ಕರಾವಳಿ

ದ್ವಿತೀಯ ಪಿಯುಸಿ ಫಲಿತಾಂಶ: ಈ ಬಾರಿಯೂ ವಿದ್ಯಾರ್ಥಿನಿಯರೇ ಮೈಲುಗೈ; ಉಡುಪಿ ಪ್ರಥಮ, ಚಿತ್ರದುರ್ಗ ಕೊನೆ ಸ್ಥಾನ

Pinterest LinkedIn Tumblr

ಬೆಂಗಳೂರು: 2018-19ನೇ ಸಾಲಿನ ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ,ಶಿಖಾ ಮತ್ತು ಎಸ್,ಆರ್ ಉಮಾಶಂಕರ್ ಸುದ್ದಿಗೋಷ್ಠಿ ನಡೆಸಿ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದಾರೆ. ಫಲಿತಾಂಶವನ್ನು http://kseeb.kar.nic.in ವೆಬ್ ಸೈಟ್ ನಲ್ಲಿ ಪಡೆಯಬಹುದಾಗಿದೆ.

ಶೇ. 92.20 ಅಂಕಗಳನ್ನು ಗಳಿಸಿರುವ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶೇ.90.91 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ. ಕೊಡಗು ಶೇ. 83.31ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಶೇ.51.42 ಫಲಿತಾಂಶ ಪಡೆದಿರುವ ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ.

ರಾಜ್ಯದ 98 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಹಾಗೂ 80 ಕಾಲೇಜುಗಳಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. 4,17,573 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೇ ಈ ಬಾರಿ ಫಲಿತಾಂಶದಲ್ಲಿ ಏರಿಕೆಯಾಗಿದೆ ಎಂದು ಕಾರ್ಯದರ್ಶಿ ಎಸ್,ಆರ್ ಉಮಾಶಂಕರ್ ತಿಳಿಸಿದ್ದಾರೆ. ಈ ವರ್ಷವೂ ನಗರದ ಹುಡುಗರಿಗಿಂತ ಹಳ್ಳಿಯ ಹುಡುಗರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ ಶೇ.61.73ರಷ್ಟು ಫಲಿತಾಂಶ ಬಂದಿದೆ. ಶೇ.68.24ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶದಲ್ಲಿ ಏರಿಕೆಯಾಗಿದೆ.

ಮಾರ್ಚ್‌ 1ರಿಂದ 18ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 6.73 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.

ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?
1. ಉಡುಪಿ ಶೇ.92.20
2. ದಕ್ಷಿಣ ಕನ್ನಡ ಶೇ.90.91
3. ಕೊಡಗು ಶೇ.83.31
4. ಉತ್ತರ ಕನ್ನಡ 79.59
5. ಚಿಕ್ಕಮಗಳೂರು ಶೇ.76.42
6. ಹಾಸನ ಶೇ.75.19
7. ಬಾಗಲಕೋಟೆ 74.26
8. ಬೆಂಗಳೂರು ದಕ್ಷಿಣ ಶೇ.74.25
9. ಶಿವಮೊಗ್ಗ ಶೇ.73.54
10. ಬೆಂಗಳೂರು ಗ್ರಾಮಾಂತರ ಶೇ.72.91
11. ಬೆಂಗಳೂರು ಉತ್ತರ ಶೇ.72.68
12. ಚಾಮರಾಜನಗರ ಶೇ.72.67
13. ಚಿಕ್ಕಬಳ್ಳಾಪುರ ಶೇ.70.11
14. ವಿಜಯಪುರ ಶೇ.68.55
15. ಮೈಸೂರು ಶೇ.68.55
16. ಹಾವೇರಿ ಶೇ.68.40
17. ತುಮಕೂರು ಶೇ.65.81
18. ಕೋಲಾರ ಶೇ.65.19
19. ಬಳ್ಳಾರಿ ಶೇ.64.87
20. ಕೊಪ್ಪಳ ಶೇ.63.15
21. ಮಂಡ್ಯ ಶೇ.63.08
22. ದಾವಣಗೆರೆ ಶೇ.62.53
23. ಧಾರವಾಡ ಶೇ.62.49
24. ರಾಮನಗರ ಶೇ.62.08
25. ಚಿಕ್ಕೋಡಿ ಶೇ.60.86
26. ಗದಗ ಶೇ.56.76
27. ರಾಯಚೂರು ಶೇ.56.73
28. ಬೆಳಗಾವಿ ಶೇ.56.18
29. ಕಲಬುರಗಿ ಶೇ.56.09
30. ಬೀದರ್ ಶೇ.55.78
31. ಯಾದಗಿರಿ ಶೇ.53.02
32. ಚಿತ್ರದುರ್ಗ ಶೇ.51.42

Comments are closed.