಿಮಿಷಗಳ ಕಾಲ ಸಿನಿಮಾವನ್ನು ಲೈವ್ ಆಗಿ ಹರಿ ಬಿಟ್ಟಿದ್ದಾರೆ. ಬೆಳಗ್ಗೆ 7:30 ರಿಂದ ಫೇಸ್ಬುಕ್ ನಲ್ಲಿ‌ ಕೆಜಿಎಫ್ ಚಿತ್ರವನ್ನು ಲೈವ್ ನಲ್ಲಿ ತೋರಿಸಿದ್ದಾರೆ. ಅನಿಲ್ ಚಿನ್ನು (Anil Chinnii ) ಅನ್ನೋ ವ್ಯಕ್ತಿ ಫೇಸ್ಬುಕ್ ಲೈವ್ ಮಾಡಿದ್ದಾರೆ ಎನ್ನಲಾಗಿದೆ.

ಅತ್ತ ಅನಿಲ್ ಫೇಸ್ ಬುಕ್ ಲೈವ್ ನಲ್ಲಿ ಚಿತ್ರವನ್ನು ತೋರಿಸುತ್ತಿದ್ದಂತೆಯೇ ಕೆಲ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಮೊದಲು ಲೈವ್ ನಿಲ್ಲಿಸುವಂತೆ ತಾಕೀತು ಮಾಡಿದ್ದಾರೆ.

Comments are closed.