ಕರಾವಳಿ

ಸಾಮಾನ್ಯವೆನ್ನುವ ಈ ನಾಲ್ಕು ರೋಗಗಳ ಬಗ್ಗೆ ಯಾವತ್ತು ನಿರ್ಲಕ್ಷ್ಯ ತೋರದಿರಿ ..?

Pinterest LinkedIn Tumblr

(1) ಹೃದ್ರೋಗ:
ಒಂದು ಕಾಲದಲ್ಲಿ ಕೇವಲ ಪುರುಷರಿಗೆ ಮಾತ್ರ ಇರುತ್ತಿದ್ದ ಈ ಹೃದ್ರೋಗ ಇಂದು ಮಹಿಳೆಯರಲ್ಲಿ ಬಹಳ ಅಪಾಯಕಾರಿ ಮಟ್ಟದಲ್ಲಿ ಬೆಳೆದಿದೆ. ಪುರುಷರಲ್ಲಿ ಇದರಿಂದಾಗಿ ಕಂಡು ಬರುವ ಲಕ್ಷಣಗಳು ಸ್ತ್ರೀಯರಲ್ಲಿ ಕಾಣಿಸುವುದಿಲ್ಲ ಎಂಬುದೇ ಈ ಸಮಸ್ಯೆಯ ಮೂಲ ಕಾರಣವಾಗಿದೆ.

ಎದೆ ನೋವು ಕೂಡಾ ಕಾಣಿಸಿಕೊಳ್ಳದೆ ಸ್ತ್ರೀಯರಲ್ಲಿ ಹೃದಯಾಘಾತ ಸಂಭವಿಸುತ್ತದೆ. ಬಳಲಿಕೆ, ಬೆವರು, ತಲೆ ತಿರುಗುವುದು ಇತ್ಯಾದಿಗಳನ್ನು ನಾವು ಸಾಮಾನ್ಯವೆಂದು ಭಾವಿಸುತ್ತೇವೆ. ಇವುಗಳೇ ಕೆಲವೊಮ್ಮೆ ಹೃದ್ರೋಗದ ಲಕ್ಷಣಗಳಾಗಿರಬಹುದು.
ಕಾರಣಗಳು: ಮಧುಮೇಹ, ರಕ್ತದಲ್ಲಿ ಕೊಲೆಸ್ಟ್ರಾಲ್, ಬೊಜ್ಜು, ಮಾನಸಿಕ ಒತ್ತಡ.ಈಸ್ಟ್ರೋಜನ್ ಹಾರ್ಮೋನ್‍ಗಳು ಸ್ತ್ರೀಯರಲ್ಲಿ ಹೃದಯಕ್ಕೆ ಸಂರಕ್ಷಣೆಯನ್ನು ನೀಡುತ್ತದೆ. ಇದು ರಕ್ತವು ದಪ್ಪಗಾಗುವ, ಹೆಪ್ಪುಗಟ್ಟುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೊಸ ರೀತಿಯ ಆಹಾರ ಶೈಲಿ, ಜೀವನ ಶೈಲಿಯ ಕಾರಣದಿಂದಾಗಿ ಸ್ತ್ರೀಯರಲ್ಲಿ ಬಹಳ ಶೀಘ್ರವಾಗಿ ಈಸ್ಟ್ರೋಜನ್ ಹಾರ್ಮೋನ್ ಉತ್ಪಾದನೆಯಲ್ಲಿ ವ್ಯತ್ಯಾಸಗಳು ಕಂಡುಬರುತ್ತದೆ. ಇದು ಹೃದ್ರೋಗದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆಹಾರ ಕ್ರಮದಲ್ಲಿ ಬದಲಾವಣೆ, ಜೀವನ ಶೈಲಿಯಲ್ಲಿ ಮಾರ್ಪಾಟು, ವ್ಯಾಯಾಮ, ರೋಗ ಲಕ್ಷಣ ಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಭೇಟಿ ಯಾಗುವುದರ ಮೂಲಕ ಹೃದ್ರೋಗದ ಭೀತಿಯನ್ನು ನಿಯಂತ್ರಿಸಬಹುದು.

2) ಸ್ತನದ ಕ್ಯಾನ್ಸರ್:
ಇಂದು ಸ್ತ್ರೀಯರಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತಿರುವ ಇನ್ನೊಂದು ಆರೋಗ್ಯ ಸಮಸ್ಯೆ ಸ್ತನದ ಕ್ಯಾನ್ಸರ್. 50 ವರ್ಷಕ್ಕೆ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೂ ಇಂದು ಪ್ರಾಯ ವ್ಯತ್ಯಾಸವಿಲ್ಲದೆ ಹೆಚ್ಚಿನ ಸ್ತ್ರೀಯರು ಇದಕ್ಕೆ ಈಡಾಗುತ್ತಿದ್ದಾರೆ.

ಪ್ರಧಾನ ಲಕ್ಷಣಗಳು: ಸ್ತನದಲ್ಲಿ ಕಾಣಿಸಿ ಕೊಳ್ಳುವ ಗೆಡ್ಡೆಗಳು, ಸ್ತನದ ಆಕೃತಿ, ಚರ್ಮದಲ್ಲಿ ಉಂಟಾಗುವ ವ್ಯತ್ಯಾಸ. ಸ್ತನ ತೊಟ್ಟು ಒಳಕ್ಕೆಳೆಯಲ್ಪಟ್ಟಂತಾಗುವುದು, ಸ್ತನ ತೊಟ್ಟಿನಿಂದ ಸ್ರಾವಗಳು, ಸ್ತನತೊಟ್ಟಿ ನಲ್ಲಿ ಉಂಟಾಗುವ ಬಣ್ಣದ ವ್ಯತ್ಯಾಸ, ಸ್ತನವು ಬಾತುಕೊಳ್ಳುವುದು.

ಬಹಳ ಬೇಗ ಋತುಮತಿಗಳಾದವರು, ಋತುಸ್ರಾವ ನಿಂತವರು, ಎದೆಹಾಲುಣಿಸದ ವರು, ಸ್ವಲ್ಪ ಸಮಯ ಎದೆಹಾಲುಣಿಸಿದ ವರು, ಮೂವತ್ತು ವರ್ಷ ಕಳೆದ ಬಳಿಕ ಪ್ರಥಮ ಬಾರಿ ಗರ್ಭಿಣಿಯಾದವರು, ನಿರಂತರ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುವವರು, ಋತುಸ್ರಾವ ನಿಂತ ಬಳಿಕ ದೇಹತೂಕ ಹೆಚ್ಚಿಸಿಕೊಂಡವರು, ಹತ್ತಿರದ ಸಂಬಂಧಿಗಳಲ್ಲಿ ಈ ರೋಗವಿದ್ದರೆ, ಸ್ತನ ಕ್ಯಾನ್ಸರ್‍ಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರು ತ್ತದೆ. ರೋಗ ಸಾಧ್ಯತೆಯಿರುವವರೇ ನಿರಂತರ ಸ್ವಯಂ ಸ್ತನ ತಪಾಸಣೆ ನಡೆಸಿ ತೊಂದರೆ ಕಂಡು ಬಂದರೆ ಆರಂಭದಲ್ಲೇ ಸಂಪೂರ್ಣ ರೋಗ ಗುಣಮುಖರಾಗುವ ಸಾಧ್ಯತೆ ಹೆಚ್ಚಿ ರುತ್ತದೆ. ಆದರೆ ದೌರ್ಭಾಗ್ಯವಶಾತ್ ಎರಡನೆ, ಮೂರನೇ ಘಟ್ಟಕ್ಕೆ ತಲುಪಿದ ಬಳಿಕ ರೋಗ ಪತ್ತೆಯಾಗುತ್ತದೆ. ಇದು ಚಿಕಿತ್ಸೆಯನ್ನು ಸಂಕೀರ್ಣವಾಗಿಸಿ, ಸ್ತನವನ್ನೇ ತೆಗೆದು ಬಿಡಬೇಕಾದ ಅವಸ್ಥೆಗೆ ತಲುಪಿಸುತ್ತದೆ.

3) ಮೂಳೆ ಸವೆತ:
ಸ್ತ್ರೀಯರಲ್ಲಿ ಈಸ್ಟ್ರೋಜನ್ ಹಾರ್ಮೋನಿನ ಕೊರತೆಯಿಂದ ಮೂಳೆ ಸವೆತ ಉಂಟಾಗುತ್ತದೆ. ಗರ್ಭಾಶಯ ತೆಗೆದ ವರು. ಋತುಸ್ರಾವ ನಿಂತ ಸ್ತ್ರೀಯರಲ್ಲಿ ಈ ರೀತಿ ಮೂಳೆ ಸವೆತ ಉಂಟಾಗಲು ಮೂಲ ಕಾರಣ ಈ ಹಾರ್ಮೋನಿನ ಕೊರತೆಯೇ ಆಗಿರುತ್ತದೆ. ಮೂಳೆಗಳ ಆರೋಗ್ಯಕ್ಕೆ ಅತಿ ಅಗತ್ಯವಾದ ಕ್ಯಾಲ್ಸಿಯಂನ ಪ್ರಧಾನ ಆಕರ ವಿಟಮಿನ್ ಆಗಿರುತ್ತದೆ. ಸೂರ್ಯ ಪ್ರಕಾಶದ ಸಹಾಯದಿಂದ ಚರ್ಮವು ಉತ್ಪಾದಿಸುವ ವಿಟಮಿನ್ ಡಿ ಧಾರಾಳ ಸಿಗಬೇಕಿದ್ದರೆ ಸೂರ್ಯಪ್ರಕಾಶ ದೇಹಕ್ಕೆ ಬೀಳಬೇಕು. ಲಕ್ಷಣಗಳು ಗೋಚರಿಸುವುದು ಕಡಿಮೆ ಯಾದುದರಿಂದ ಈ ಸಮಸ್ಯೆಯು ಬಹಳ ನಿಧಾನವಾಗಿ ಪತ್ತೆಯಾಗುತ್ತದೆ. ಸಮಸ್ಯೆ ಆರಂಭವಾಗುವುದಕ್ಕಿಂತ ಮೊದಲೇ ಇದಕ್ಕೆ ಅಗತ್ಯವಾದ ತಪಾಸಣೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ಮೂಳೆಯ ಸಾಂಧ್ರತೆಯನ್ನು ಅಳೆಯುವ ಡೆಕ್ಸಾಸ್ಕ್ಯಾನ್ ಜೊತೆಗೆ ಇನ್ನಿತರ ಪರೀಕ್ಷೆಗಳನ್ನು ನಡೆಸಬೇಕಾಗಬಹುದು.

ಗಮನದಲ್ಲಿಡಿ: ಮೂಳೆಯ ಆರೋಗ್ಯ ವನ್ನು ಸಂರಕ್ಷಿಸಲು 35 ವರ್ಷದ ಬಳಿಕ ಹೆಚ್ಚು ಕ್ಯಾಲ್ಸಿಯಂ, ವಿಟಮಿನ್ ಡಿ, ಪ್ರೊಟೀನ್‍ಗಳು ಸಮೃದ್ಧರಾಗಿರುವ ಸಂತು ಲಿತ ಆಹಾರವನ್ನು ಸೇವಿಸುವುದನ್ನು ಅಭ್ಯಾಸ ಮಾಡಿದರೆ ರೋಗಬಾರದಂತೆ ನೋಡಿಕೊಳ್ಳಬಹುದು. ಇದಕ್ಕಾಗಿ ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ, ವಿೂನು, ಬೀನ್, ಒಣಬೀಜಗಳು, ತರಕಾರಿಗಳು ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಬೇಕು.

4) ಖಿನ್ನತೆ:
ಸ್ತ್ರೀ ಪುರುಷರಿಬ್ಬರಲ್ಲೂ ಈ ಖಿನ್ನತೆಯ ರೋಗ ಕಾಣಿಸಿಕೊಳ್ಳುತ್ತದಾದರೂ ಪುರುಷ ರಿಗೆ ಹೋಲಿಸಿದರೆ ಸ್ತ್ರೀಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಜೀವನದ ವಿವಿಧ ಘಟ್ಟಗಳಲ್ಲಿ ಸ್ತ್ರೀಯ ದೇಹದಲ್ಲಿ ಉಂಟಾಗುವ ಹಾರ್ಮೋನ್ ಉತ್ಪಾದನೆಯ ಏರಿಳಿತವು ಈ ಖಿನ್ನತೆಗೆ ಪ್ರಮುಖ ಕಾರಣವೆಂದು ಹೇಳಲಾಗುತ್ತದೆ. ಗರ್ಭಿಣಿಯಾಗಿರುವಾಗ, ಹೆರಿಗೆಯ ನಂತರ, ಋತುಸ್ರಾವ ನಿಲ್ಲುವ ದಿನಗಳಲ್ಲಿ ಸ್ತ್ರೀಯ ದೇಹದಲ್ಲಿ ಹಾರ್ಮೋನಿನ ಉತ್ಪಾದನೆಯಲ್ಲಿ ವಿಪರೀತ ಏರಿಳಿತಗಳು ಸಂಭವಿಸುತ್ತವೆ. ಇದು ಖಿನ್ನತೆಯ ಸಾಧ್ಯತೆಯನ್ನು ಹೆಚ್ಚಿಸು ತ್ತದೆ. ಇದಕ್ಕೆ ಹೊರತಾಗಿ, ಕೌಟುಂಬಿಕ ಸಮಸ್ಯೆ ಆರ್ಥಿಕ ಸಮಸ್ಯೆಗಳು, ಪರಿಸರವು ಖಿನ್ನತೆಗೆ ಪ್ರಮುಖ ಕಾರಣವಾಗಿರುತ್ತದೆ.

ಲಕ್ಷಣಗಳು: ಅನಗತ್ಯ ಉದ್ವೇಗಕ್ಕೊಳ ಗಾಗುವುದು, ಲೈಂಗಿಕ ಸಂಪರ್ಕದಲ್ಲಿ ಅನಾಸಕ್ತಿ, ತಕ್ಷಣ ಸಿಟ್ಟು ಬರುವುದು, ಅಳು ಬರುವುದು, ಯಾವುದೇ ಕಾರಣ ವಿಲ್ಲದೆ ತಪ್ಪಿತಸ್ಥ ಭಾವನೆ.

ಖಿನ್ನತೆಯ ಲಕ್ಷಣಗಳು ಗೋಚರಿಸಿದರೆ ಆದಷ್ಟು ಶೀಘ್ರ ವೈದ್ಯರನ್ನು ಭೇಟಿಯಾಗಬೇಕು, ಚಿಕಿತ್ಸೆಯಲ್ಲಿ ಖಿನ್ನತೆಯಿಂದ ಹೊರ ಬರಲು ಔಷಧ, ಸೈಕೋಥೆರಪಿಯ ಅಗತ್ಯ ಬೀಳಬಹುದು. ಆರೋಗ್ಯಪೂರ್ಣ ಆಹಾರ ಕ್ರಮ, ನಿಯಮಿತವಾದ ವ್ಯಾಯಾಮ, ಮಾನ ಸಿಕ ಉಲ್ಲಾಸ ನೀಡುವ ಕೆಲಸಗಳಲ್ಲಿ ನಿರತ ವಾಗಿರುವುದು ಇವುಗಳ ಮೂಲಕವೂ ಖಿನ್ನತೆ ಯನ್ನು ದೂರೀ ಕರಿಸಲು ಸಾಧ್ಯವಿದೆ.

Comments are closed.