ಕರ್ನಾಟಕ

ಸುಮಲತಾ ಪರ ರೈತ ಮಹಿಳೆ ಜಯಶ್ರೀ ಪ್ರಚಾರ

Pinterest LinkedIn Tumblr


ಮಂಡ್ಯ: ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಪರ ಬೆಳಗಾವಿ ಜಿಲ್ಲೆಯ ರೈತ ಸಂಘದ ಮಹಿಳಾನಾಯಕಿ ಜಯಶ್ರೀ ಅವರು ಪಾಂಡವಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.

ಇದೇ ವೇಳೆ ಪಾಂಡವಪುರದ ಕುಂಬಾರಕೊಪ್ಪಲು ಗ್ರಾಮದಲ್ಲಿ ಮಾತನಾಡಿದ ಜಯಶ್ರೀ ಅವರು ಸುಮಲತಾ ಅವರನ್ನು ಬೆಂಬಲಿಸಲು ಬೆಳಗಾವಿಯಿಂದ ಬಂದಿದ್ದು, ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ ಸುಮಲತಾರನ್ನು ಬೆಂಬಲಿಸಿ. ರೈತರ ಸಾಲಮನ್ನಾ ಆಗಿಲ್ಲ ಹಾಗೂ ರೈತರಿಗೆ ನೋಟಿಸ್​ ಬರುವುದು ನಿಂತಿಲ್ಲ. ಹೀಗಾಗಿ ಮತ್ತೊಮ್ಮೆ ಗಿಮಿಕ್​ ಮಾತಿಗೆ ಮರುಳಾಗಬೇಡಿ ಎಂದು ಎದುರಾಳಿಗಳಿಗೆ ಟಾಂಗ್​ ನೀಡಿದರು.

ಇದೇ ವೇಳೆ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​, ಜಯಶ್ರೀ ತುಂಬಾ ದಿನಗಳಿಂದ ನನ್ನ ಪರ ಪ್ರಚಾರ ನಡೆಸುತ್ತಿದ್ದು ಅವರ ಧ್ವನಿ ತುಂಬಾ ಉತ್ತಮವಾಗಿದೆ ಎಂದರು. ಹಾಗೂ ಹಿಂದೆ ಸಿಎಂ ಎಚ್​ಡಿಕೆ ಅವರು ಜಯಶ್ರೀ ಅವರನ್ನು ಕುರಿತು 4 ವರ್ಷ ಎಲ್ಲಿ ಮಲಗಿದ್ದೀಯಮ್ಮ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಸುಮಲತಾ, ಸಿಎಂ ಜಯಶ್ರೀ ಅವರ ವಿರುದ್ಧ ಮಾತನಾಡಿದ್ದು ನೋಡಿದ್ದೇನೆ. ಇದೆಲ್ಲ ನೋಡಿದರೆ ಜೆಡಿಎಸ್​ ನವರಿಗೆ ಹೆಣ್ಣುಮಕ್ಕಳ ಬಗ್ಗೆ ಗೌರವ ಇಲ್ಲ ಎಂದೆನಿಸುತ್ತದೆ ಎಂದರು.

ಚರ್ಚೆಗೆ ನಿಖಿಲ್​ ನಿರಾಕರಣೆ ವಿಚಾರವಾಗಿ ಮಾತನಾಡಿದ ಸುಮಲತಾ ಅವರು ನಿಖಿಲ್​ ಚರ್ಚೆಗೆ ಬರದಿದ್ದರೆ ಸರಿ ಬಿಡಿ, ಅಂಬರೀಷ್​, ವಿಷ್ಣುವರ್ಧನ್​ ಹೆಸರು ಬಳಸಿ ಚುನಾವಣೆಯಲ್ಲಿ ಲಾಭ ಪಡೆಯಲು ಜೆಡಿಎಸ್​ ನೋಡುತ್ತಿದೆ. ಮಂಡ್ಯದ ಸ್ವಾಭಿಮಾನ ಏನು ಅನ್ನೋದು ಮೇ 23ರಂದು ಫಲಿತಾಂಶ ಬಂದ ಮೇಲೆ ತಿಳಿಯುತ್ತದೆ ಎಂದರು

Comments are closed.