ಬೇರಿನ ಗಂಧವನ್ನು ಹೊರಲೇಪನವಾಗಿ ಚರ್ಮಕ್ಕೆ ಹಚ್ಚಿದರೆ ಉರಿ ಕಡಿಮೆಯಾಗುತ್ತದೆ. ಲಾವಂಚದ ಬೇರನ್ನು ಅರೆದು ಹೊಟ್ಟೆಯುರಿ ಮತ್ತು ಜ್ವರವಿರುವಾಗ ನೀರಿನೊಡನೆ ಕುಡಿಯುವುದರಿಂದ ಹೊಟ್ಟೆಯುರಿ ಶಮನವಾಗುತ್ತದೆ. ಮತ್ತು ಜ್ವರ ಕೂಡ ವಾಸಿಯಾಗುತ್ತದೆ.
ಲಾವಂಚದ ಬೇರಿನ ಚೂರ್ಣ ಸುಮಾರು 5ರಿಂದ 10 ಗುಂಜಿಯಷ್ಟನ್ನು ಹಾಲಿನಲ್ಲಾಗಲಿ ಅಥವಾ ಜೇನುತುಪ್ಪದಲ್ಲಿಗಾಗಲಿ 1-2 ವಾರ ಸೇವಿಸುವುದರಿಂದ ರಕ್ತ ಪಿತ್ತ ಪರಿಹಾರ.ಬೇರಿನ ಗಂಧವನ್ನು ಚರ್ಮಕ್ಕೆ ಹಚ್ಚುವುದರಿಂದ ಅತಿಯಾದ ಬೆವರಿಕೆ ಕಡಿಮೆಯಾಗುತ್ತದೆ. ಮತ್ತು ಬಿಸಿಲಿನ ಝಳದಿಂದುಂಟಾದ ದುಷ್ಪರಿಣಾಮಗಳು ದೂರವಾಗುತ್ತದೆ.ಬೇರನ್ನು ಮಡಿಕೆಯಲ್ಲಿಟ್ಟ ನೀರಿಗೆ ಹಿಂದಿನ ದಿವಸ ಹಾಕಿ ಬೆಳಗ್ಗೆ ಆ ಮಡಿಕೆಯ ನೀರನ್ನು ಸೇವಿಸುವುದರಿಂದ ದೇಹ ತಂಪಾಗುತ್ತದೆ.ನೀರು ಕುಡಿಯಲು ರುಚಿಕರವಾಗಿರುತ್ತದೆ. ತಮಿಳುನಾಇನಲ್ಲಿ ಬಹುತೇಕ ಕಡೆ ಈ ಪದ್ದತಿಯನ್ನು ಈಗಲೂ ಅನುಸರಿಸುತ್ತಿದ್ದಾರೆ
ಬೇರಿನ ಚೂರ್ಣ ಸೇವನೆಯಿಂದ ವಾಂತಿ ಮತ್ತು ಭೇದಿ ಕಡಿಮೆಯಾಗುತ್ತದೆ. ಬೇರಿನ ಚೂರ್ಣ ಮತ್ತು ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಾಕಿ ತಯಾರಿಸಿದ ಕೇಶ ತೈಲವು ಸುವಾಸನೆಯಿಂದ ಕೂಡಿರುವುದಲ್ಲದೆ, ಕೂದಲ ಬೆಳವಣಿಗೆಗೆ ಸಹಾಯಕವಾಗುತ್ತದೆ, ಹಾಗೂ ಕಣ್ಣಿಗೆ ತಂಪನ್ನು ನೀಡುತ್ತದೆ.
Comments are closed.