ರಾಷ್ಟ್ರೀಯ

ದೇಶದ ತೆರಿಗೆ ಪಾವತಿದಾರರ ಹಣವನ್ನು ಲೂಟಿ ಮಾಡುವುದನ್ನು ತಡೆದ ಕಾರಣ ವಿಪಕ್ಷದ ನಾಯಕರು ನಮ್ಮನ್ನು ನಿಂದಿಸುತ್ತಿದ್ದಾರೆ: ಮೋದಿ

Pinterest LinkedIn Tumblr

ನವದೆಹಲಿ: ಹಿಂದಿನ ಸರ್ಕಾರದಲ್ಲಿ ಸರ್ಕಾರದ ಸೌಲಭ್ಯಗಳನ್ನು ಮತ್ತು ನೆರವನ್ನು ಸುಮಾರು 8 ಕೋಟಿ ನಕಲಿ ಫಲಾನುಭವಿಗಳು ಪಡೆಯುತ್ತಿದ್ದರು. ಆದರೆ ತಮ್ಮ

ಸರ್ಕಾರ ಬಂದ ಮೇಲೆ ದೇಶದ ತೆರಿಗೆ ಪಾವತಿದಾರರ ಹಣವನ್ನು ಲೂಟಿ ಮಾಡುವುದನ್ನು ತಡೆದ ಕಾರಣ ವಿರೋಧ ಪಕ್ಷದ ನಾಯಕರು ನಮ್ಮನ್ನು ನಿಂದಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎನ್ ಡಿಎ ಸರ್ಕಾರದ ಜನ ಧನ ಯೋಜನೆ, ಆಧಾರ್ ಕಾರ್ಡು ಯೋಜನೆಗಳ ಪರಿಣಾಮಕಾರಿ ಜಾರಿಯಿಂದ ನಕಲಿ ಫಲಾನುಭವಿಗಳಿಂದ 1,10,000 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಉಳಿತಾಯ ಮಾಡಲಾಗಿದೆ ಎಂದು ಹೇಳಿದರು.

ಖಾಸಗಿ ಸುದ್ದಿ ವಾಹಿನಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಹಣವನ್ನು ಲೂಟಿ ಮಾಡುತ್ತಿದ್ದವರನ್ನು ಎಲ್ಲಾ ರೀತಿಯಲ್ಲಿ ತಡೆದಿದ್ದರಿಂದ ಯಾರು ಕೂಡ ಸರ್ಕಾರವನ್ನು ಹಗರಣದಲ್ಲಿ ಸಿಲುಕಿಸಲು ಸಾಧ್ಯವಿಲ್ಲ. ಹಿಂದೆ ಸರ್ಕಾರದಿಂದ 8 ಕೋಟಿ ನಕಲಿ ಫಲಾನುಭವಿಗಳು ಸರ್ಕಾರದ ಸೌಲಭ್ಯವನ್ನು ಪಡೆಯುತ್ತಿದ್ದರು. ನಮ್ಮ ಸರ್ಕಾರ ಅದನ್ನು ನಿಲ್ಲಿಸಿದೆ ಎಂದು ಹೇಳಿದರು.

ತೆರಿಗೆ ಪಾವತಿದಾರರ ಹಣ ನಕಲಿ ಫಲಾನುಭವಿಗಳಿಗೆ ಹೋಗುವುದನ್ನು ತಡೆದಿದ್ದರಿಂದ ನನ್ನ ಮೇಲೆ ಪ್ರತಿಪಕ್ಷದವರು ಆರೋಪ ಮತ್ತು ನಿಂದನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಉದ್ಯೋಗ ಸೃಷ್ಟಿ ಬಗ್ಗೆ ವಿರೋಧ ಪಕ್ಷಗಳ ಆರೋಪಕ್ಕೆ ಉತ್ತರಿಸಿದ ಮೋದಿಯವರು ವಾರ್ಷಿಕವಾಗಿ ಕಳೆದ 5 ವರ್ಷಗಳಲ್ಲಿ ಸುಮಾರು 1.2 ಕೋಟಿ ಉದ್ಯೋಗ ಸೃಷ್ಟಿಸಲಾಗಿದೆ. ಪ್ರವಾಸೋದ್ಯಮ, ವಿಮಾನಯಾನ ಮತ್ತು ಮೂಲಭೂತ ಸೌಕರ್ಯಗಳಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ತಿಳಿಸಿದರು.

Comments are closed.