ಬಾಯಿ ಮತ್ತು ಮೂಗಿನ ಹಿಂದೆ ಇರುವ ವಾಯು ನಾಳದಲ್ಲಿ ಗಾಳಿ ಸರಾಗವಾಗಿ ಹರಿಯಲು ಅಡ್ಡಿಯಾದಲ್ಲಿ ಗೊರಕೆ ಉಂಟಾಗುತ್ತದೆ. ಎಂಥ ಸಂಗೀತಪ್ರಿಯರೂ ಗೊರಕೆಯ ಸದ್ದನ್ನು ಇಷ್ಟಪಡುವುದಿಲ್ಲ. ಈ ಗೊರಕೆ ನಮಗೆ ಗೊತ್ತಿಲ್ಲದೆ ಹೊರಹೊಮ್ಮುವ ಗಾಯನ! ದೇಹಕ್ಕೆ ವಯಸ್ಸಾದಂತೆ ಗಂಟಲಿನಲ್ಲಿ ಎಲುಬುಗಳು ಬಿಗಿ ಕಳೆದುಕೊಂಡು ಗಾಳಿಯ ದಾರಿ ಕಿರಿದುಗೊಳ್ಳುತ್ತದೆ. ಆಗ ಗೊರಕೆ ಉತ್ಪತ್ತಿಯಾಗುತ್ತದೆ.
ಶೇ 40 ರಿಂದ 50 ರಷ್ಟು ಆರೋಗ್ಯವಂತ ವಯಸ್ಕರು ಆಗಾಗ ಗೊರಕೆ ಹೊಡೆಯುತ್ತಾರೆ. ಕೇವಲ ಶೇ 25 ರಷ್ಟು ವಯಸ್ಕರಿಗೆ ಗೊರಕೆ ರೂಢಿಯಾಗಿರುತ್ತದೆ. ಗಂಡಸರು, ದೇಹಸ್ಥೂಲರು ಮತ್ತು ದೊಡ್ಡಹೊಟ್ಟೆ ಹಾಗೂ ಮೋಟುಕತ್ತು ಇರುವವರಿಗೆ ಮೇಲಿಂದ ಮೇಲೆ ಗೊರಕೆ ಬರುತ್ತಿರುತ್ತದೆ. ವಯಸ್ಸು ಹೆಚ್ಚಾದಂತೆ ಗೊರಕೆಯ ಹಾವಳಿ ಮತ್ತಷ್ಟು ಹೆಚ್ಚುತ್ತದೆ.
ಸಾಮಾನ್ಯವಾಗಿ ಸ್ಥೂಲಕಾಯವೂ ಗೊರಕೆಗೆ ಕಾರಣವಾಗಬಹುದು. ಹಾಗಾಗಿ ತೂಕ ಕಳೆದುಕೊಳ್ಳುವ ಯತ್ನ ನಡೆಸಿ. ಕೆಲವೊಂದು ಜೀವನ ಕ್ರಮ ಬದಲಾವಣೆಯಿಂದ ಗೊರಕೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಗೊರಕೆಗೆ ಬ್ರೇಕ್ ಹಾಕಲು ಸಿಂಪಲ್ ಅಸ್ತ್ರಗಳಿವೆ…
*ಹೆಚ್ಚಾಗಿ ಅಂಗಾತ ಮಲಗುವುದರಿಂದ ಗೊರಕೆ ಹೊಡೆಯುತ್ತಾರೆ. ಹಾಗಾಗಿ ಅಂಗಾತ ಮಲಗುವ ಬದಲು ಒಂದು ಬದಿಗೆ ಮಲಗುವ ಅಭ್ಯಾಸ ಮಾಡಿ. ಮದ್ಯಪಾನ, ಕಫೈನ್ ಅಂಶದ ಆಹಾರ ಸೇವನೆಗೂ ಗುಡ್ ಬೈ ಹೇಳಿ.
*ಮಲಗುವ ಕೋಣೆಯಲ್ಲಿ ಶುದ್ಧ ಗಾಳಿಯಿದ್ದರೆ ಗೊರಕೆ ಹಾಜರಿ ಹಾಕುವುದಿಲ್ಲ. ದೇಹದಲ್ಲಿ ತೂಕ ಹೆಚ್ಚಿದಷ್ಟೂ ಮೂಗಿನಲ್ಲಿ ಕೊಬ್ಬು ಜಾಸ್ತಿ ಆಗುವುದೂ ಗೊರಕೆಗೆ ಕಾರಣವಾಗುತ್ತದೆ. ಹೀಗಾಗಿ ದೇಹತೂಕ ಇಳಿಸಿಕೊಂಡಾರೂ ಈ ರಾಗಕ್ಕೆ ಅಂತ್ಯ ಹಾಡಬಹುದು. ಧೂಮಪಾನ. ಮದ್ಯಪಾನ ಚಟಗಳನ್ನು ತ್ಯಜಿಸುವುದು ಒಳಿತು.
*ಮೂಗಿನ ಒಳ ಭಾಗವನ್ನು ಸ್ವಚ್ಛವಾಗಿಡಲು ಪ್ರಯತ್ನಿಸಬೇಕು. ಹೀಗೆ ಮಾಡುವುದರಿಂದ ಬಾಯಲ್ಲಿ ಉಸಿರಾಡುವ ಬದಲು ಮೂಗಿನ ಮೂಲಕವೇ ಉಸಿರಾಡಲು ಅವಕಾಶವಿರುತ್ತದೆ.
*ರಾತ್ರಿ ಅತಿಯಾಗಿ ಊಟ ಮಾಡುವುದು ಮಾಡಿದರೆ ಗೊರಕೆ ಬರುವ ಛಾನ್ಸ್ ಇದೆ. ಹಾಗಾಗಿ ರಾತ್ರಿ ಹಗುರವಾದ ಭೋಜನ ಮಾಡಿ. ಆದಷ್ಟು ರಾತ್ರಿ ಮಲಗುವ ಎರಡು ಗಂಟೆಗಳ ಮೊದಲು ಊಟ ಮಾಡಿ. ಇದರಿಂದ ಗೊರಕೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.
*ಏಲಕ್ಕಿಯು ಕಟ್ಟಿಕೊಂಡಿರುವ ಮೂಗಿನ ಹೊಳ್ಳೆಯನ್ನು ಸರಿಪಡಿಸಿ ಉಸಿರಾಟವನ್ನು ಸರಾಗವಾಗಿಸುತ್ತದೆ. ಅರ್ಧ ಚಮಚ ಏಲಕ್ಕಿ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ತಣಿಸಬೇಕು. ರಾತ್ರಿ ಮಲಗುವ ಮುನ್ನ ಈ ಕಷಾಯವನ್ನು ಕುಡಿಯಬೇಕು.
*ಮಲಗುವ ಕೋಣೆಯಲ್ಲಿ ಧೂಳು, ಸಾಕು ಪ್ರಾಣಿಗಳ ವಾಸ ಇರದಂತೆ ನೋಡಿಕೊಳ್ಳಬೇಕು. ಹಾಸಿಗೆಯು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಈ ರೀತಿ ಮಾಡುವುದರ ಮೂಲಕವೂ ಗೊರಕೆಯನ್ನು ತಡೆಯಬಹುದು.
Comments are closed.