ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್ಶಿಪ್ನಲ್ಲಿ ಭಾನುವಾರ ಸನ್ರೈಸರ್ಸ್ ಹೈದಾರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಆಂಡ್ರೆ ರಸೆಲ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಆರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಎರಡು ಬಾರಿಯ ಚಾಂಪಿಯನ್ ಕೆಕೆಆರ್ 19.4 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿ ಸನ್ ರೈಸರ್ಸ್ ಗೆಲುವಿನ ಆಸೆಗೆ ತಣ್ಣೀರೆರಚಿದೆ.
ಈ ಮೊದಲು ಟಾಸ್ ಸೋತು ಬ್ಯಾಟಿಂಗ್ಗಿಳಿದ ಹೈದರಾಬಾದ್ ಪರ ಡೇವಿಡ್ ವಾರ್ನರ್ ಭರ್ಜರಿ ಅರ್ಧಶತಕ (85), ಬೈರ್ಸ್ಟೋವ್ (39), ವಿಜಯ್ ಶಂಕರ್ (40), ಯೂಸುಫ್ ಪಠಾಣ್ (1) ಹಾಗೂ ಮನೀಶ್ ಪಾಂಡೆ (8) ರನ್ ಗಳಿಸಿದ್ದು ನಿಗದಿತ ಇಪ್ಪತ್ತು ಓವರ್ ಗಳಲ್ಲಿ ,ಊರು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತ್ತು.
ಹೈದರಾಬಾದ್ ಒಡ್ಡಿದ 182 ರನ್ ಗುರಿ ಬೆನ್ನತ್ತಿದ ಕೋಲ್ಕತಾ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಬಹು ನಿರೀಕ್ಷಿತ ಆಟಗಾರ ಕ್ರಿಸ್ ಲಿನ್ ಸಿಕ್ಸರ್ (7), ಬೇಗನೇ ಪೊಎವಿಲಿಯನ್ ಹಾದಿ ಹಿಡಿದರು.
ಇನ್ನು ಕೆಕೆಆರ್ ಪರ ನಿತೀಶ್ ರಾಣಾ (68), ರಾಬಿನ್ ಉತ್ತಪ್ಪ (35), ದಿನೇಶ್ ಕಾರ್ತಿಕ್ (2), ಆಂಡ್ರೆ ರುಸೆಲ್ (49) ಹಾಗೂ ಶುಭಾನ್ ಗಿಲ್ (18) ರನ್ ಗಳಿಸಿ ತಂಡವನ್ನು ಗೆಲುವಿನ ಹಾದಿಗೆ ತಂದಿದ್ದರು.
ಹೈದರಾಬಾದ್ ಪರ ಶಕೀಬ್ ಅಲ್ ಹಸನ್, ಸಂದೀಪ್ ಶರ್ಮಾ, ಸಿದ್ದಾರ್ಥ್ ಕೌಲ್ ಹಾಗೂ ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಗಳಿಸಿದರೆ ಆ ಮುನ್ನ ಬೌಇಲಿಂಗ್ ನಡೆಸಿದ್ದ ಕೆಕೆಆರ್ ಪರ ಆಂಡ್ರೆ ರೌಸೆಲ್ 2, ಪಿಯೂಶ್ ಚಾವ್ಲಾ 1 ವಿಕೆಟ್ ಕಿತ್ತು ಮಿಂಚಿದ್ದರು.
Comments are closed.