ರಾಷ್ಟ್ರೀಯ

100 ಗಂಟೆ ಭಾಷಣ ಮಾಡಿ ವಿಶ್ವ ದಾಖಲೆ ಸೃಷ್ಟಿ!

Pinterest LinkedIn Tumblr


ಷಹಜಾನ್‍ಪುರ್: ಇಲ್ಲಿನ ಲಖ್ಮಿಪುರ ನಿವಾಸಿಯಾದ ಯತೀಶ್ ಚಂದ್ರ ಶುಕ್ಲಾ (35) ಎಂಬವರು ಸತತ 100 ಗಂಟೆಗಳ ಕಾಲ ಭಾಷಣ ಮಾಡುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.

ಮಾಜಿ ಅತಿಥಿ ಉಪನ್ಯಾಸಕರಾಗಿರುವ ಯತೀಶ್ ಚಂದ್ರ ಅವರು, ಜನವರಿ 5 ರಂದ 9ರವರೆಗೂ ನಿರಂತರ ಭಾಷಣ ಮಾಡುವ ಮೂಲಕ ವಿಶ್ವ ದಾಖಲೆ ಪುಟ ಸೇರಿದ್ದಾರೆ.

ಈ ಹಿಂದೆ ಸತತ 90 ಗಂಟೆಗಳ ಕಾಲ ಭಾಷಣ ನೀಡುವ ಮೂಲಕ ನೇಪಾಳ ಮೂಲದ ಅನಂತ್ ರಾಮ್ ಅವರು ದಾಖಲೆ ಬರೆದಿದ್ದರು.

ಹೊಸ ದಾಖಲೆ ನಿರ್ಮಿಸಲು ಯತೀಶ್ ಅವರು, ಭಾಷಣದುದ್ದಕ್ಕೂ ಕೇವಲ 32 ವಿರಾಮಗಳನ್ನು ಪಡೆದಿದ್ದಾರೆ ಎನ್ನುವುದು ವಿಶೇಷವಾಗಿದೆ. ಶುಕ್ಲಾ ಅವರು ಹೊಸ ದಾಖಲೆ ಬರೆದ ಹಿನ್ನೆಲೆಯಲ್ಲಿ ಅವರ ಸ್ವಗ್ರಾಮದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಅಧಿಕಾರಿಗಳು ಎಸ್‌ಡಿಎಂ, ಸದರ್, ಡಾ.ಅರುಣ್ ಕುಮಾರ್ ಸಿಂಗ್ ಉಪಸ್ಥಿತಿಯಲ್ಲಿ ಶುಕ್ಲಾ ಅವರಿಗೆ ವಿಶ್ವ ದಾಖಲೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದ್ದಾರೆ.

Comments are closed.