ಮಂಗಳೂರು ಫೆಬ್ರವರಿ 8 : ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.
ಕರಾವಳಿ ಹಾಗೂ ಮಲೆನಾಡು ಭಾಗದ ರೈತರಿಗೆ ಭತ್ತ ಬೆಳೆಯಲು ಪ್ರತೀ ಹೆಕ್ಟೇರ್‍ಗೆ ರೂ 7500 ಪ್ರೋತ್ಸಾಹಧನ ನೀಡುವ ಕರಾವಳಿ ಪ್ಯಾಕೇಜ್‍ಗೆ ರೂ ರೂ 5 ಕೋಟಿ.
ಹಾಲು ಉತ್ಪಾದಕರಿಗೆ ಪ್ರತೀ ಲೀಟರ್‍ಗೆ ರೂ 6 ಪ್ರೋತ್ಸಾಹಧನ.
ಮೀನುಗಾರಿಕಾ ದೋಣೆಗಳಿಗೆ ಇಸ್ರೊ ಅಧಿಕೃತ ಡಿ.ಎ.ಟಿ ಉಪಕರಣ ಅಳವಡಿಸಲು ಶೇಕಡಾ 50 ಸಹಾಯಧನ, ಇದಕ್ಕಾಗಿ 3 ಕೋಟಿ ರೂ ಅನುದಾನ.
ಮತ್ಸ್ಯಾಶ್ರಮ ಯೋಜನೆಯಡಿಯಲ್ಲಿ ಮೀನುಗಾರರಿಗೆ ಈ ವರ್ಷ 2500 ಮನೆಗಳ ಪೂರ್ಣ.
ಮಲ್ಪೆಯಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ, ತ್ಯಾಜ್ಯನಿರ್ವಹಣ ಘಟಕ ಹಾಗೂ ಇತರ ಸೌಲಭ್ಯಗಳಿಗೆ ರೂ 15 ಕೋಟಿ ಅನುದಾನ.
ದೋಣಿಗಳಿಗೆ ಡೀಸಲು ಮತ್ತು ಸೀಮೆಎಣ್ಣೆ ಸಬ್ಸಿಡಿ ನೀಡಲು ರೂ 148.5 ಕೋಟಿ ಅನುದಾನ.
1 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ, 1500 ಹೊಸ ಶಾಲಾ ಕೊಠಡಿ ನಿರ್ಮಾಣ.
ಮಂಗಳೂರಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿ 1 ಕೋಟಿ ರೂ ವೆಚ್ಚದಲ್ಲಿ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಚಿಕಿತ್ಸಾ ಘಟಕ ವ್ಯವಸ್ಥೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ ರೂ 500 ಗೌರವಧನ ಹೆಚ್ಚಳ.
ಹಿಂದುಳಿದ ವರ್ಗಗಳ ಸಣ್ಣ ಪುಟ್ಟ ಸಮುದಾಯಗಳ ಅಭಿವೃದ್ಧಿಗೆ ರೂ 134 ಕೋಟಿ ಅನುದಾನ
ಮುಸ್ಲಿಮರಲ್ಲಿ ಆಧುನಿಕ ಶಿಕ್ಷಣ ಹಾಗೂ ವೈಜ್ಞಾನಿಕ ಮನೋಭಾವ ಉತ್ತೇಜನಕ್ಕೆ ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ ರೂ 25 ಕೋಟಿ ಅನುದಾನ.
ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ರೂ 200 ಕೋಟಿ ಅನುದಾನ.
ಆಟೋರಿಕ್ಷಾ / ಟ್ಯಾಕ್ಷಿ ಚಾಲಕರಿಗೆ ಗುಂಪು ವಿಮೆ ಸೌಲಭ್ಯ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 30 ಕೋಟಿ ರೂ ಅನುದಾನ.
ಮಂಗಳೂರು ಮಹಾನಗರಪಾಲಿಕೆಗೆ ರೂ 125 ಕೋಟಿ ಅನುದಾನ.
ಮಂಗಳೂರಿನಲ್ಲಿ ಕರ್ನಾಟಕ ಜ್ಞಾನ ಆರೋಗ್ಯ ಸಮೃದ್ಧಿ ಕಾರಿಡಾರನ್ನು ಕೋಣಾಜೆಯಿಂದ ಮಣಿಪಾಲದವರೆಗಿನ ಅಭಿವೃದ್ಧಿಪಡಿಸಲು ಕಾರ್ಯ ಸಾಧ್ಯತಾ ವರದಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರೋನ್ ಮೂಲಕ ಕಂದಾಯ ರೀ ಸರ್ವೇ.
ಪಣಂಬೂರು ಮತ್ತು ಸಸಿಹಿತ್ಲು ಬೀಚ್ ಅಭಿವೃದ್ಧಿ ರೂ 7 ಕೋಟಿ ಅನುದಾನ.
ತುಳು ಕೊಂಕಣಿ ಕೊಡವ ಚಲನಚಿತ್ರಗಳನ್ನು ಪ್ರೋತ್ಸಾಹಿಸಲು ಅನುದಾನ.
ದಕ್ಷಿಣ ಕನ್ನಡ ಜಿಲ್ಲೆಗೆ ಈ ಎಲ್ಲಾ ಸೌಲಭ್ಯಗಳನ್ನು ನೀಡಿದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯ ಮಂತ್ರಿಗಳಿಗೆ ಕೃತಜ್ಷತೆ ಸಲ್ಲಿಸುವುದಾಗಿ ಸಚಿವರು ತಿಳಿಸಿದ್ದಾರೆ.
Comments are closed.