ಬೆಂಗಳೂರು: ಹಬ್ಬಗಳು ಬಂತೆಂದರೆ ಸಾಕು ಬೆಂಗಳೂರಿನಿಂದ ಸ್ವಂತ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ದುಪ್ಪಟಾಗುತ್ತದೆ. ಅಷ್ಟೇ ಅಲ್ಲದೇ ಈ ವೇಳೆ ಟಿಕೆಟ್ ದರ ಕೂಡ ಹೆಚ್ಚಳವಾಗುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೆಎಸ್ಆರ್ಟಿಸಿ ಹೊಸ ಯೋಜನೆ ರೂಪಿಸುವುದರ ಜೊತೆಗೆ ಬಂಪರ್ ಆಫರ್ ಕೂಡ ನೀಡಿದೆ.
ಸಂಕ್ರಾಂತಿ ಹಬ್ಬಕ್ಕೆ ವಾರಾಂತ್ಯದಿಂದಲೇ ಸಾರ್ವಜನಿಕರಿಗೆ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಜ.11 ಹಾಗೂ 12ರಿಂದಲೇ 500ಕ್ಕೂ ಹೆಚ್ಚುವರಿ ಬಸ್ಗಳನ್ನು ಬಿಡಲಾಗುತ್ತಿದೆ. ರಾಜ್ಯ ಮತ್ತು ಅಂತರರಾಜ್ಯಗಳಿಗೆ ಈ ಸೇವೆ ಇರಲಿದ್ದು, ಈ ವಿಶೇಷ ವಾಹನ ಸಂಕ್ರಾಂತಿ ವಾಹನಗಳ ವ್ಯವಸ್ಥೆ ಇಲ್ಲ.
ಬುಕಿಂಗ್ಗಾಗಿ ಈಗಾಗಲೇ 707 ಕಂಪ್ಯೂಟರ್ ಬುಕಿಂಗ್ ಕೂಡ ಆರಂಭವಾಗಿದ್ದು,, ನಾಲ್ಕುಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಬುಕಿಂಗ್ ಮಾಡಿದರೆ ಶೇ.5ರಷ್ಟು ರಿಯಾಯತಿ ಸಿಗಲಿದೆ. ಹೋಗಿ ಬರುವ ಟಿಕೆಟ್ಗಳನ್ನು ಒಟ್ಟಿಗೆ ಬುಕ್ಕಿಂಗ್ ಮಾಡಿದರೆ ಶೇ.10ರಷ್ಟು ರಿಯಾಯಿತಿ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ವೆಬ್ಸೈಟ್ಗೆ ಭೇಟಿ ನೀಡಲು ಎಂದು ಕೆಎಸ್ ಆರ್ಟಿಸಿ ವ್ಯವಸ್ಥಾಪಕರು ತಿಳಿಸಿದ್ದಾರೆ.
Comments are closed.