ಅಂತರಾಷ್ಟ್ರೀಯ

ಭಾರತ ನಡೆಸಿದ ಏರ್ ಸ್ಟ್ರೇಕ್ ನಲ್ಲಿ ಯಾವುದೇ ಸಾವು, ಹಾನಿ ಆಗಿಲ್ಲ : ಪಾಕ್ ಸೇನಾ ಡಿಜಿ ಮೇಜರ್‌ ಜನರಲ್‌ ಆಸಿಫ್

Pinterest LinkedIn Tumblr

ಇಸ್ಲಾಮಾಬಾದ್‌: ಭಾರತೀಯ ವಾಯುಪಡೆಯ ವಿಮಾನಗಳು ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಯನ್ನು ದಾಟಿದ್ದು, ಪಾಕಿಸ್ತಾನ ಕೂಡಲೇ ಎಚ್ಚರಿಕೆ ನೀಡಿದೆ ಎಂದು ಪಾಕಿಸ್ತಾನ ಸೇನೆ ಹೇಳಿದೆ. ಅಲ್ಲದೆ ಭಾರತ ನಡೆಸಿದ ಏರ್ ಸ್ಟ್ರೇಕ್ ನಲ್ಲಿ ಯಾವುದೇ ಸಾವು, ಹಾನಿ ಆಗಿಲ್ಲ ಎಂದು ಪಾಕ್ ಸೇನಾ ಡಿಜಿ ಮೇಜರ್‌ ಜನರಲ್‌ ಆಸಿಫ್ ಗಫ‌ೂರ್‌ ಅವರು ಹೇಳಿದ್ದಾರೆ.

ಭಾರತೀಯ ವಾಯುಪಡೆಯ ವಿಮಾನಗಳು ಭಾರತ – ಪಾಕ್‌ನ ಗಡಿ ನಿಯಂತ್ರಣ ರೇಖೆಯನ್ನು ದಾಟಿವೆ. ಕೂಡಲೇ ಎಚ್ಚೆತ್ತುಕೊಂಡ ಪಾಕಿಸ್ತಾನ ವಾಯುಪಡೆಯು ಎಚ್ಚರಿಕೆಯನ್ನು ನೀಡಿದೆ. ಇದರಿಂದಾಗಿ ಭಾರತೀಯ ಯುದ್ಧ ವಿಮಾನಗಳು ಈಗ ವಾಪಸ್‌ ಹೋಗಿವೆ ಎಂದು ಗಫೂರ್‌ ಟ್ವೀಟ್‌ ಮಾಡಿದ್ದಾರೆ.

ಬಳಿಕ ಮತ್ತೊಂದು ಟ್ವೀಟ್‌ ಮಾಡಿರುವ ಆಸಿಫ್‌ ಗಫೂರ್‌, ಮುಜಾಫರ್‌ನಗರ ಸೆಕ್ಟರ್‌ನಿಂದ ಭಾರತೀಯ ವಾಯುಪಡೆಯು ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿವೆ. ಪಾಕಿಸ್ತಾನ ಸೇನೆಯು ಕೂಡ ಸಕಾಲಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ. ಸದ್ಯ ಯಾವುದೇ ಸಾವು ನೋವು, ಹಾನಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ಭಾರತದ ವಾಯುಸೇನೆಯು ಹಾಕುತ್ತಿದ್ದ ಬಾಂಬ್‌ನ್ನು ತೆರೆದ ಪ್ರದೇಶದಲ್ಲಿ ಬೀಳುವಂತೆ ಮಾಡಿದ್ದರಿಂದಾಗಿ ಸಾವು ನೋವು ಸಂಭವಿಸಿಲ್ಲ ಎಂದು ಪಾಕ್ ಸೇನೆ ಹೇಳಿಕೊಂಡಿದೆ.

Comments are closed.