ಬೆಂಗಳೂರು: ಕೇವಲ ರಾಮನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗೆ ಸೀಮಿತವಾದ ಬಜೆಟ್ ಎಂಬ ಅಪವಾದದಿಂದ ಹೊರಬರಲು ಯತ್ನಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಯೊಂದೂ ಜಿಲ್ಲೆಗೂ ಒಂದಲ್ಲ ಒಂದು ಅನುದಾನ ನೀಡಿದ್ದಾರೆ. ಯಾವ ಜಿಲ್ಲೆಗೆ ಸಿಕ್ಕ ಅನುದಾನವೆಷ್ಟು? ಯಾವ ಯೋಜನೆಗೆ? ಇಲ್ಲಿದೆ ಮಾಹಿತಿ….
ರಾಮನಗರ
– ಚನ್ನಪಟ್ಟಣದ ಸಿಲ್ಕ್ ಇಂಡಸ್ಟ್ರ್ಟೀಸ್ ಪುನಶ್ಚೇತನ – 10 ಕೋಟಿ ಅನುದಾನ
– ರೇಷ್ಮೆ ಘಟಕ ಬಲವರ್ಧನೆ – 5 ಕೋಟಿ ರೂ.
– ಮಾವು ಸಂಸ್ಕರಣಾ ಘಟಕ – 10 ಕೋಟಿ ರೂ.
– ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ಪಾರಂಪರಿಕ ಕೇಂದ್ರ – 25 ಕೋಟಿ ರೂ.
ಹಾಸನ
– ಹೊಳೆನರಸೀಪುರದಲ್ಲಿ ಕೆರೆ ತುಂಬಿಸುವ ಯೋಜನೆ – 50 ಕೋಟಿ ರೂ. – ವಿಮಾನ ನಿಲ್ದಾಣ –
ಹಾಸನ – ಅರಸೀಕೆರೆಯಲ್ಲಿ ಉಪ ಕಾರಾಗೃಹ – 30 ಕೋಟಿ ರೂ.
ಮಂಡ್ಯ
– ಇಸ್ರೇಲ್ ಮಾದರಿ ಕೃಷಿ ಪ್ರಾತ್ಯಕ್ಷಿಕೆ ಕೇಂದ್ರ – 10 ಕೋಟಿ ರೂ.
– ಮೇಲುಕೋಟೆ ಸಮಗ್ರ ಅಭಿವೃದ್ಧಿ – 5 ಕೋಟಿ ರೂ.
– ಮೈಸೂರು ಶುಗರ್ ಕಾರ್ಖಾನೆ – 100 ಕೋಟಿ ರೂ.
– ಸಮಗ್ರ ಕೈಗಾರಿಕಾ ಅಭಿವೃದ್ಧಿ – 50 ಕೋಟಿ ರೂ.
ಬೆಂಗಳೂರು
– 117 ತ್ಯಾಜ್ಯ ನೀರು ಸಂಸ್ಕರಣಾ ಘಟಕ – 8015 ಕೋಟಿ ರೂ.
– ವಿಮಾನ ನಿಲ್ದಾಣ ಮಾರ್ಗ ನಿರ್ಮಾಣ – 16, 579 ಕೋಟಿ ರೂ.
– ದೊಡ್ಡಬಿದರಕಲ್ಲಿನಲ್ಲಿ ಕಲಾ ಗ್ರಾಮ – 10 ಕೋಟಿ ರೂ.
– ಹಲಸೂರಿನ ಗುರುದ್ವಾರಕ್ಕೆ 25 ಕೋಟಿ ರೂ.
– ಸಂವಿಧಾನ ಮ್ಯೂಸಿಯಂ ಸ್ಥಾಪನೆ – 20 ಕೋಟಿ ರೂ.
– ಎಲಿವೇಟೆಡ್ ಕಾರಿಡಾರ್ ಯೋಜನೆ – 1 ಸಾವಿರ ಕೋಟಿ ರೂ.
ರಾಜ್ಯ ರಾಜಧಾನಿಗೆ ಮತ್ತೇನು ಸಿಕ್ಕಿದೆ?
ಬೀದರ್
– ನಾಗರೀಕ ವಿಮಾನ ನಿಲ್ದಾಣ – 32 ಕೋಟಿ
– ಪ್ರತ್ಯೇಕ ವಿಶಿಷ್ಟ ಕೇಂದ್ರ ಕಾರಾಗೃಹ – 50 ಕೋಟಿ
– ಗುರುನಾನಕ್ ಜೀರಾ ಗುರುದ್ವಾರ – 10 ಕೋಟಿ
ಕೋಲಾರ
– ಟೋಮ್ಯಾಟೋ ಸಂಸ್ಕರಣಾ ಘಟಕ – 10 ಕೋಟಿ ಅನುದಾನ
– ಶಿವಾರಪಟ್ಟಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರ – 10 ಕೋಟಿ
ಉಡುಪಿ
– ಜಟ್ಟಿ ಹಾಗೂ ತ್ಯಾಜ್ಯ ನಿರ್ವಹಣಾ ಘಟಕ – 15 ಕೋಟಿ ಅನುದಾನ
– ಕಾರ್ಕಳದಲ್ಲಿ ಎಣ್ಣೆ ಹೊಳೆ ಯೋಜನೆ – 40 ಕೋಟಿ ಅನುದಾನ
– ಪಣಂಬೂರು ಪ್ರವಾಸೋದ್ಯಮ ಅಭಿವೃದ್ಧಿ – 7 ಕೋಟಿ
– ಕೆರೆ ತುಂಬಿಸುವ ಯೋಜನೆ – 40 ಕೋಟಿ ಅನುದಾನ
ಬಳ್ಳಾರಿ
– ಕಂಪ್ಲಿ ನೀರಾವರಿ ಯೋಜನೆಗೆ 75 ಕೋಟಿ
– ಹಂಪಿ ವ್ಯಾಖ್ಯಾನ ಕೇಂದ್ರ – 1 ಕೋಟಿ
ಗದಗ
– ಮೆಣಸು, ಹೆಸರುಕಾಳು ಸಂಸ್ಕರಣಾ ಘಟಕ – 50 ಕೋಟಿ ಅನುದಾನ
ಹುಬ್ಬಳ್ಳಿ
– ಮೆಣಸು, ಹೆಸರುಕಾಳು ಸಂಸ್ಕರಣಾ ಘಟಕ – 50 ಕೋಟಿ ಅನುದಾನ
ಶಿವಮೊಗ್ಗ
– ಶಿಕಾರಿಪುರದ 200 ಕೆರೆ ತುಂಬಿಸುವಯೋಜನೆ – 200 ಕೋಟಿ ಅನುದಾನ
ಕೊಡಗು
– ಪುನರ್ವಸತಿ ನಿರ್ಮಾಣಕ್ಕೆ 2 ಕೋಟಿ ಅನುದಾನ
ತುಮಕೂರು
– K – Tech ನಾವೀನ್ಯತೆ ಕೇಂದ್ರ – 7 ಕೋಟಿ
ಬಾಗಲಕೋಟೆ
– ಬಾದಾಮಿ ಪ್ರವಾಸಿ ತಾಣ – ಕರಕುಶಲ ಮಾರುಕಟ್ಟೆ ಅಭಿವೃದ್ಧಿ – 25 ಕೋಟಿ
4 ಹೊಸ ತಾಲೂಕುಗಳ ರಚನೆಗೆ ಅಸ್ತು
ಮೈಸೂರು
– ಡಬಲ್ ಡೆಕ್ಕರ್ ಬಸ್ ಸೇವೆ – 5 ಕೋಟಿ
ವಿಜಯಪುರ
– ಪ್ರತ್ಯೇಕ ವಿಶಿಷ್ಟ ಕೇಂದ್ರ ಕಾರಾಗೃಹ – 50 ಕೋಟಿ
ಚಿಕ್ಕಮಗಳೂರು
– ಬಾಲಕಿಯರ ಬಾಲಮಂದಿರ – 3 ಕೋಟಿ
ನೀರಾವರಿಗೆ ದಕ್ಕಿದ್ದೆಷ್ಟು?
ಚಾಮರಾಜನಗರ
ರೇಷ್ಮೆ ಕಾರ್ಖಾನೆ ಪುನಶ್ಚೇತನ – 5 ಕೋಟಿ ಅನುದಾನ
ಹಾವೇರಿ
– ರೇಷ್ಮೆ ಘಟಕ ಬಲವರ್ಧನೆ – 5 ಕೋಟಿ ರೂ ಅನುದಾನ
ರೈತರಿಗೆ ಮತ್ತಷ್ಟು ಬಲ ತುಂಬದಿ ಕುಮಾರಣ್ಣ
ರಾಯಚೂರು
– ಕೃಷಿ ಪ್ರಾತ್ಯಕ್ಷಿಕೆ ಕೇಂದ್ರ ಸ್ಥಾಪನೆ – 10 ಕೋಟಿ ರೂ ಅನುದಾನ
ಬೆಂಗಳೂರು-ಗ್ರಾಮೀಣ
ದೊಡಬಳ್ಳಾಪುರ ಆಸ್ಪತ್ರೆ ಮೇಲ್ದರ್ಜೆಗೆ- 10 ಕೋಟಿ ರೂ.
Comments are closed.