ಕರ್ನಾಟಕ

ಮಲ್ಲಿಕಾರ್ಜುನ ಖರ್ಗೆ ಪ್ರಚಾರ ಸಭೆಯಲ್ಲಿ ಮೋದಿ ಪರ ಘೋಷಣೆ

Pinterest LinkedIn Tumblr


ಕಲಬುರಗಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ತುಕಡಿ ತುಕಡಿ ಮಾಡಿ ಕೊಂದರು ಎನ್ನುವ ಬದಲು ರಾಹುಲ್ ಗಾಂಧಿ ತುಕಡಿ ತುಕಡಿ ಮಾಡಿ ಕೊಂದರು ಎಂದು ಹೇಳಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಡವಟ್ಟು ಮಾಡಿಕೊಂಡಿದ್ದಾರೆ.

ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ದೇಶಕ್ಕಾಗಿ ಕಾಂಗ್ರೆಸ್ಸಿನ ಅನೇಕ ಜನ ಪ್ರಾಣ ಕೊಟ್ಟಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಗುಂಡಿಕಿ ಹತ್ಯೆ ಮಾಡಿದರು. ಬಳಿಕ ಅವರ ಪುತ್ರ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಹೇಳುವ ಬದಲು ರಾಹುಲ್ ಗಾಂಧಿ ತುಂಡು ತುಂಡಾಗಿ ಹತ್ಯೆ ಮಾಡಲಾಯಿತ್ತು ಅಂತಾ ಹೇಳುವ ಮೂಲಕ ಖರ್ಗೆ ಎಡವಟ್ಟು ಮಾಡಿಕೊಂಡಿದ್ದಾರೆ.

ಪ್ರಚಾರ ಸಭೆಯಲ್ಲಿ ಕೆಲ ಬಿಜೆಪಿ ಬೆಂಬಲಿಗರು ಮೋದಿ ಮೋದಿ ಅಂತ ಘೋಷಣೆ ಕೂಗಿದರು. ಇದಕ್ಕೆ ಭಾಷಣದ ಮೂಲಕ ಜವಾಬು ನೀಡಿದ ಮಲ್ಲಿಕಾರ್ಜುನ ಖರ್ಗೆ, ನೀವು ಮೋದಿ, ಮೋದಿ ಅಂತ ಕೂಗಿದರೆ ನಾನು ಹೆದರುವುದಿಲ್ಲ. ಹಿಂದೆಯೂ ಹೆದರಿಲ್ಲಾ, ಮುಂದೆಯೂ ಹೆದರಲ್ಲ. ನನ್ನ ವಿಚಾರ ನಾನು ಹೇಳುತ್ತೇನೆ. ಅದನ್ನು ತಗೆದುಕೊಳ್ಳವುದು ಬಿಡುವುದು ನಿಮಗೆ ಬಿಟ್ಟಿದ್ದು ಎಂದರು.

Comments are closed.