ಬೆಂಗಳೂರು: ಸುಮಲತಾ ಅಂಬರೀಷ್ ನಮ್ಮ ಮನೆ ಮಗಳು, ಅವರಿಗೆ ಅವಮಾನ ಮಾಡುವುದು ಸರಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಜಾತಿ ವಿಷಯ ಮಾತನಾಡುವುದು ಸರಿಯಲ್ಲ, ಜಾತಿ ರಾಜಕೀಯ ಎಳೆದು ತಂದಿದ್ದು ಸರಿಯಲ್ಲ, ಜಾತಿ ಬಗ್ಗೆ ಮಾತನಾಡಿರುವ ಸಂಸದ ಎಲ್ ಆರ್ ಶಿವರಾಮೇಗೌಡ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇನ್ನೂ ನಾನು ಕಾಂಗ್ರೆಸ್ ಯಾಕೆ ಬಿಟ್ಟೆ ಎಂಬುದನ್ನು ಸಿದ್ದರಾಮಯ್ಯ ಅವರಿಗೆ ಕೇಳಿ ಎಂದು ಹೇಳಿದ, ನಾನು ಕಾಂಗ್ರೆಸ್ ಬಿಟ್ಟಾಗ ಹೈಕಮಾಂಡ್ ವೀಕ್ ಆಗಿತ್ತು ಎಂಬುದಾಗಿ ತಿಳಿಸಿದ್ದಾರೆ, ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಲ್ಲ ಬಿಜೆಪಿ ಅಭ್ಯರ್ಥಿ ಎಂದು ಹೇಳಿದ್ದಾರೆ.
ಯಾರಿಗೂ ಬಾವುಟ ಹಿಡಿಯಬೇಡಿ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಭಾವುಟ ಹಿಡಿದ ಮಾತ್ರಕ್ಕೆ ಮತ ಹಾಕುತ್ತಾರೆ ಎಂಬುದು ಸುಳ್ಳು ಎಂದು ತಿಳಿಸಿದ್ದಾರೆ.
Comments are closed.