ಕರ್ನಾಟಕ

ರೇಪ್ ಸಂತ್ರಸ್ತೆಯ ಹೇಳಿಕೆ: ಸ್ಪೀಕರ್ ರಮೇಶ್ ಕುಮಾರ್​ ಕ್ಷಮೆಯಾಚನೆ

Pinterest LinkedIn Tumblr

*
ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ರೇಪ್​ ಒಳಗಾದವರ ಉದಾಹರಣೆ ನೀಡಿದ್ದಕ್ಕೆ ಸ್ಪೀಕರ್​ ರಮೇಶ್​ ಕುಮಾರ್​ ಅವರು ಕ್ಷಮೆಯಾಚಿಸಿದ್ದಾರೆ.

ಆಪರೇಷನ್​ ಆಡಿಯೋ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಮಾತನಾಡುತ್ತ, ಸ್ಪೀಕರ್ ಅವರನ್ನು ಸಿಎಂ ಬೀದಿಗೆ ತಂದಿದ್ದಾರೆಂದು ಆರೋಪಿಸಿದ್ದರು.

ಆಗ ಸ್ಪೀಕರ್, ರೇಪ್ ಆದವರು ದೂರು ಕೊಟ್ಟ ನಂತರ ಕೋರ್ಟ್​ಗೆ ಹೋದರೆ ವಕೀಲರು ‘ಎಲ್ಲಿ ಆಯಿತು? ಹೇಗೆಲ್ಲ ಆಯಿತು? ಎಷ್ಟು ಹೊತ್ತಿಗೆ ಆಯಿತು?’ ಎಂದು ಪದೇಪದೆ ಕೇಳುತ್ತಾರೆ. ಅದೇ ರೀತಿ ನೀವೆಲ್ಲ ನನ್ನ ರೇಪ್ ಮಾಡುತ್ತಿದ್ದೀರಿ.

ಒಬ್ಬ ವ್ಯಕ್ತಿ ಮೇಲೆ 1 ಬಾರಿ ರೇಪ್ ಆಗಿದ್ದರೆ, ಕೋರ್ಟ್​ನಲ್ಲಿ 100 ಬಾರಿ ಆದ ಅನುಭವ ಆಗುತ್ತದೆ. ನನ್ನ ಸ್ಥಿತಿಯೂ ಅದೇ ಆಗಿದೆ’ ಎಂದು ರಮೇಶ್​ ಕುಮಾರ್​ ಅವರು ಕಳವಳ ವ್ಯಕ್ತಪಡಿಸಿದ್ದರು.

ಸ್ಪೀಕರ್​ ರೇಪ್​ ಪದ ಬಳಸಿದ್ದನ್ನು ಬಿಜೆಪಿ ನಾಯಕಿ ತಾರಾ, ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವು ಅಸಮಾಧಾನ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ರೇಪ್​ ಪದ ಬಳಕೆಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ಪೀಕರ್​ ಸದನದಲ್ಲಿ ಕ್ಷಮೆ ಯಾಚಿಸಿದರು.

Comments are closed.