ಕಣ್ಣು ನಮಗೆ ಎಷ್ಟು ಅವಶ್ಯಕ ಹಾಗೂ ಪ್ರಧಾನವಾದದ್ದು ಎಂಬುದು ನಿಮಗೆ ತಿಳಿದಿದೆ. ಆದರೆ ನಮ್ಮ ನಿರ್ಲಕ್ಷ ದಿಂದ, ಪೋಷಕಾಂಶಗಳ ಕೊರತೆಯಿಂದ, ಕಲುಷಿತ ವಾತಾವರಣ, ಹೆಚ್ಚು ಹೊತ್ತು ಟಿವಿ ಮೊಬೈಲ್ ಗಳನ್ನ ಬಳಕೆ ಮಾಡುವುದರಿಂದ ಹೀಗೆ ಅನೇಕ ಕಾರಣಗಳಿಂದ ನಮ್ಮ ಕಣ್ಣಿನ ದೃಷ್ಟಿಯಲ್ಲಿ ದೋಷವುಂಟಾಗಿರುತ್ತದೆ. ಕಣ್ಣಿನ ಪೊರೆ ಉಂಟಾಗಿರುತ್ತದೆ.
ಇದಕ್ಕೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದು ಪರಿಹಾರ ಪಡೆದುಕೊಳ್ಳಬಹುದು. ಆದರೆ ಕೆಲವು ಉತ್ತಮ ಸರಳ ಕ್ರಮಗಳಿಂದ ಹವ್ಯಾಸ ಗಳಿಂದ ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಬಹುದು .ಹಾಗಾದರೆ ಇಲ್ಲಿದೆ ನೋಡಿ ಕಣ್ಣಿನ ದೋಷ ನಿವಾರಸಿಕೊಳ್ಳಬಹುದಾದ ಸರಳ ಉಪಾಯಗಳು.
1. ಆಹಾರ ಕ್ರಮ
ಕಣ್ಣಿನ ದೋಷಕ್ಕೆ ಮುಖ್ಯ ಕಾರಣವೆಂದರೆ ವಿಟಮಿನ್ ಗಳು. ವಿಟಮಿನ್ ಎ, ಈ, ಮತ್ತು ಸಿ ಉಳ್ಳ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸಬಹುದು. ಹಸಿ ತರಕಾರಿಗಳು, ಸೊಪ್ಪು ವಿಟಮಿನ್ ಸಿ ಅಂಶವುಳ್ಳ ಕಿತ್ತಳೆ, ನೇರಳೆ ಹಣ್ಣು, ಸಿಬೇ ಹಣ್ಣು ಮುಂತಾದ ಪದಾರ್ಥಗಳನ್ನು ಸೇವಿಸಬೇಕು. ಮಾಂಸ ಹಾರವಾದ ಮೀನು ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮ ಹಾಗೆ ಏಡಿಯನ್ನ ಸೇವಿಸುವುದರಿಂದ ಕಣ್ಣಿನ ದೃಷ್ಟಿ ವೃದ್ದಿಯಾಗುತ್ತದೆ.
2. ಒಳ್ಳೆಯ ವಾತಾವರಣ.
ನಾವು ಇರುವ ವಾತಾವರಣ ನಮ್ಮ ಕಣ್ಣಿನ ದೃಷ್ಟಿಯ ಮೇಲೆ ಪ್ರಭಾವ ಬೀರುತ್ತದೆ. ನಾವು ಇರುವ ಕೊಠಡಿಯಲ್ಲಿ ಸರಿಯಾದ ಗಾಳಿ ಬೆಳಕು ಇರಬೇಕು. ಆಮ್ಲಜನಕದ ಕೊರತೆ ಇರಬಾರದು. ನಾವು ಮಲಗುವಾಗ ಮುಖದ ತುಂಬಾ ಹೊದಿಕೆಯನ್ನು ಮುಚ್ಚಿಕೊಂಡು ಮಲಗಬಾರದು.ಹೊರಗಿನಿಂದ ಬಂದ ತಕ್ಷಣ ಶುದ್ಧವಾದ ತಣ್ಣೀರಿನಿಂದ ಕಣ್ಣನು ತೊಳೆದು ಕೊಳ್ಳಬೇಕು.
ಕಣ್ಣಿಗೆ ತೀಕ್ಷ್ಣವಾದ ಕಿರಣಗಳು ಬೀಳದಂತೆ ಎಚ್ಚರ ವಹಿಸಬೇಕು ಹಾಗಂತ ಸೂರ್ಯನ ಬಿಸಿಲಿನಿಂದ ದೂರ ಉಳಿಯುವುದಲ್ಲ . ಸೂರ್ಯನ ಬೆಳಕಿನ ಕೊರತೆ ಉಂಟಾದರೂ ಕಣ್ಣಿನ ಆರೋಗ್ಯಕ್ಕೆ ಹಾನಿಯಾಗುತ್ತದೆ.
ರಾತ್ರಿ ವೇಳೆಯಲ್ಲಿ ಮೊಬ್ಬು ಬೆಳಕಿನಲ್ಲಿ ಓದುವುದಾಗಲಿ, ಟಿವಿ ನೋಡುವುದಾಗಲಿ ಮಾಡಬಾರದು ಆದಷ್ಟು ಎಲ್ಇಡಿ ಬಲ್ಬ್ ಗಳನ್ನೂ ಬಳಸುವುದು ಉತ್ತಮ.ಮತ್ತು ಸಾಕಷ್ಟು ನಿದ್ದೆ ತಪ್ಪದೆ ಮಾಡಬೇಕು. ನಿದ್ದೆಗೆಡುವುದು ಕಣ್ಣಿಗೆ ಅಪಾಯಕಾರಿ.
3. ಕಣ್ಣಿನ ವ್ಯಾಯಾಮ.
ಅಚ್ಚ ಹಸಿರಿನ ಪ್ರಕೃತಿಯನ್ನು ನೋಡುವುದರಿಂದ ಕಣ್ಣಿಗೆ ವ್ಯಾಯಮದಂತಾಗುತ್ತದೆ. ಒಮ್ಮೆ ದೂರದ ಹಸಿರುವಾತವರಣ ನೋಡಿ ತಕ್ಷಣ ಹತ್ತಿರದ ನಮ್ಮ ಅಂಗೈಯನ್ನು ಅಥವಾ ತೀರಾ ಅತ್ತಿರದ ವಸ್ತುವನ್ನು ನೋಡಬೇಕು ಹೀಗೆ ಒಮ್ಮೆ ದೂರದ ದೃಷ್ಟಿ ನಂತರ ಆತ್ತಿರದ ದೃಷ್ಟಿ ಬೀರುತ್ತಾ ಈ ಕಣ್ಣಿನ ವ್ಯಾಯಾಮ ಸ್ವಲ್ಪ ಸಮಯ ಮಾಡಬೇಕು. ಹೀಗೆ ಮಾಡುವುದರಿಂದ ಕಣ್ಣಿಗೆ ಆಯಾಸ ಕಡಿಮೆಯಾಗುತ್ತದೆ.
Comments are closed.