ಪೂರ್ತಿ ದಿನ ದುಡಿಯುವರಿಗೆ ಗೊತ್ತು ಕುತ್ತಿಗೆ ನೋವಿನ ಹಿಂಸೆ ಯಾಕೆಂದರೆ ಪ್ರತಿ ದಿನ ಇವರು ಕುಟ್ಟಿ ನೋವಿಂದ ನರಳುತ್ತಿರುತ್ತಾರೆ, ಕಾಪುಟರ್ ಮುಂದೆ ಕೂತು ಕೆಲಸ ಮಾಡುವುದರಿಂದ ಕಾರ್ ಡ್ರೈವಿಂಗ್ ಮಾಡುವವರ ವರೆಗೂ ಕುತ್ತಿಗೆ ನೋವು ಸಾಮಾನ್ಯ ಕೆಲವರಿಗೆ ಕುತ್ತಿಗೆ ನೋವಿನಿಂದ ಕೈ ನೋವು ಬರುತ್ತದೆ. ಇದನ್ನು ರೆಫರಿಂಗ್ ಪೇನ್ ಎನ್ನುತ್ತಾರೆ.
ಇದಕ್ಕೆ ಫಿಸಿಯೋಥೆರೆಪಿ ಮುಂತಾದ ಚಿಕಿತ್ಸೆಗಳ ಅವಶ್ಯಕತೆ ಇರುತ್ತದೆ, ಕುತ್ತಿಗೆ ನೋವಿಗೆ ಪದೇ ಪದೇ ಮಾತ್ರೆ ಸೇವಿಸ ಬೇಡಿ ಅದರ ಬದಲು ಕೆಲ ಕ್ರಮಗಳನ್ನು ಅನುಸರಿಸುವ ಮೂಲಕ ಈ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಬಿಸಿನೀರಿನ ಶಾಖ, ಅಲ್ಟರನೇಟ್ ಥೆರೆಪಿ ಮುಂತಾದ ಸುಲಭ ಪ್ರಕೃತಿಚಿಕಿತ್ಸೆಗಳಿಂದ ನೋವು ಶಮನವಾಗುತ್ತದೆ.
ಪ್ರತಿದಿನ ಬೆಳಗ್ಗೆ ಯಾವುದಾದರೊಂದು ರೀತಿಯ ಒಂದು ಹಿಡಿ ಹಸಿರು ಸೊಪ್ಪನ್ನು ತೆಗೆದುಕೊಂಡು ಉದಾಹರಣೆಗೆ: ನುಗ್ಗೆಸೊಪ್ಪು, ಮೆಂತ್ಯೆ ಸೊಪ್ಪು, ಕರಿಬೇವಿನ ಸೊಪ್ಪು ಇತ್ಯಾದಿ ಅದಕ್ಕೆ ಒಂದು ಚಮಚ ಕಪ್ಪು ಎಳ್ಳು, ಒಂದು ಚಮಚ ಅಗಸೆ ಬೀಜ ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದು ಇದು ಪೋಷಕಾಂಶಗಳ ಆಗರ ಇನ್ಪ್ಲಮೇಶನ್ ಪ್ರಕ್ರಿಯೆಯನ್ನು ನಿಧಾನಗೊಳಿಸಿ ನೋವು ನಿವಾರಣೆಗೆ ಸಹಾಯ ಮಾಡುತ್ತದೆ.
ಪ್ರತಿನಿತ್ಯ ಈ ಒಮೆಗಾ-3 ಮೇದಾಮ್ಲ ಸೇವಿಸಬೇಕು ಇದು ಇನ್ಪ್ಲಮೇಶನ್ ಕಡಿಮೆ ಮಾಡುತ್ತದೆ, ನಿತ್ಯ ಬೆಳಗ್ಗೆ ಅಥವಾ ಸಂಜೆ ಎಳೆ ಬಿಸಿಲಿಗೆ 20 ರಿಂದ 30 ನಿಮಿಷ ಮೈ ಒಡ್ಡುವುದರಿಂದ ದೇಹಕ್ಕೆ ಸಾಕಷ್ಟು ವಿಟಮಿನ್ ಡಿ ಸಿಗುತ್ತದೆ ಎಲುಬು ಗಟ್ಟಿಯಾಗಲು ವಿಟಮಿನ್ ಡಿ ಬೇಕು.
ಮಾಂಸಾಹಾರಿಗಳಿಗೆ ಚಿಕನ್, ಮಟನ್, ಮೊಟ್ಟೆಗಳಿಂದ ಸಾಕಷ್ಟು ಪ್ರೊಟೀನ್ ಸಿಗುತ್ತದೆ ಸಸ್ಯಾಹಾರಿಗಳಿಗೆ ಇದು ಲಭ್ಯವಾಗದ ಕಾರಣ ಪ್ರೊಟೀನ್ ಪೌಡರ್ ತೆಗೆದುಕೊಳ್ಳುವುದು ಉತ್ತಮ ಮೊಳಕೆಕಾಳು, ಸೋಯಾ ಸಹ ಪ್ರೊಟೀನ್ ಹೊಂದಿರುತ್ತದೆ, ಪ್ರತಿನಿತ್ಯ ಸುಮಾರು 50 ಗ್ರಾಂ ಶೇಂಗಾ ಬೇಯಿಸಿ ಅಥವಾ ನೆನೆಸಿ ಸೇವಿಸುತ್ತ ಬಂದಲ್ಲಿ ನೋವು ನಿವಾರಣೆಗೆ ಇದು ಸಹಕಾರಿ.
Comments are closed.