ಕರಾವಳಿ

ಪೊಳಲಿ ಶ್ರೀ ರಾಜ ರಾಜೇಶ್ವರೀ ದೇವಳದ ‘ಬ್ರಹ್ಮಕಲಶಾಭಿಷೇಕ’ ಸಂಪನ್ನ : ಶ್ರೀ ಕ್ಷೇತ್ರಕ್ಕೆ ಹರಿದು ಬಂದ ಭಕ್ತ ಸಾಗರ

Pinterest LinkedIn Tumblr

ಬಂಟ್ವಾಳ, ಮಾರ್ಚ್ 14 : ಕರಾವಳಿಯ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಪೊಳಲಿ ಶ್ರೀ ರಾಜ ರಾಜೇಶ್ವರೀ ದೇವಸ್ಥಾನದಲ್ಲಿ ಆರಂಭಗೊಂಡಿದ್ದ ಬ್ರಹ್ಮಕಲಶಾಭಿಷೇಕ ಬುಧವಾರ ಸಂಪನ್ನಗೊಂಡಿತು.

ಪೊಳಲಿ ಶ್ರೀ ದುರ್ಗಾಪರಮೇಶ್ವರಿ ಮತ್ತು ಸಪರಿವಾರ ಶ್ರೀ ರಾಜರಾಜೇಶ್ವರಿ ದೇವರುಗಳಿಗೆ ಬುಧವಾರ ಪ್ರಾತಃಕಾಲ ೪ರಿಂದ ಪುಣ್ಯಾಹ, ಗಣಹೋಮ, ದ್ರವ್ಯಕಲಶಾಭಿಷೇಕ ನಡೆದು ಪೂರ್ವಾಹ್ನ 7.40 ರಿಂದ 8.10 ರ ಮೀನ ಲಗ್ನ ಸುಮುಹೂರ್ತದಲ್ಲಿ ‘ಬ್ರಹ್ಮಕಲಶಾಭಿಷೇಕ’ ನಡೆಯಿತು. ಬಳಿಕ ಮಹಾಪೂಜೆ, ಪಲ್ಲಪೂಜೆ, ಮಧ್ಯಾಹ್ನ ಲಕ್ಷಾಂತರ ಜನರಿಗೆ ಅನ್ನಸಂತರ್ಪಣೆ ನಡೆದವು.

ಮಾ. 4ರಿಂದ ಮೊದಲ್ಗೊಂಡು 13ರವರೆಗೆ ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಬಹಳ ಶಿಸ್ತು ಬದ್ಧವಾಗಿ ನಡೆದು ಬಂದಿದ್ದು, ಈ ದಿನಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದರು.

Comments are closed.