ಕರಾವಳಿ

ಕುಂದಾಪುರ: ಅರಾಟೆ ಸೇತುವೆಯಲ್ಲಿ ಅಪರಿಚಿತ ವಾಹನ-ಬೈಕ್ ಅಪಘಾತ: ಯುವಕ ದಾರುಣ ಸಾವು

Pinterest LinkedIn Tumblr

ಕುಂದಾಪುರ: ಇಲ್ಲಿನ ಅರಾಟೆ ಸೇತುವೆ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಾವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಪಟ್ಟ ಯುವಕ ಗಂಗೊಳ್ಳಿ ಮೂಲದವರಾಗಿದ್ದಾರೆ. ಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿ ಗಣೇಶ್ ಎಂಬವರ ಪುತ್ರ ವಿಖ್ಯಾತ್ (24) ಎಂದು ಗುರುತಿಸಲಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆರಾಟೆ ಸೇತುವೆ ಮೇಲೆ ಅಫಘಾತ ನಡೆದಿದ್ದು ಅಫಘಾತ ತೀವ್ರತೆಗೆ ಬೈಕ್ ಸಾವರನ ದೇಹ ನಜ್ಜು ಗುಜ್ಜಾಗಿದೆ ಡಿಕ್ಕಿ ಹೊಡೆದ ವಾಹನ ಸ್ಥಳದಿಂದ ಸುಮಾರು 2 ಕಿಲೋಮೀಟರ್ ದೂರ ಹೆಮ್ಮಾಡಿ ತನಕ ಬೈಕ್ ಎಳೆದೊಯ್ದಿದೆ. ಡಿಕ್ಕಿ ಹೊಡೆದ ಅಪರಿಚಿತ ವಾಹನ ಪರಾರಿಯಾಗಿದ್ದು ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಹೆದ್ದಾರಿಯಲ್ಲಿ ಅನಾಥವಾಗಿ ಬಿದ್ದಿದ್ದ ಮೃತದೇಹವನ್ನು ಗಂಗೊಳ್ಳಿ 24×7 ಹೆಲ್ಪ್ ಲೈನ್ ಸ್ವಯಂಸೇವಕರು ಪೊಲೀಸ್ ಸಿಬ್ಬಂಧಿಯವರ ಸಹಾಯದಿಂದ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದರು.

ಮೃತ ಯುವಕ ಕುಂದಾಪುರದ ಹೊಟೇಲವೊಂದರಲ್ಲಿ ಕೆಲಸಕ್ಕಿದ್ದು ,ತಡರಾತ್ರಿ 12.30 ಸುಮಾರಿಗೆ ಅಫಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸುಮಾರು ಒಂದು ತಾಸಿನ ಬಳಿಕ ಘಟನೆ ಬೆಳಕಿಗೆ ಬಂದಿದೆ.

Comments are closed.