ಮಂಗಳೂರು, ಮಾರ್ಚ್ 24 :ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದ. ಕ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಉದ್ಘಾಟನಾ ಸಮಾರಂಭ ಮಾ.25ರಂದು ನಡೆಯಲಿದೆ ಎಂದು ಎಂದು ಸಂಘದ ಅಧ್ಯಕ್ಷ ಸತೀಶ್ ಬೋಳಾರ್ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ (ಮಾ.25ರಂದು) ಸಂಜೆ 4 ಗಂಟೆಗೆ ನಗರದ ಪುರಭವನದಲ್ಲಿ ನೂತನ ಸಂಘದ ಉದ್ಘಾಟನೆ ನಡೆಯಲಿದ್ದು, ಶ್ರೀದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ನೂತನ ಸಂಘವನ್ನು ಉದ್ಘಾಟಿಸ ಲಿದ್ದಾರೆ. ಎ .ಜೆ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ಡಾ.ಎ.ಜನಾರ್ದನ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
.ಮುಂಬಯಿ ಕೆಇವೈ ಎಸ್ ಗ್ರೂಪ್ ಆಫ್ ಹೊಟೇಲ್ಸ್‌ನ ಹರೀಶ್ ಅಮೀನ್ ಲಾಂಛನ ಬಿಡುಗಡೆ ಮಾಡಲಿದ್ದು, ಯೇನಪೊಯ ವಿವಿ ಕುಲಪಾತಿ ಯೆನಪೋಯ ಅಬ್ದುಲ್ ಕುಂಜ್ಞ್ ಸೇವಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಮಾಂಡ್ ಸೋಭಾಣ್ ಅಧ್ಯಕ್ಷ ಲುವಿ ಜೆ.ಪಿಂಟೋ ಪ್ರತಿಜ್ಞಾನಿಧಿ ಸ್ವೀಕಾರ ನೆರವೇರಿಸಲಿದ್ದು, ಚೆಪ್‌ಟಾಕ್ ಹಾಸ್ಪಿಟಾಲಿಟಿ ಸರ್ವೀಸ್ ನ ವ್ಯವಸ್ಥಾಪಕ ನೀರ್ದೇಕ ಗೋವಿಂದ ಬಾಬು ಪೂಜಾರಿ ನಟ ಡಾರಾಜಶೇಖರ್ ಕೋಟ್ಯಾನ್ ಬಾಗವಹಿಸಲಿದ್ದಾರೆ ಎಂದು ಡಾ.ರಾಜಶೇಖರ್ ಕೊಟ್ಯಾನ್ ಬಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷ ಪೆಲಿಕ್ಸ್ ವೇವಲ್ ಲಾಸ್ರಾದೋ, ಮೊಹಮ್ಮದ್ ಇಕ್ಬಾಲ್, ಉಪಾಧ್ಯಕರಾದ ರಾಜೇಶ್ ಕೆ, ಗೋಕುಲ್ ಕದ್ರಿ ,ಪ್ರ ಕಾರ್ಯದರ್ಶಿ ದೀಪಕ್ ಕೋಟ್ಯಾನ್ ಗುರುಪುರ, ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ ಖಜಾಂಚಿ ಯಶವಂತ್ ಪೂಜಾರಿ ಉಪಸ್ಥಿತರಿದ್ದರು.
Comments are closed.