ಕರಾವಳಿ

ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಧರಿಸಿದ್ರು ಕಾಂಗ್ರೆಸ್, ಜೆಡಿಎಸ್ ಚಿಹ್ನೆಯುಳ್ಳ ಶಾಲು!

Pinterest LinkedIn Tumblr

ಉಡುಪಿ: ಉಡುಪಿಯಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಹಾಲು ಜೇನಿನಂತೆ ಬೆರೆಯಲಿದೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದು ಮೈತ್ರಿ ಧರ್ಮದಂತೆ ಜೆಡಿಎಸ್‌ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಪರವಾಗಿ ಸ್ಪರ್ಧಿಸಲಿದ್ದೇನೆ. ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಇಂಥ ಅವಕಾಶ ಸಿಕ್ಕಿದೆಯೆಂದು ಪ್ರಮೋದ್ ಮಧ್ವರಾಜ್ ಹೇಳಿದರು.

ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಟಿಕೆಟ್‌ ಪಡೆದ ಪ್ರಮೋದ್‌ ಮಧ್ವರಾಜ್‌ ಶುಕ್ರವಾರ ಉಡುಪಿಗೆ ಆಗಮಿಸಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದರು.

ತನ್ನ ನಿವಾಸಕ್ಕೂ ತೆರಳುವ ಮೊದಲಿಗೆ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿದ ಪ್ರಮೋದ್‌, ಕಾಂಗ್ರೆಸ್‌- ಜೆಡಿಎಸ್‌ ಜೋಡಿ ಚಿಹ್ನೆಯ ಶಾಲು ಧರಿಸಿದ್ದರು. ಇಂತಹ ಶಾಲು ಈವರೆಗೆ ಯಾರೂ ತಯಾರಿಸಿಲ್ಲ. ಪಕ್ಷ, ಚಿಹ್ನೆ, ಬಗ್ಗೆ ಜನರ ಗೊಂದಲ ನಿವಾರಿಸಲು ಈ ಶಾಲನ್ನು ಚುನಾವಣೆ ಮುಗಿಯುವ ದಿನಾಂಕ ಎ.18ರ ವರೆಗೆ ತೊಟ್ಟಿರುತ್ತೇನೆ ಎಂದರು.

Comments are closed.