ಕರಾವಳಿ

ಶಬರಿಮಲೆ ವಿವಾದ : ಸಂಸದರ ನಿಯೋಗದಿಂದ ರಾಷ್ಟ್ರಪತಿಯವರಿಗೆ ವರದಿ ಸಲ್ಲಿಕೆ

Pinterest LinkedIn Tumblr

ಮಂಗಳೂರು: ಶಬರಿಮಲೆ ಯಾತ್ರೆ ಸಂದರ್ಭದಲ್ಲಿ ಕೇರಳದ ಸಿ.ಪಿ.ಎಂ ಸರಕಾರದಿಂದ ಯಾತ್ರಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲು ಹಾಗೂ ಶಬರಿಮಲೆಯಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಕಲೆ ಹಾಕಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಿಯೋಜಿಸಿದ ಸಂಸದರ ನಿಯೋಗವು ಇಂದು ಸನ್ಮಾನ್ಯ ರಾಷ್ಟ್ರಪತಿ ಶ್ರೀ ರಮಾನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ತಮ್ಮ ವರದಿ ಸಲ್ಲಿಸಿತು.

ರಾಷ್ಟ್ರಪತಿಯವರ ಭೇಟಿಯ ಸಂದರ್ಭದಲ್ಲಿ ಸಂಸದೆ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸರೋಜ್ ಪಾಂಡೆ, ಕೇರಳ ರಾಜ್ಯ ಬಿಜೆಪಿ ಸಹಪ್ರಭಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯಸಭಾ ಸದಸ್ಯ ವಿ.ಮುರಳೀಧರನ್ ಹಾಗೂ ಮತ್ತಿತರರು ಉಪಸ್ಥಿತತಿದ್ದರು.

Comments are closed.