ಬೆಂಗಳೂರು: ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ಕೀರ್ತಿಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿ ರೋಹಿತ್ ಹೊಸ ದಾಖಲೆ ಬರೆದಿದ್ದಾರೆ.
2018ರ ಫೆಬ್ರವರಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ಕೀರ್ತಿಗೆ ನ್ಯೂಜಿಲೆಂಡ್’ನ ಆರಂಭಿಕ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್ ಪಾತ್ರರಾಗಿದ್ದರು. ಇದೀಗ ಸರಿಯಾಗಿ ಒಂದು ವರ್ಷದ ಬಳಿಕ ಗಪ್ಟಿಲ್ ಹಿಂದಿಕ್ಕಿ ರೋಹಿತ್ ಶರ್ಮಾ ನಂ.1 ಸ್ಥಾನಕ್ಕೇರಿದ್ದಾರೆ. ಇದೀಗ 84 ಇನ್ನಿಂಗ್ಸ್’ನಲ್ಲಿ ರೋಹಿತ್ ಶರ್ಮಾ 4 ಶತಕ ಹಾಗೂ 16 ಅರ್ಧಶತಕಗಳ ನೆರವಿನೊಂದಿಗೆ 2,288 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, ಮಾರ್ಟಿನ್ ಗಪ್ಟಿಲ್ 74 ಇನ್ನಿಂಗ್ಸ್’ಗಳಲ್ಲಿ 2,272 ರನ್ ಬಾರಿಸಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ರೋಹಿತ್ ಶರ್ಮಾ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ಕೀರ್ತಿಗೆ ಭಾಜನರಾಗುವ ಮೂಲಕ ಮೂರೂ ಮಾದರಿಯ ಕ್ರಿಕೆಟ್’ನಲ್ಲೂ ಅತಿ ರನ್ ಬಾರಿಸಿದ ಆಟಗಾರರು ಎನ್ನುವ ಕೀರ್ತಿಗೆ ಭಾರತೀಯರು ಭಾಜನರಾಗಿದ್ದಾರೆ. ಸಚಿನ್ ತೆಂಡುಲ್ಕರ್ ಏಕದಿನ ಹಾಗೂ ಟೆಸ್ಟ್’ನಲ್ಲಿ ಕ್ರಮವಾಗಿ 18426 ಹಾಗೂ 15921 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.
ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳ ಪಟ್ಟಿ ನಿಮ್ಮ ಮುಂದೆ….
ಸ್ಥಾನ ಬ್ಯಾಟ್ಸ್’ಮನ್ ಪಂದ್ಯ ಇನ್ನಿಂಗ್ಸ್ ರನ್
1 ರೋಹಿತ್ ಶರ್ಮಾ(Ind) 92 84 2288
2 ಮಾರ್ಟಿನ್ ಗಪ್ಟಿಲ್(NZ) 76 74 2272
3 ಶೊಯೆಬ್ ಮಲಿಕ್(Pak) 111 104 2263
4 ವಿರಾಟ್ ಕೊಹ್ಲಿ(Ind) 65 60 2167
5 ಬ್ರೆಂಡನ್ ಮೆಕ್ಕಲಂ(NZ) 71 70 2140
6 ಮೊಹಮ್ಮದ್ ಶೆಹಜಾದ್(Afg) 65 65 1936
7 ಮೊಹಮ್ಮದ್ ಹಫೀಜ್(Pak) 89 86 1908
8 ತಿಲಕರತ್ನೆ ದಿಲ್ಯ್ಷಾನ್(SL) 80 79 1889
9 ಜೆಪಿ ಡುಮಿನಿ(SA) 78 72 1858
10 ಡೇವಿಡ್ ವಾರ್ನರ್(Aus) 70 70 1792
(*ಫೆಬ್ರವರಿ 08/2019ರ ವೇಳೆಗೆ]
ಅಂಕಿ-ಅಂಶ ಕೃಪೆ: ಕ್ರಿಕ್ ಇನ್ಫೊ
Comments are closed.