ಕೋಲ್ಕತ್ತಾ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಪಂದ್ಯದಲ್ಲಿ ಸೋಲುತ್ತದೆ ಅನ್ನುವಷ್ಟರಲ್ಲಿ ಕೊನೆ ಕೊನೆಗೆ ಭರ್ಜರಿ ಬ್ಯಾಟಿಂಗ್ ಮಾಡಿ ಕೊನೆಯ ಓವರ್ ನಲ್ಲಿ ರೋಚಕ ಗೆಲುವು ಸಾಧಿಸಿ ಪುಟಿದೇಳುತ್ತದೆ. ಅದೇ ರೀತಿ ಮತ್ತೊಂದು ಭರ್ಜರಿ ಗೆಲುವನ್ನು ಚೆನ್ನೈ ಸಾಧಿಸಿದೆ.
ಕೊಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೊಲ್ಕತ್ತಾ ನೈಟ್ಸ್ ರೈಡರ್ಸ್ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿತ್ತು. 162 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇನ್ನು 2 ಎಸೆತ ಇರುವಂತೆ 162 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
ಕೋಲ್ಕತ್ತಾ ಪರ ಬ್ಯಾಟಿಂಗ್ ನಲ್ಲಿ ಲ್ಯಾನ್ 82, ರಾಣಾ 21, ದಿನೇಶ್ ಕಾರ್ತಿಕ್ 18 ಮತ್ತು ಶುಭ್ನಮ್ ಗಿಲ್ 15 ರನ್ ಬಾರಿಸಿದ್ದಾರೆ. ಚೆನ್ನೈ ಪರ ಬೌಲಿಂಗ್ ನಲ್ಲಿ ಇಮ್ರಾನ್ ತಾಹಿರ್ 4 ವಿಕೆಟ್, ಠಾಕೂರ್ 2 ಮತ್ತು ಸ್ಯಾನ್ಟರ್ 1 ವಿಕೆಟ್ ಪಡೆದಿದ್ದಾರೆ.
ಚೆನ್ನೈ ಪರ ಡುಪ್ಲೇಸಿಸ್ 24, ಕೇದಾರ್ ಜಾದವ್ 20, ಸುರೇಶ್ ರೈನಾ ಅಜೇಯ 58 ಮತ್ತು ರವೀಂದ್ರ ಜಡೇಜಾ ಅಜೇಯ 31 ರನ್ ಪೇರಿಸಿದ್ದಾರೆ.
ಕೋಲ್ಕತ್ತಾ ಪರ ಬೌಲಿಂಗ್ ನಲ್ಲಿ ನರೈನ್ 2, ಪಿಯೂಶ್ ಚಹಾಲ್ ತಲಾ 2 ಮತ್ತು ಗುನ್ರಿ 1 ವಿಕೆಟ್ ಪಡೆದಿದ್ದಾರೆ.
Comments are closed.