ಕರ್ನಾಟಕ

ಡಿಕೆಶಿಯಿಂದ ಸೋನಿಯಾ ರಾಜಕೀಯಕ್ಕೆ ಬಂದ ಕತೆ!

Pinterest LinkedIn Tumblr


ಧಾರವಾಡ: ಕುಂದಗೋಳ ವಿಧಾನಸಭೆ ಉಪಚುನಾವಣೆ ಅಭ್ಯರ್ಥಿ ಕುಸುಮಾ ಶಿವಳ್ಳಿ ಪ್ರಚಾರಾರ್ಥ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್ ಮಾತನಾಡಿದರು.

ಪಕ್ಷ ಕಷ್ಟದಲ್ಲಿ ಇದ್ದಾಗ ನಾವೆಲ್ಲ ಸೋನಿಯಾ ಗಾಂಧಿಯವರನ್ನು ಪಕ್ಷದ ನೇತೃತ್ವ ವಹಿಸಿಕೊಳ್ಳಲು ಕರೆದಿದ್ವಿ. ಕಾಡಿ ಬೇಡಿ ಕೇಳಿಕೊಂಡು ಮನವಿ ಮಾಡಿಕೊಂಡಿದ್ದೇವು. ಆಗ ಅವರು ದೇಶ ಮತ್ತು ಪಕ್ಷ ಉಳಿಸಲು ಸೋನಿಯಾ ಗಾಂಧಿ ಕಾಂಗ್ರೆಸ್ ಜವಾಬ್ದಾರಿ ವಹಿಸಿಕೊಂಡರು ಎಂದು ಸ್ಮರಿಸಿದರು.

ಹಾಗೆಯೇ ಕುಸುಮಾ ಶಿವಳ್ಳಿ ಕೂಡ ಹಾಗೆಯೇ ರಾಜಕೀಯಕ್ಕೆ ಬಂದಿದ್ದಾರೆ. ರಾಹುಲ್‌ ಗಾಂಧಿ ಆದಿಯಾಗಿ ನಾವೆಲ್ಲ ನಾಯಕರು ಕುಸುಮಾರನ್ನು ಕೇಳಿಕೊಂಡು ಚುನಾವಣೆಗೆ ನಿಲ್ಲಿಸಿದ್ದೇವೆ. ಸಿ.ಎಸ್. ಶಿವಳ್ಳಿ ಅವರು ಜನರ ಮೇಲಿಟ್ಟ ಪ್ರೇಮಕ್ಕಾಗಿ ಕುಸುಮಾ ಅವರು ರಾಜಕೀಯಕ್ಕೆ ಬಂದಿದ್ದಾರೆ. ನನ್ನ ಶಿವಳ್ಳಿ ಬಾಂಧವ್ಯ ಚೆನ್ನಾಗಿತ್ತು. ನಾನು ಏಕವಚನದಲ್ಲಿ ಶಿವಳ್ಳಿಗೆ ಮಾತನಾಡುತ್ತಿದ್ದೆ. ಶಿವಳ್ಳಿ ನಿಧನ ಆದಾಗ ನಾನು ಏನೂ ಮಾತನಾಡಿರಲಿಲ್ಲ. ಮಾತನಾಡುವ ದಿನ ಬರುತ್ತೇ ಆಗ ಮಾತನಾಡುವೆ ಎಂದಿದ್ದೇ. ಈಗ ಆ ಮಾತುಗಳನ್ನು ಆಡುವ ದಿನ ಬಂದಿದೆ ಎಂದು ಹೇಳಿದರು.

ಜನರ ಮಧ್ಯೆ ಇಂದು ನಾವು ಶಿವಳ್ಳಿ ಗುಣ ವೈಶಿಷ್ಟ್ಯ ತಿಳಿ ಹೇಳಿಬೇಕಿದೆ. ಕುಸುಮಾರ ನಾಮಪತ್ರ ಸಲ್ಲಿಕೆಗೆ ಬರಲು ಆಗದೇ ಇರೋದಕ್ಕೆ ತುಂಬಾ ನೋವಿದೆ. ಅಂದು ನಾನು ಕೋರ್ಟ್‌ನಲ್ಲಿ ಇರಬೇಕಾಗಿದ್ದರಿಂದ ಬರಲು ಆಗಲಿಲ್ಲ. ಐಟಿ‌ ಇಲಾಖೆಯಿಂದ ನನಗೆ ಏನೆಲ್ಲ ಆಗ್ತಾ ಇದೆ ಅಂತಾ ನಿಮಗೆ ಗೊತ್ತಿದೆ. ನಾಳೆ ಕೂಡ ನಾನು ಕೋರ್ಟ್ ನಲ್ಲಿ ಇರಬೇಕಿದೆ. ಆದರೆ ಮುಂದೆ ಎರಡು ದಿನ ನಾನು ಶಿವಳ್ಳಿ ಚುನಾವಣೆಗಾಗಿ ಅನುವು ಪಡೆದುಕೊಳ್ಳಲಿದ್ದೇನೆ ಎಂದರು.

ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿಗೆ ನಾನು ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಬಿಜೆಪಿ ನಾಯಕರೆಲ್ಲ ಶಿವಳ್ಳಿ ನಡತೆ ಬಗ್ಗೆ ಹೊಗಳಿದ್ದಾರೆ ಅದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿಗೆ ಕುಂದಗೋಳ ಕ್ಷೇತ್ರದಲ್ಲಿ ಮಾತನಾಡಲು ಏನೂ ಇಲ್ಲ. ಶಿವಳ್ಳಿ ನಾಯಕತ್ವದ ಬಗ್ಗೆ ಬಿಜೆಪಿ ನಾಯಕರು ಆಗಲೇ ಮಾತನಾಡಿದ್ದಾರೆ. ಮೂರು ತಿಂಗಳ ಹಿಂದೆ ಬಿಜೆಪಿ ನಾಯಕರು ಶಿವಳ್ಳಿಗೆ ಬಗ್ಗೆ ಮಾತನಾಡಿದ್ದರು ಆ ಮಾತಿಗೆ ತಾವು ಗೌರವ ಕೊಡಬೇಕು ಎಂದರು.

ಶಿವಳ್ಳಿ ವಿರುದ್ಧ ಮಾತನಾಡಲು ಏನೂ ಇಲ್ಲ. ಹೀಗಾಗಿ ಬಿಜೆಪಿ ಸ್ನೇಹಿತರಲ್ಲಿ ನಾನು ಬೇರೆ ಎಲೆಕ್ಷನ್ ಬಂದಾಗ ರಾಜಕೀಯ ಮಾಡೋಣ ಅಂತಾ ಕೇಳಿಕೊಳ್ಳುತ್ತೇನೆ. ಆದರೆ ಶಿವಳ್ಳಿ ಗೌರವಕ್ಕಾಗಿ ಇಲ್ಲಿ ಬಿಜೆಪಿ‌ ಸ್ನೇಹಿತರು ಸಹಕಾರ ನೀಡಬೇಕು. ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರಂಥವರನ್ನು ನೂರು ಜನರನ್ನು ತಯಾರ ಮಾಡಬಹುದು. ಆದರೆ ಮತ್ತೊಬ್ಬ ಶಿವಳ್ಳಿಯನ್ನು ತಯಾರ ಮಾಡಲು ಆಗುವುದಿಲ್ಲ ಎಂದರು.

ಬಿಜೆಪಿ ಮುಖಂಡರು 23ಕ್ಕೆ ಕುರ್ಚಿ ಬಂದು ಬಿಡ್ತು ಅಂತಾ ಹೇಳಿಕೊಳ್ಳುತ್ತಿದ್ದಾರೆ. ಆದರೆ ಕನಸಿನಲ್ಲಿಯೂ ಸರ್ಕಾರ ರಚಿಸಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ಮೋದಿಗೆ ವೋಟ್ ಕೇಳಿ ಅಂತಾ ಇದ್ದರು. ಇಲ್ಲಿ ಕುಂದಗೋಳದಲ್ಲಿ ಯಡಿಯೂರಪ್ಪ, ಶೆಟ್ಟರ್ ಹೆಸರು ಹೇಳಿ ವೋಟ್ ಕೇಳೋಕೆ ಆಗುವುದಿಲ್ಲ. ಮತ್ತೇನು ಚಿಕ್ಕನಗೌಡರ ಹೆಸರಿನಿಂದ ವೋಟ್ ಕೇಳ್ತಾರಾ? ಎಂದು ಪ್ರಶ್ನೆ ಮಾಡಿದರು.

ಚಿಕ್ಕನಗೌಡರ ಇಲ್ಲಿ ಚಿಕ್ಕದಾಗಿ ಇರಬೇಕು ಅಷ್ಟೇ. ನೆಂಟಸ್ಥನ ಮಾಡಿಕೊಂಡ ಬೇಕಾದ್ರೆ ಅವರು ಇರಲಿ. ಆದರೆ ವಿಧಾನಸಭೆಗೆ ನಮ್ಮ ಅಭ್ಯರ್ಥಿ ಕುಸುಮಾರೇ ಹೋಗಬೇಕು ಎಂದು ಹೇಳಿದರು.

Comments are closed.