ಮನೋರಂಜನೆ

‘ಮಿಸ್ಸಿಂಗ್ ಬಾಯ್’ ಜೋಡಿಯಾದ ಮಲೆಯಾಳಿ ನಟಿ!

Pinterest LinkedIn Tumblr


ಬೆಂಗಳೂರು: ರಘುರಾಮ್ ಯಾವ ಚಿತ್ರ ಮಾಡಿದರೂ ಪ್ರತೀ ಪಾತ್ರವನ್ನೂ ಕಾಡುವಂತೆ, ಸದಾ ನೆನಪಿಟ್ಟುಕೊಳ್ಳುವಂತೆ ರೂಪಿಸುತ್ತಾರೆ. ಅವರೊಂದು ಚಿತ್ರ ಮಾಡುತ್ತಾರೆಂದಾಕ್ಷಣವೇ ಜನ ಕಾತರಗೊಳ್ಳುವುದೂ ಈ ಕಾರಣದಿಂದಲೇ. ಹಾಗಿದ್ದ ಮೇಲೆ ಈ ಸಿನಿಮಾದ ಕೇಂದ್ರ ಬಿಂದುವಿನಂತಿರೋ ನಾಯಕಿಯ ಪಾತ್ರವನ್ನೂ ಅವರು ಅಷ್ಟೇ ಆಸ್ಥೆಯಿಂದ ರೂಪಿಸಿರುತ್ತಾರೆ. ಇದಕ್ಕಾಗಿ ಭಾರೀ ಹುಡುಕಾಟ ನಡೆಸಿ ಕಡೆಗೂ ಮಲೆಯಾಳಿ ಬೆಡಗಿ, ಮಾಡೆಲ್ ಅರ್ಚನಾ ಜಯಕೃಷ್ಣನ್ ಅವರನ್ನು ಕರೆ ತಂದಿದ್ದಾರೆ!

ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ಕೇರಳ ಹುಡುಗಿಯ ಆಗಮನವಾದಂತಿದೆ. ಭಾವನಾ ಮೆನನ್, ನಿತ್ಯಾ ಮೆನನ್, ಪಾರ್ವತಿ, ಮೀರಾ ಜಾಸ್ಮಿನ್, ರಮ್ಯಾ ನಂಬೀಶನ್… ಹೀಗೆ ಕನ್ನಡದಲ್ಲಿ ಮಿಂಚಿರೋ ಮಲೆಯಾಳಿ ಹುಡುಗೀರ ಪಟ್ಟಿ ದೊಡ್ಡದಿದೆ. ಇದೀಗ ಆ ಸಾಲಿಗೆ ಅರ್ಚನಾ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

ಅರ್ಚನಾ ಮೂಲತಃ ಮಾಡೆಲ್. ಇದರೊಂದಿಗೇ ಒಂದಷ್ಟು ಮಲೆಯಾಳಂ ಚಿತ್ರಗಳಲ್ಲಿಯೂ ನಟಿಸಿದ್ದ ಅವರು ಸದ್ಯಕ್ಕೆ ಬೆಂಗಳೂರಿನಲ್ಲಿಯೇ ನೆಲೆ ನಿಂತಿದ್ದಾರೆ. ಮಾಡೆಲಿಂಗನ್ನು ಪ್ರಧಾನವಾಗಿ ಪರಿಗಣಿಸಿದ್ದಾರೆ. ಇಂಥಾ ಅರ್ಚನಾ ಮಿಸ್ಸಿಂಗ್ ಬಾಯ್ ಚಿತ್ರದ ನಿರ್ಮಾಪಕರಿಗೆ ಪರಿಚಿತೆಯಾಗಿದ್ದವರು. ಆ ಕಾರಣದಿಂದಲೇ ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರೆ. ಮಿಸ್ಸಿಂಗ್ ಬಾಯ್ ಮೂಲಕ ಅರ್ಚನಾ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ನೆಲೆ ನಿಲ್ಲೋ ಸೂಚನೆಗಳಿವೆ.

Comments are closed.