ಬೆಂಗಳೂರು: ರಂಗಾಯಣ ರಘು ಅಂದ್ರೆ ಕನ್ನಡದ ಪ್ರತಿಭಾವಂತ ನಟ. ಅವರು ನಿರ್ವಹಿಸಿರೋ ಪಾತ್ರಗಳು, ವಿಶಿಷ್ಟವಾದ ಮ್ಯಾನರಿಸಂ ಕನ್ನಡಿಗರನ್ನೆಲ್ಲ ಆವರಿಸಿಕೊಂಡಿವೆ. ಆದರೆ ಅದೇಕೋ ಒಂದಷ್ಟು ಕಾಲ ರಘು ಒಂದೇ ವೆರೈಟಿಯ ಪಾತ್ರಗಳಲ್ಲಿ ಬಂಧಿಯಾಗಿದ್ದರೆಂಬ ಅಳಲು ಅವರನ್ನು ಮೆಚ್ಚಿಕೊಳ್ಳುವ ಮಂದಿಯಲ್ಲಿಯೇ ಇತ್ತು. ಆದರೆ ಗಿರ್ ಗಿಟ್ಲೆ ಚಿತ್ರ ಅಂಥಾ ಎಲ್ಲ ಕೊರಗನ್ನೂ ನೀಗಿ ರಂಗಾಯಣ ರಘು ಅವರಿಗೆ ಹೊಸಾ ಇಮೇಜ್ ಕಟ್ಟಿ ಕೊಡೋದಂತೂ ನಿಶ್ಚಿತ!
ಈಗಾಗಲೇ ಸೆಕೆಂಡುಗಳ ಲೆಕ್ಕದಲ್ಲಿರೋ ಗಿರ್ ಗಿಟ್ಲೆ ಪ್ರೋಮೋಗಳು ವೈರಲ್ ಆಗಿ ಬಿಟ್ಟಿವೆ. ಅದಕ್ಕೆ ಕಾರಣವಾಗಿರೋದು ರಂಗಾಯಣ ರಘು ಅವರ ಡೈಲಾಗ್ ಮೋಡಿ. ಅವರಿಲ್ಲಿ ಬೇರೆಯದ್ದೇ ಥರದ ಪಾತ್ರದಲ್ಲಿ ಮಿಂಚಿದ್ದಾರೆಂಬ ಸ್ಪಷ್ಟ ಸೂಚನೆ ಈ ಮೂಲಕ ಸಿಕ್ಕಿದೆ.
ಅಂತೂ ಇದರಲ್ಲಿ ರಂಗಾಯಣ ರಘು ಅವರದ್ದು ಖುಲ್ಲಂ ಖುಲ್ಲಾ ಪಾತ್ರ. ಎಲ್ಲವನ್ನೂ ಬಿಡು ಬೀಸಾಗಿ ಹೇಳುವ, ಆ ಮೂಲಕವೇ ಖಡಕ್ ಡೈಲಾಗುಗಳ ಮೂಲಕ ಕಚಗುಳಿ ಇಡುವ ಕ್ಯಾರೆಕ್ಟರ್ ಅವರದ್ದು. ಈ ಪಾತ್ರದ ರಂಪ ರಾಮಾಯಣಗಳು ಚಿತ್ರದುದ್ದಕ್ಕೂ ಇರಲಿವೆ. ಆದರೆ ರಂಗಾಯಣ ರಘು ಯಾವ ಪಾತ್ರ ಮಾಡಿದ್ದಾರೆಂಬುದನ್ನು ಚಿತ್ರ ತಂಡ ಗೌಪ್ಯವಾಗಿಟ್ಟಿದೆ. ಅದನ್ನು ಒಂದೇ ಮಾತಿನಲ್ಲಿ ಹೇಳಲೂ ಸಾಧ್ಯವಿಲ್ಲ. ಯಾಕೆಂದರೆ ಅವರಿಲ್ಲಿ ಹಲವಾರು ಶೇಡುಗಳಲ್ಲಿ ಅವತರಿಸಲಿದ್ದಾರಂತೆ!
Comments are closed.