ಮುಂಬೈ: ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಸೊಹ್ರಾಬುದ್ದೀನ್ ಶೇಕ್ ಮತ್ತು ತುಳಸಿರಾಮ್ ಪ್ರಜಾಪತಿ ಎನ್’ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ತೀರ್ಪು ನೀಡಿರುವ ಸಿಬಿಐ ವಿಶೇಷ ನ್ಯಾಯಾಲಯ, ಎಲ್ಲಾ 22 ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಸೂಕ್ತ ಸಾಕ್ಷ್ಯಧಾರಗಳು ಸಿಗದ ಹಿನ್ನಲೆ ಈ ಎನ್ಕೌಂಟರ್ ಅನ್ನು ಕೊಲೆ ಹಾಗೂ ಪಿತೂರಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಸಿಬಿಐ ವಿಶೇಷ ನ್ಯಾ. ಎಸ್ಜೆ ಶರ್ಮಾ ತೀರ್ಪು ನೀಡಿದ್ದಾರೆ. ಅಷ್ಟೇ ಅಲ್ಲದೇ ಸಾಂದರ್ಭಿಕ ಸಾಕ್ಷಿಗಳನ್ನು ಗಣನೆಗೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೂಡ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಸಿಬ್ಬಂದಿಗಳು ಹಾಗೂ ನ್ಯಾಯಾಲಯ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. 210 ಸಾಕ್ಷ್ಯಾಧಾರಗಳು ನ್ಯಾಯಾಲಯದ ಮುಂದೆ ಹಾಜರಾದರು ಅವರು ಸರಿಯಾದ ಮಾಹಿತಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಿಲ್ಲ. ಅಲ್ಲದೇ ಅವರು ಸಾಮಾಧಾನಕರ ಎನ್ನುವಂತಹ ಮಾಹಿತಿಯನ್ನು ನ್ಯಾಯಾಲಯದ ಮುಂದೆ ತಿಳಿಸುವಲ್ಲಿ ವಿಫಲರಾಗಿದ್ದಾರೆ ಎಂದಿದ್ದಾರೆ.
ಇನ್ನು ಪ್ರಕರಣದಲ್ಲಿ ಬಹುತೇಕ ಆರೋಪಿಗಳು ಗುಜರಾತ್ ಹಾಗೂ ರಾಜಸ್ಥಾನದ ಕಿರಿಯಮಟ್ಟದ ಅಧಿಕಾರಿಗಳಾಗಿದ್ದಾರೆ.
ಇದಕ್ಕೆ ಮುಂಚೆಯೇ ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಸಾಕ್ಷಾಧಾರ ಸಿಗದ ಹಿನ್ನಲೆ ವಜಾಗೊಳಿಸಿತು. ಇನ್ನು ಈ ಪ್ರಕರಣದಲ್ಲಿ ಗುಜರಾತ್ ಮಾಜಿ ಗೃಹ ಸಚಿವ ಅಮಿತ್ ಷಾ, ರಾಜಸ್ಥಾನ ಗೃಹ ಸಚಿವ ಗುಲಾಬ್ಚಂದ್ ಕಟಾರಿಯಾ, ಮಾಜಿ ಗುಜರಾತ್ ಪೊಲೀಸ್ ಮುಖ್ಯಸ್ಥ ಪಿಸಿ ಪಾಂಡೆ, ಹಾಗೂ ಗುಜರಾತ್ ಹಿರಿಯ ಅಧಿಕಾರಿ ಡಿಜಿ ವನ್ಜಾರ್ ಹೆಸರು ಕೇಳಿ ಬಂದಿತ್ತು.
ಗುಜರಾತ್ ಪೋಲೀಸರು ನವೆಂಬರ್ 2005 ರಲ್ಲಿ ನಡೆಸಿದ್ದ ಎನ್ ಕೌಂಟರ್ ನಲ್ಲಿ ಶಂಕಿತ ಉಗ್ರ ಸೋಹ್ರಾಬುದ್ದೀನ್ ಶೇಖ್ ಮತ್ತು ಅವರ ಪತ್ನಿ ಕೌಸರ್ ಬೀ ಹತ್ಯೆಯಾಗಿದ್ದರರು. ಇನ್ನು 2006ರಲ್ಲಿ ಸೊಹ್ರಾಬುದ್ದಿನ್ ಸಹಚರ ತುಳಸಿರಾಮ್ ಪ್ರಜಾಪತಿಯನ್ನು ಎನ್ಕೌಂಟರ್ ಮಾಡಲಾಗಿತ್ತು. ಈ ಎರಡು ಎನ್ಕೌಂಟರ್ಗಳು ನಕಲಿ ಎಂಬ ಆರೋಪ ಕೇಳಿ ಬಂದಿತು.
Comments are closed.