ರಾಷ್ಟ್ರೀಯ

ತನಗಿಂತ 18 ವರ್ಷ ಹಿರಿಯ ವಿವಾಹಿತ ಮಹಿಳೆಯು ಮದುವೆಯಾಗಲು ನಿರಾಕರಿಸಿದ್ದಕ್ಕೆ ಇರಿದು ಕೊಂದ!

Pinterest LinkedIn Tumblr


ನವದೆಹಲಿ: ತನಗಿಂತ 18 ವರ್ಷ ಹಿರಿಯಳಾದ ವಿವಾಹಿತ ಮಹಿಳೆಯು ಮದುವೆ ಪ್ರಸ್ತಾಪವನ್ನು ನಿರಾಕರಿಸಿದಳೆಂದು ಕೋಪಗೊಂಡ ವ್ಯಕ್ತಿಯೊಬ್ಬ ಆಕೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಂಗ್ಲೋಯ್‌ನಲ್ಲಿ ನಡೆದಿದೆ.

ಬಿಹಾರದ ಮಧುಬಾನಿ ಜಿಲ್ಲೆಯ ಪನ್ವಾಲ್ವ ನಿವಾಸಿಯಾದ ಶ್ಯಾಮ್‌ ಯಾದವ್‌ ಎಂಬಾತ 45 ವರ್ಷದ ಮಾಧುರಿಯನ್ನು ವಿವಾಹವಾಗಲು ಬಯಸಿದ್ದ. ಇಬ್ಬರು ಶೂ ಫ್ಯಾಕ್ಟರಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಶ್ಯಾಂ ಆಕೆಯನ್ನು ಪ್ರೀತಿಸುತ್ತಿದ್ದ. ವಿವಾಹಿತ ಮಹಿಳೆಯಾಗಿರುವುದರಿಂದ ಆಕೆಗೆ ಆಸಕ್ತಿ ಇರಲಿಲ್ಲ. ನಂತರ ಕೆಲಸ ಬಿಟ್ಟು ಹೊರನಡೆದರೂ ಯಾದವ್‌ನ ಕಿರುಕುಳ ಮಾತ್ರ ನಿಂತಿಲ್ಲ. ಮಹಿಳೆಯನ್ನು ಹಿಂಬಾಲಿಸಲು ಶುರು ಮಾಡಿದ ಯಾದವ್‌ ಕೊನೆಗೆ ಆಕೆಗೆ ಇರಿದಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ಯಾಮ್‌ ನನ್ನ ಎದುರಿಗೆ ತನ್ನ ತಾಯಿಯನ್ನು ತಿವಿದು ಹತ್ಯೆ ಮಾಡಿದ್ದಾಗಿ ಮೃತ ಮಹಿಳೆಯ ಮಗಳು ಹೇಳಿರುವ ಹೇಳಿಕೆ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹತ್ಯೆಗೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಹತ್ಯೆ ಬಳಿಕ ದೆಹಲಿಯನ್ನು ತೊರೆಯಲು ತೀರ್ಮಾನಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.