ಮೀರತ್: ಆರೋಗ್ಯ ಸಮಸ್ಯೆಯಿಂದ ದಾಖಲಾಗಿದ್ದ ಮಹಿಳಾ ರೋಗಿಯ ಮೇಲೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳು ಐಸಿಯುನಲ್ಲೇ ಸಾಮೂಹಿಕ ಅತ್ಯಾಚಾರ ವೆಸಗಿರುವ ಧಾರುಣ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವಿವಾಹಿತ ಮಹಿಳೆ ಮೇಲೆ ಆಸ್ಪತ್ರೆಯ ಒಟ್ಟು ನಾಲ್ಕು ಸಿಬ್ಬಂದಿಗಳು ಅತ್ಯಾಚಾರಗೈದಿರುವ ಘಟನೆ ನಡೆದಿದೆ. ಉತ್ತರಪ್ರದೇಶದ ಮೀರತ್ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆಯ ಬಂಧನ ಮಾಡಲಾಗಿದೆ.
ಉಸಿರಾಟದ ತೊಂದರೆ ಎದುರಿಸುತ್ತಿದ್ದ ಮಹಿಳೆಯನ್ನ ಆಕೆಯ ಗಂಡ ಆಸ್ಪತ್ರೆಗೆ ದಾಖಲು ಮಾಡಿದ್ದನು. ಆಕೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಕಾಮುಕರು ಆಕೆಗೆ ಇಂಜೆಕ್ಷನ್ ನೀಡಿದ್ದು, ನಿದ್ರೆಗೆ ಜಾರುತ್ತಿದ್ದಂತೆ ಈ ಕೃತ್ಯವೆಸಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಕೆಯ ಗಂಡ ದೂರು ದಾಖಲು ಮಾಡಿದ್ದಾನೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಆಸ್ಪತ್ರೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಂತ್ರಸ್ಥ ಮಹಿಳೆ, ತಾನು ಭಾಗಪತ್ ಮೂಲದವಳಾಗಿದ್ದು, ಮೀರತ್ ನಲ್ಲಿ ಗಂಡನೋಂದಿಗೆ ವಾಸಿಸುತ್ತಿದ್ದೇನೆ. ಉಸಿರಾಟದ ತೊಂದರೆ ಮತ್ತು ಲಿವರ್ ಸೋಂಕುನಿಂದ ಆಸ್ಪತ್ರೆಗೆ ದಾಖಲಾಗಿದ್ದೆ. ಐಸಿಯುಗೆ ಕರೆದುಕೊಂಡು ಹೋದ ಮೂವರು ಸಿಬ್ಬಂದಿಗಳು ನನಗೆ ಮತ್ತಿನ ಇಂಜೆಕ್ಷನ್ ನೀಡಿ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರವೆಸಗಿದರು. ನನಗೆ ಪ್ರಜ್ಞೆ ಬಂದ ಬಳಿಕ ನನ್ನ ಪತಿಗೆ ಈ ವಿಚಾರ ತಿಳಿಸಿದೆ ಎಂದು ಹೇಳಿದ್ದಾಳೆ.
Comments are closed.