ನವದೆಹಲಿ: ಪುಲ್ವಾಮ ದಾಳಿ ಬಳಿಕ ಏಷ್ಯಾ ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಸೌದಿ ಅರೆಬೀಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನದ ಬಳಿಕ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಲಿರುವ ಅವರು, ಎರಡು ರಾಷ್ಟ್ರಗಳೊಂದಿಗಿನ ರಕ್ಷಣಾ ಒಪ್ಪಂದ ಹಾಗೂ ಜಂಟಿ ನೌಕದಳದ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ಕೂಡ ಪ್ರಸ್ತಾಪವಾಗಲಿದೆ.
ಎಂಬಿಎಸ್ ಎಂದೇ ಖ್ಯಾತರಾಗಿರುವ ಸೌದಿ ರಾಜ ಭಾನುವಾರ ಇಸ್ಲಾಮಾಬಾದ್ಗೆ ಬಂದಿಳಿಯುವ ಮೂಲಕ ತಮ್ಮ ದಕ್ಷಿಣ ಏಷ್ಯಾಗಳ ಪ್ರವಾಸ ಆರಂಭಿಸಿದ್ದು, ಸೋಮವಾರ ತವರಿಗೆ ಮರಳಲಿದ್ದಾರೆ. ಈ ಮೊದಲು ಅವರು ಪಾಕಿಸ್ತಾನದಿಂದ ನೇರವಾಗಿ ಭಾರತಕ್ಕೆ ಆಗಮಿಸಲು ನಿಗದಿಯಾಗಿತ್ತು. ಪುಲ್ವಾಮ ದಾಳಿ ಬಳಿಕ ಅವರು ಪಾಕ್ನಿಂದ ನೇರವಾಗಿ ಭಾರತಕ್ಕೆ ಆಗಮಿಸುವುದಕ್ಕೆ ಆಕ್ಷೇಪನೆ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಇಸ್ಲಾಮಾಬಾದ್ನಿಂದ ಸೌದಿ ಅರೇಬಿಯಾದ ರಿಯಾದ್ಗೆ ತೆರಳಿದ್ದು, ಅಲ್ಲಿಂದ ನಾಳೆ ಭಾರತಕ್ಕೆ ಆಗಮಿಸಲಿದದಾರೆ.
ಕಾಶ್ಮೀರದಲ್ಲಿ ಗಡಿನಿಯಂತ್ರಣ ರೇಖೆ ನಡೆಸಿ ಪಾಕಿಸ್ತಾನ ಪ್ರೇರಿಪಿತ ಸಂಘಟನೆ ನಡೆಸಿದ ದಾಳಿಯನ್ನು ಎಂಬಿಎಸ್ ಕೂಡ ಖಂಡಿಸಿದ್ದಾರೆ. ಭೇಟಿ ವೇಳೆ ಕೂಡ ಪಾಕಿಸ್ತಾನ ಭಯೋತ್ಪಾದನಾ ಸಂಘಟನೆಗಳಿಗೆ ನೀಡುತ್ತಿರುವ ಬೆಂಬಲದ ಬಗ್ಗೆ ಎರಡು ರಾಷ್ಟ್ರಗಳು ನಿಯೋಗಗಳು ಚರ್ಚಿಸಲಿದೆ. ಅವರ ಮಾತುಕತೆ ಬಳಿಕ ಪ್ರಧಾನಿ ಹಾಗೂ ಸೌದಿ ರಾಜ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ.
ಹೂಡಿಕೆ, ಪ್ರವಾಸೋದ್ಯಮ, ಗೃಹ ಮತ್ತು ಮಾಹಿತಿ ಹಾಗೂ ಪ್ರಸಾರ ಕುರಿತು ಐದು ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರು ಸಹಿಹಾಕಲಿದ್ದಾರೆ ಎಂದು ಆರ್ಥಿಕ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಟಿಎಸ್ ತಿರುಮೂರ್ತಿ ತಿಳಿಸಿದ್ದಾರೆ. ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಈ ಭೇಟಿ ಹೊಸ ಅಧ್ಯಯನ ಬರೆಯಲಿದೆ ಎಂದು ಕೂಡ ತಿಳಿಸಿದರು.
ಗಡಿ ಉಲ್ಲಂಘನಾ ದಾಳಿ ಕುರಿತು ಮಾತನಾಡಿದ ಅವರು, ಫೆ.14ರಂದು ಪುಲ್ವಾಮದಲ್ಲಿ ನಡೆದ ದಾಳಿಯನ್ನು ಸೌದಿ ಅರೇಬಿಯಾ ಖಂಡಿಸಿದೆ. ಭಯೋತ್ಪಾದನೆ ನಿಗ್ರಹಕ್ಕೆ ಅವರು ರಕ್ಷಣಾ ಸಹಕಾರವನ್ನು ನಾವು ಶ್ಲಾಘಿಸಬೇಕು ಎಂದರು.
ಎರಡು ರಾಷ್ಟ್ರಗಳ ನೌಕಪಡೆಯ ಒಪ್ಪಂದದಿಂದಾಗಿ ಎರಡು ರಕ್ಷಣಾ ಸಹಕಾರವನ್ನು ಗಮನಾರ್ಹ ಹೆಚ್ಚಿಸಲಿದೆ ಎನ್ನಲಾಗಿದೆ.
Comments are closed.