ಮನೋರಂಜನೆ

ಶಾಹಿದ್​-ವಿಜಯ್​ ದೇವರಕೊಂಡ ಅಭಿಮಾನಿಗಳ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಾರ್​

Pinterest LinkedIn Tumblr


ಸ್ಯಾಂಡಲ್​ವುಡ್​, ಬಾಲಿವುಡ್​, ಕಾಲಿವುಡ್​, ಟಾಲಿವುಡ್​ನಲ್ಲಿ ಆಗಾಗ ತಾರೆಯರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಡೈಲಾಗ್​ ವಾರ್​ ನಡೆಯೋದು ಸಹಜ. ಇವು ಪರಿಸ್ಥಿತಿಗಳಿಗೆ ತಕ್ಕಂತೆ ಉದ್ಭವಿಸಿ, ನಂತರ ತಣ್ಣಗಾಗುತ್ತವೆ. ಆದರೆ ಈ ಸಲ ಬಾಲಿವುಡ್​ ನಟರೊಬ್ಬರ ಅಭಿಮಾನಿಗಳು ಹಾಗೂ ಟಾಲಿವುಡ್​ ನಟರೊಬ್ಬರ ಅಭಿಮಾನಿಗಳ ನಡುವೆ ಸೋಶಿಯಲ್​ ಮೀಡಿಯಾ ವಾರ್​ ಆರಂಭವಾಗಿದೆ.

ಹೌದು, ತೆಲುಗಿನಲ್ಲಿ ರೌಡಿ ಎಂದೇ ಖ್ಯಾತರಾಗಿರುವ ‘ಅರ್ಜುನ್​ ರೆಡ್ಡಿ’ ಖ್ಯಾತಿಯ ನಟ ವಿಜಯ್​ ದೇವರಕೊಂಡ ಹಾಗೂ ಬಾಲಿವುಡ್​ ನಟ ಶಾಹಿದ್​ ಕಪೂರ್​ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾರ್​ ನಡೆಯುತ್ತಿದೆ. ನಿನ್ನೆಯಷ್ಟೆ ‘ಅರ್ಜುನ್​ ರೆಡ್ಡಿ’ಯ ಹಿಂದಿ ರಿಮೇಕ್​ ‘ಕಬೀರ್​ ಸಿಂಗ್​’ ಟೀಸರ್​ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಶಾಹಿದ್​ ಅಭಿಮಾನಿಗಳು ಅವರ ಅಭಿನಯಕ್ಕೆ ಮನಸೋತು ಮೆಚ್ಚುಗೆಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಶಾಹಿದ್​ ಅಭಿನಯಕ್ಕೆ ವಿಜಯ್​ ದೇವರಕೊಂಡ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ ಶಾಹಿದ್​ ಅಭಿಮಾನಿಯೊಬ್ಬರು ಈ ಟೀಸರ್​ ನೋಡಿ, ನಮ್ಮ ಶಾಹಿದ್​ ಅಷ್ಟು ಪ್ರತಿಭಾವಂತ ಅಲ್ಲ ನಿಮ್ಮ ಹೀರೋ ಎಂದು ವಿಜಯ್​ ದೇವರಕೊಂಡ ಅವರ ಬಗ್ಗೆ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುತ್ತಿರುವ ವಿಜಯ್​ ಅಭಿಮಾನಿಗಳು ಸಿಟ್ಟಿಗೆದ್ದಿದ್ದು, ಒರಿಜಿನಲ್​ ಸಿನಿಮಾವನ್ನು ನಿಮ್ಮ ಶಾಹಿದ್​ ಹಳ್ಳ ಹಿಡಿಸುತ್ತಿದ್ದಾರೆ. ವಿಜಯ್​ ಅಭಿನಯದ ಮುಂದೆ ಶಾಹಿದ್​ ಏನೂ ಅಲ್ಲ ಎಂದೆಲ್ಲ ಕಮೆಂಟ್​ ಮಾಡುತ್ತಿದ್ದಾರೆ.

ಕೇವಲ ಆಯಾ ಭಾಷೆಯ ಸಿನಿರಂಗಕ್ಕೆ ಸೀಮಿತವಾಗಿದ್ದ ಸ್ಟಾರ್​ ವಾರ್​ ಈಗ ಬೇರೆ ಮಟ್ಟಕ್ಕೆ ಹೋಗುತ್ತಿದೆ. ಇಲ್ಲೂ ಸಹ ವಿಜಯ್​ ದೇವರಕೊಂಡ ಹಾಗೂ ಕಬೀರ್​ ಖಾನ್​ ಸಿನಿಮಾದಲ್ಲಿ ಅಭಿನಯಿಸಿರುವ ಶಾಹಿದ್​ ಈ ಬಗ್ಗೆ ಎಲ್ಲೂ ಏನೂ ಮಾತನಾಡುತ್ತಿ್ಲ ಬದಲಾಗಿ ಇಬ್ಬರೂ ಚೆನ್ನಾಗಿಯೇ ಇದ್ದಾರೆ. ಹೀಗಿರುವಾಗ ಅವರ ಅಭಿಮಾನಿಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಒಬ್ಬರ ಮೇಲೆ ಒಬ್ಬರು ಕೆಸರೆರಚಾಡುತ್ತಿದ್ದಾರೆ.

Comments are closed.