ಉಡುಪಿ: ಕರಾವಳಿ ಕಾವಲು ಪೊಲೀಸ್ ಗುಪ್ತವಾರ್ತೆ ವಿಭಾಗದ ಹೆಡ್ ಕಾನ್ಸ್ಟೇಬಲ್ ಗಣೇಶ್.ಎನ್ ಇವರು , ಬೂಡೋಕಾನ್ ಕರಾಟೆ ಮತ್ತು ಸೆಲ್ಫ್ ಡಿಫೆನ್ಸ್ ಅಸೋಷಿಯೇಷನ್ ಆಫ್ ಇಂಡಿಯಾ ವತಿಯಿಂದ ಏಪ್ರಿಲ್ 27 ರಂದು ಉಡುಪಿಯಲ್ಲಿ ನಡೆಸಿದ ಕರಾಟೆ ಬ್ಲಾಕ್ ಬೆಲ್ಟ್ ಗ್ರೇಡಿಂಗ್ ಟೆಸ್ಟ್ನಲ್ಲಿ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುತ್ತಾರೆ.
ಇವರು ರಾಜ್ಯ ಕರಾಟೆ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶಿಹಾನ್ ಲಕ್ಷ್ಮೀನಾರಾಯಣ ಆಚಾರ್ಯರಿಂದ ತರಬೇತಿ ಪಡೆದಿರುತ್ತಾರೆ. ಇವರನ್ನು ಕರಾವಳಿ ಕಾವಲು ಪೊಲೀಸ್ ಮಲ್ಪೆ ಘಟಕದ ಪೊಲೀಸ್ ಅಧೀಕ್ಷಕ ಪ್ರಮೋದ್ ರಾವ್ ಎನ್.ಟಿ ಇವರು ಅಭಿನಂದಿಸಿದ್ದಾರೆ.
Comments are closed.