ಲೈಂಗಿಕ ಚಟುವಟಿಕೆ ನಂತರ ಗಂಡಸರು ಬೇಗ ನಿದ್ದೆಗೆ ಜಾರುತ್ತಾರೆ. ಆದರೆ, ಹೆಣ್ಣಿಗೆ ನಿದ್ರೆ ದೂರವಾಗುತ್ತದೆ. ಗಂಡಿನ ಇಂಥ ನಡವಳಿಕೆಯಿಂದ ಹೆಣ್ಣು ಖಿನ್ನತೆಗೊಳಗಾಗುತ್ತಾಳೆ. ಕೆಲಸ ಮುಗಿಯುತ್ತಿದ್ದಂತೆ ಗಂಡು ಗೊರಕೆ ಹೊಡೆಯಲು ಅರಂಭಿಸಿದರೆ ಹೆಣ್ಣು ಅತ್ಯಂತ ಮುಜುಗರಕ್ಕೆ ಒಳಗಾಗುತ್ತಾಳೆ. ಆದರೆ, ಗಂಡಿನ ಸ್ವಭಾವವೇ ಅದು. ಅದಕ್ಕೆ ಬೇಜಾರಾಗುವ ಅಗತ್ಯವೇ ಇಲ್ಲ.
- ಸೆಕ್ಸ್ಗೂ ಮುನ್ನ ಅಪ್ಪಿ ಮುದ್ದಾಡುವಂತೆ, ನಂತರವೂ ಪತಿ ಮಹಾಶಯ ತನ್ನನ್ನು ಮುದ್ದಿಸಲಿ ಎಂದು ಹೆಣ್ಣು ಬಯಸುತ್ತಾಳೆ. ಇದು ಇಬ್ಬರ ಮನಸ್ಸಿಗೂ ಮುದ ನೀಡುತ್ತದೆ. ಅಲ್ಲದೇ ಸಂಬಂಧ ಗಟ್ಟಿಯಾಗಲು ನೆರವಾಗುತ್ತದೆ.
- ಪತಿ-ಪತ್ನಿಯ ಲೈಂಗಿಕ ಸಂಬಂಧ ಇಬ್ಬರ ಒತ್ತಡವನ್ನು ಕಡಿಮೆ ಮಾಡುತ್ತದೆ. ಮನಸ್ಸು, ದೇಹವನ್ನು ರಿಲ್ಯಾಕ್ಸ್ ಮಾಡುತ್ತದೆ.
- ರಾತ್ರಿ ಸಮಯದಲ್ಲಿ ನಡೆಯುವ ಲೈಂಗಿಕ ಕ್ರಿಯೆ ಎಲ್ಲ ರೀತಿಯ ಒತ್ತಡವನ್ನೂ ಕಡಿಮೆ ಮಾಡುತ್ತದೆ. ಇದೊಂತರ ರಿಲ್ಯಾಕ್ಸಿಂಗ್ ಮನಸ್ಥಿತಿಗೆ ಮನುಷ್ಯನನ್ನು ಕೊಂಡೋಯ್ಯುತ್ತದೆ.
- ಯಾವಾಗ ಬಾಂಧವ್ಯ ಗಟ್ಟಿಯಾಗಿರುತ್ತೋ, ಆಗ ಅಭದ್ರತೆ ಕಾಡುವುದು ತಪ್ಪುತ್ತದೆ. ಪತಿ-ಪತ್ನಿಯರ ಮಾನಸಿಕ ಸಾಮೀಪ್ಯ ಹೆಚ್ಚಾದಷ್ಟು, ಲೈಂಗಿಕ ಸಂಬಂಧವೂ ಸುಧಾರಿಸುತ್ತದೆ.
- ಈ ನಿಟ್ಟಿನಲ್ಲಿ ತಮ್ಮ ಜೀವನಕ್ಕೆ ಹೇಗೆ ಬೇಕೋ ಹಾಗೆ ಸಂಬಂಧವನ್ನು ಸುಧಾರಿಸಿಕೊಳ್ಳಲು ದಂಪತಿ ಯತ್ನಿಸಬೇಕು. ಆಗ ಸಂಸಾರ ಆನಂದ ಸಾಗರವಾಗುತ್ತದೆ.
Comments are closed.